
ರಾಜ್‌ಕೋಟ್, (ಮಾರ್ಚ್ 12): ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ತನ್ನ ಎರಡನೇ ಮದುವೆಗೆ ವಿರೋಧಿಸಿದ್ದಕ್ಕೆ 76 ವರ್ಷದ ವ್ಯಕ್ತಿಯೊಬ್ಬರು 52 ವರ್ಷದ ಮಗನನ್ನು ಗುಂಡಿಕ್ಕಿ ಕೊಂದಿದ್ದಾರೆ. ಎನ್‌ಡಿಟಿವಿ ವರದಿಯ ಪ್ರಕಾರ, ಆರೋಪಿ ರಂಭಾಯಿ ಅಲಿಯಾಸ್ ರಾಮ್‌ಕುಭಾಯಿ ಬೋರಿಚಾ ಮಾರ್ಚ್ 9ರ ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ತನ್ನ ಮಗ ಪ್ರತಾಪ್ ಬೋರಿಚಾ ಜೊತೆ ತೀವ್ರ ವಾಗ್ವಾದ ನಡೆಸಿದ್ದಾರೆ. ತನ್ನ ತಂದೆ ಮರು ಮದುವೆ ಮಾಡಿಕೊಳ್ಳಲು ಪ್ರತಾಪ್ ಆಕ್ಷೇಪಿಸಿದ್ದರಿಂದ ಈ ಭಿನ್ನಾಭಿಪ್ರಾಯ ಉಂಟಾಗಿದೆ. ಕೋಪಗೊಂಡ ರಾಮ್‌ಭಾಯಿ ಬಂದೂಕನ್ನು ಹೊರತೆಗೆದು ತನ್ನ ಮಗನ ಮೇಲೆ ಎರಡು ಗುಂಡುಗಳನ್ನು ಹಾರಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದನು.
ಶಬ್ದ ಕೇಳಿ ಪಕ್ಕದ ಮನೆಯವರು ಬಂದು ನೋಡಿದಾಗ ರಾಮ್‌ಭಾಯಿ ತನ್ನ ಮಗನ ಮೃತದೇಹದ ಬಳಿ ಕುಳಿತಿದ್ದರು. ಆತನಿಗೆ ಯಾವುದೇ ಪಶ್ಚಾತ್ತಾಪವೂ ಇರಲಿಲ್ಲ. ಈ ಭಯಾನಕ ಕೃತ್ಯವು ಸ್ಥಳೀಯ ಸಮುದಾಯವನ್ನು ಆಘಾತಕ್ಕೆ ದೂಡಿದೆ. ಈ ಘಟನೆಯ ನಂತರ ಪ್ರತಾಪ್ ಅವರ ಪತ್ನಿ ಜಯಾ ಜಸ್ದಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಇದನ್ನೂ ಓದಿ: ಕಳ್ಳ ಮಗನ ಮೃತದೇಹ ಬೇಡವೆಂದು ಹೊರಟ ತಾಯಿ: ಬೆಂಗಳೂರಿನಲ್ಲೊಂದು ಕರುಣಾಜನಕ ಕಥೆ
ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡು, ಅದೇ ದಿನ ರಾಮ್‌ಭಾಯಿಯನ್ನು ಬಂಧಿಸಿದರು. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನಂತರ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:34 pm, Wed, 12 March 25