[lazy-load-videos-and-sticky-control id=”mAyoyV0is0k”]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ನಟಿ ರಾಗಿಣಿ ಮೇಲೆ ಪ್ರತ್ಯೇಕ FIR ಮಾಡಲಾಗಿದೆ. ರಾಗಿಣಿ ವಿರುದ್ಧ ಸೂಮೋಟೊ ಕೇಸ್ ದಾಖಲಿಸಿಕೊಂಡು ಸರ್ಚ್ ವಾರೆಂಟ್ ಪಡೆದು ನಟಿಯ ಮನೆ ಮೇಲೆ ದಾಳಿ ನಡೆಸಲಾಯಿತು ಎಂದು ತಿಳಿಸಿದರು. ಮನೆಯಲ್ಲಿ ರೇಡ್ ಮಾಡಿದ ವೇಳೆ ಏನೂ ಸಿಕ್ಕಿಲ್ಲ. ಹಾರ್ಡ್ ಡಿಸ್ಕ್, ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಸೀಜ್ ಮಾಡಿದ್ದೇವೆ ಎಂದು ಹೇಳಿದರು.
ರವಿಶಂಕರ್ ಹೇಳಿಕೆಯಲ್ಲಿ ಹಲವು ಮಾಹಿತಿ ಲಭ್ಯವಾಗಿತ್ತು. ಒಬ್ಬರು ಈವೆಂಟ್ ಆರ್ಗನೈಸ್ ಮಾಡಿದರೆ ಹಲವು ಪ್ರತಿಷ್ಠಿತರು ಭಾಗಿಯಾಗುತ್ತಿದ್ದರು. ಅದರಲ್ಲಿ ರಾಗಿಣಿ ಕೂಡಾ ಭಾಗಿಯಾದ ಬಗ್ಗೆ ಮಾಹಿತಿ ಇದೆ ಎಂದು ಕಮಲ್ ಪಂತ್ ತಿಳಿಸಿದರು.
CCB ಪೊಲೀಸರು 1 ತಿಂಗಳಿನಿಂದ ಡ್ರಗ್ಸ್ ಕುರಿತು ತನಿಖೆ ನಡೆಸುತ್ತಿದ್ದರು. ಈ ನಡುವೆ ಆರೋಪಿಗಳ ಮೊಬೈಲ್ನಿಂದ ನಮಗೆ ಮಾಹಿತಿ ಸಿಕ್ಕಿದೆ. ಚಿತ್ರರಂಗದಲ್ಲಿ ಹೆಚ್ಚಿನವರು ಸಂಪರ್ಕ ಹೊಂದಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೊಬೈಲ್ ವಶಕ್ಕೆ ಪಡೆದಾಗ ಸಾಕಷ್ಟು ಮಾಹಿತಿ ಸಿಕ್ಕಿದೆ. ಜೊತೆಗೆ, ನಿರತಂತರ ವಿಚಾರಣೆ ಬಳಿಕ ಕೆಲ ಅಂಶಗಳು ಬಯಲಿಗೆ ಬಂದಿದೆ. ಅವರು ಕೆಲವು ಸಮಯದಿಂದ ಪಾರ್ಟಿಗೆ ಹೋಗ್ತಾ ಇದ್ರು. ಪಾರ್ಟಿಗಳಲ್ಲಿ ಡ್ರಗ್ಸ್ ಬಳಕೆ ಮಾಡುತ್ತಿದ್ದರು ಎಂದು ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
Published On - 4:32 pm, Fri, 4 September 20