Fire Accident: ದೆಹಲಿಯ ಡೈರಿ ಫಾರ್ಮ್‌ನಲ್ಲಿ ಬೆಂಕಿ ದುರಂತ; 20ಕ್ಕೂ ಹೆಚ್ಚು ಹಸುಗಳು ಸಜೀವ ದಹನ

| Updated By: ಸುಷ್ಮಾ ಚಕ್ರೆ

Updated on: May 14, 2022 | 7:34 PM

ಬೆಂಕಿ ಹೊತ್ತಿಕೊಂಡ ಸ್ಥಳಕ್ಕೆ 7 ಅಗ್ನಿಶಾಮಕ ವಾಹನಗಳು ಆಗಮಿಸಿ, ಬೆಂಕಿ ಆರಿಸುವ ಪ್ರಯತ್ನ ಮಾಡಿದವು. ಆದರೆ, ಅಷ್ಟರಲ್ಲಾಗಲೇ 20ಕ್ಕೂ ಹೆಚ್ಚು ಹಸುಗಳು ಸಜೀವ ದಹನವಾಗಿದ್ದವು

Fire Accident: ದೆಹಲಿಯ ಡೈರಿ ಫಾರ್ಮ್‌ನಲ್ಲಿ ಬೆಂಕಿ ದುರಂತ; 20ಕ್ಕೂ ಹೆಚ್ಚು ಹಸುಗಳು ಸಜೀವ ದಹನ
ಹಸುಗಳು
Follow us on

ನವದೆಹಲಿ: ಡೈರಿ ಫಾರ್ಮ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 20 ಹಸುಗಳು ಸುಟ್ಟು ಕರಕಲಾದ ದುರಂತ ಘಟನೆ ದೆಹಲಿಯಲ್ಲಿ ಇಂದು ನಡೆದಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಫೋನ್ ಮಾಡಲಾಯಿತು. ಮಧ್ಯಾಹ್ನ 1.25ರ ಸುಮಾರಿಗೆ ರೋಹಿಣಿಯ ಸಾವ್ಡಾ ಗ್ರಾಮದ ಡೈರಿ ಫಾರ್ಮ್‌ಗೆ (Dairy Farm) ಬಂದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯೋನ್ಮುಖವಾದರು.

ಬೆಂಕಿ ಹೊತ್ತಿಕೊಂಡ ಸ್ಥಳಕ್ಕೆ 7 ಅಗ್ನಿಶಾಮಕ ವಾಹನಗಳು ಆಗಮಿಸಿ, ಬೆಂಕಿ ಆರಿಸುವ ಪ್ರಯತ್ನ ಮಾಡಿದವು. ಆದರೆ, ಅಷ್ಟರಲ್ಲಾಗಲೇ 20ಕ್ಕೂ ಹೆಚ್ಚು ಹಸುಗಳು ಸಜೀವ ದಹನವಾಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. (Source)

ಈ ಅಗ್ನಿ ಅವಘಡಕ್ಕೆ ಕಾರಣವೇನೆಂಬುದರ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ತಿಂಗಳು, ದೆಹಲಿಯ ಬಳಿಯ ಘಜಿಯಾಬಾದ್‌ನ ಇಂದಿರಾಪುರಂನ ಹಳ್ಳಿಯೊಂದರಲ್ಲಿ ಡಂಪ್‌ಯಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹತ್ತಿರದ ಗೋಶಾಲೆಗೆ ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ 38 ಹಸುಗಳು ಸಾವನ್ನಪ್ಪಿದ್ದವು. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಸುಮಾರು 150 ಹಸುಗಳಿದ್ದವು. ಇದೀಗ ಅದೇ ರೀತಿಯ ದುರಂತ ಮತ್ತೊಮ್ಮೆ ಸಂಭವಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ