ಹೊನ್ನಾವರದ ಗೇರುಸೊಪ್ಪಾ ಸರ್ಕಲ್ ಬಳಿ ವ್ಯಕ್ತಿ ಮೇಲೆ ಹರಿದ ಲಾರಿ, ಬೆಂಗಳೂರಿನಲ್ಲಿ ನಟೋರಿಯಸ್ ಕಳ್ಳನ ಬಂಧನ, ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ
ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಮೇಲೆ ಲಾರಿ ಹರಿದ ಪರಿಣಾಮ, ಲಾರಿ ಚಕ್ರದಡಿ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಕಾರವಾರ: ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಮೇಲೆ ಲಾರಿ ಹರಿದ ಪರಿಣಾಮ, ಲಾರಿ ಚಕ್ರದಡಿ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (Honnavar) ಗೇರುಸೊಪ್ಪಾ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ (National Highway) 66 ರಲ್ಲಿ ನಡೆದಿದೆ. ಸುಬ್ರಾಯ ಅಂಬಿಗ (45) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ಸುಬ್ರಾಯ ಅಂಬಿಗ ಐಸ್ ಕ್ರೀಮ್ ಫ್ಯಾಕ್ಟರಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿಕೊಂಡು ಬರುವಾಗ ಅವಘಡ ಸಂಭವಿಸಿದೆ. ವಿಷಯ ತಿಳಿದು ಪೊಲೀಸರು ದೌಡಾಯಿಸಿದ್ದು, ಸ್ಥಳ ಪರಿಶೀಲನೆ ಮಾಡಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ನಟೋರಿಯಸ್ ಕಳ್ಳನ ಬಂಧನ
ಬೆಂಗಳೂರು: ನಟೋರಿಯಸ್ ಕಳ್ಳ ಬರ್ನ್ ಸಿದ್ದಿಕಿಯನ್ನು ಪುಲಕೇಶಿ ನಗರ ಪೊಲೀಸರು ಬೆಂಗಳೂರಿನಲ್ಲಿ (Bengaluru) ಬಂಧಿಸಿದ್ದಾರೆ. ಆರೋಪಿಯಿಂದ ಪೊಲೀಸರು ಚಿನ್ನದ ಒಡವೆ, ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ವಿವಿಧ ಕೇಸ್ ಗಳಲ್ಲಿ ಮೋಸ್ಟ ವಾಂಟೆಡ್ ಕ್ರಮಿನಲ್ ಆಗಿದ್ದನು. ಆರೋಪಿ ಬರ್ನ್ ಸಿದ್ದಿಕಿ ಪುಲಕೇಶಿನಗರದಲ್ಲಿ ಬೈಕ್ ಕಳ್ಳತನ ಮಾಡಿದ್ದನು. ಕದ್ದ ಬೈಕ್ ಬಳಸಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದನು. ಈ ಹಿಂದೆ ಜೆ.ಸಿ.ನಗರದ ಸಿದ್ದಾರ್ಥ ಜ್ಯುವೆಲರಿಯಲ್ಲಿ ಕಳ್ಳತನ ಮಾಡಿದ್ದನು. ನಟೋರಿಯಸ್ ರಾಬರ್ ಸಿದ್ದಿಕಿ ಲಾಂಗ್ ಹಿಡಿದು ಒಂಟಿಯಾಗಿ ಬಂದು ಕಳವು ಮಾಡುತ್ತಿದ್ದನು.
ಈತನ ನಟೋರಿಯಸ್ ಅಟ್ಅಹಾಸ ನೋಡಿದರೆ ಒಂಟಿಯಾಗಿ ಅಂಗಡಿಯಲ್ಲಿ ಕೂರೊಕ್ಕೆ ಭಯವಾಗುತ್ತೆ. ಕಳೆದ ವಾರ ಡಿಯೋ ಬೈಕನಲ್ಲಿ ಬಂದು, ಜೆಸಿ ನಗರದ ಸಿದ್ದಾರ್ಥ ಜ್ಯುವೆಲರಿಯಲ್ಲಿ ರಾಬ್ರಿ ಮಾಡಿದ್ದನು. ಈ ವೇಳೆ ಅರೋಪಿ ಗಲ್ಲಕ್ಕೆ ಕೈ ಹಾಕುವಾಗ ಮಚ್ಚನ್ನೆ ಹಿಡಿದಿದ್ದನು. ಆರೋಪಿ ಬರ್ನ್ ಸಿದ್ದಿಕಿ ಕಳ್ಳತನ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ
ತುಮಕೂರು: ತುಮಕೂರು (Tumakuru) ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗಿನ ಜಾವ ವಿದ್ಯಾರ್ಥಿನಿ ತೇಜಾ(19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ತೇಜಾ ಪಾವಗಡದಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದರು. ವಿದ್ಯಾರ್ಥಿನಿ ತೇಜಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:41 am, Sun, 15 May 22