AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಮದರಸಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಕ್ಕೆ ಒತ್ತಾಯ; ಹಿಂದೂಪರ ಸಂಘಟನೆಗಳಿಂದ ಅಭಿಯಾನ ಶುರು

ಮದರಸಗಳಲ್ಲಿ ನಿತ್ಯ ರಾಷ್ಟ್ರಗೀತೆ ಹಾಡಲ್ಲ. ಹಮ್ದ್ ಹಾಗೂ ಸಲಾಂ ಪ್ರಾರ್ಥನೆ ಮಾತ್ರ ಮಾಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಗೀತೆ ಹಾಡಲಾಗುತ್ತದೆ ಎಂದು ಮದರಸಾಗಳು ಹೇಳುತ್ತಿವೆ.

ಕರ್ನಾಟಕ ಮದರಸಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಕ್ಕೆ ಒತ್ತಾಯ; ಹಿಂದೂಪರ ಸಂಘಟನೆಗಳಿಂದ ಅಭಿಯಾನ ಶುರು
ಸಾಂದರ್ಭಿಕ ಚಿತ್ರ
TV9 Web
| Updated By: sandhya thejappa|

Updated on:May 15, 2022 | 2:26 PM

Share

ಬೆಂಗಳೂರು: ರಾಜ್ಯದಲ್ಲಿ ಆಜಾನ್ ವಿವಾದ ಬೆನ್ನಲೆ ಹಿಂದೂಪರ ಸಂಘಟನೆಗಳು ಮತ್ತೊಂದು ಅಭಿಯಾನ ಶುರು ಮಾಡಿವೆ. ರಾಜ್ಯದ ಮದರಸಗಳಲ್ಲಿ (Madrasa) ರಾಷ್ಟ್ರಗೀತೆ (National Anthem) ಕಡ್ಡಾಯ ಮಾಡುವಂತೆ ಒತ್ತಾಯಿಸಿ ಅಭಿಯಾನ ಕೈಗೊಂಡಿದೆ. ಯುಪಿ ಮಾದರಿಯಲ್ಲಿ ಮದರಸಗಳಲ್ಲಿ ತರಗತಿಗೂ ಮುನ್ನ ರಾಷ್ಟ್ರಗೀತೆ ಹಾಡಬೇಕು. ಇದೇ ಮಾದರಿ ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿವೆ. ರಾಜ್ಯದಲ್ಲಿ 968 ಮದರಸಾಗಳು ಸರ್ಕಾರದ ಅನುದಾನ ಪಡೆಯುತಿದ್ದು, 394 ಮದರಸಾಗಳು ವಕ್ಫ್ ಬೋರ್ಡ್​ಗೆ ಸೇರ್ಪಡೆ ಆಗುತ್ತಿವೆ. ಇದನ್ನ ಹೊರತುಪಡಿಸಿ ಉಳಿದ ಮದರಸಾಗಳಿಗೆ ಅನ್ವಯ ಆಗುವಂತೆ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡುವಂತೆ ಆದೇಶ ಹೊರಡಿಸಬೇಕೆಂದು ಅಭಿಯಾನ ಕೈಗೊಂಡಿವೆ.

ಸದ್ಯ ಮದರಸಗಳಲ್ಲಿ ನಿತ್ಯ ರಾಷ್ಟ್ರಗೀತೆ ಹಾಡಲ್ಲ. ಹಮ್ದ್ ಹಾಗೂ ಸಲಾಂ ಪ್ರಾರ್ಥನೆ ಮಾತ್ರ ಮಾಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಗೀತೆ ಹಾಡಲಾಗುತ್ತದೆ ಎಂದು ಮದರಸಾಗಳು ಹೇಳುತ್ತಿವೆ. ಆದರೆ ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಆರೋಪ ಮಾಡುತ್ತಿರುವ ಹಿಂದೂಪರ ಸಂಘಟನೆಗಳು, ತರಗತಿ ಆರಂಭಕ್ಕೂ ಮುನ್ನಾ ರಾಷ್ಟ್ರಗೀತೆ ಗಾಯನ ಕಡ್ಡಾಯಕ್ಕೆ ಪಟ್ಟು ಬಿದ್ದಿವೆ.

ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಮಸೀದಿ ನಿರ್ವಹಣೆಗಾಗಿ ಉತ್ತರ ಪ್ರದೇಶ ಸರ್ಕಾರದ ಬೋರ್ಡ್ ಇದೆ. ಅನೇಕತೆಯಲ್ಲಿ ಏಕತೆಯನ್ನು ಬಿಂಬಿಸುವ ದೇಶ ಭಾರತ. ಅನೇಕ ಸಮಸ್ಯೆಗಳು ಬರುತ್ತವೆ. ಆದರೆ ಈ ಒಂದು ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಬೇಕಾಗುತ್ತದೆ. ಉತ್ತರ ಪ್ರದೇಶದಲ್ಲಿ ಮಾಡಿದ್ದಾರೆ ಅಂತ ಇಲ್ಲಿ ಗಡಿಬಿಡಿಯಲ್ಲಿ ಎನು ಮಾಡಲಿಕ್ಕೆ ಆಗಲ್ಲ. ಸಚಿವರ ಅಭಿಪ್ರಾಯ ಪಡೆದು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ
Image
ಯುವ ಪೀಳಿಗೆ ರಾಜಕೀಯವಾಗಿ ಬೆಳಯಲು ಈ ಚಿಂತನ ಶಿಬಿರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Image
Madhuri Dixit: ಮಾಧುರಿ ದೀಕ್ಷಿತ್ ಜನ್ಮದಿನ; 55ರ ಪ್ರಾಯದಲ್ಲೂ ಬೇಡಿಕೆ ಉಳಿಸಿಕೊಂಡ ನಟಿಯ ಆಸ್ತಿ ಮೌಲ್ಯ ಎಷ್ಟು?
Image
Petrol Price Today: ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ; ಬೆಂಗಳೂರಿನಲ್ಲಿ ಇಂಧನ ದರ ಹೀಗಿದೆ
Image
SRH vs KKR: 15 ಸೆಕೆಂಡ್​ಗಳ ನಂತರ ಡಿಆರ್​ಎಸ್​; ಮನವಿಯನ್ನು ಒಪ್ಪದ ಅಂಪೈರ್ ಜತೆ ರಿಂಕು ಸಿಂಗ್ ವಾಗ್ವಾದ​

ಬೆಳಗ್ಗೆ 5 ಗಂಟೆಗೆ ಆಜಾನ್ ಕೂಗದಿರಲು ನಿರ್ಧಾರ: ಮಸೀದಿಗಳಲ್ಲಿ ಬೆಳಗ್ಗೆ 5 ಗಂಟೆಗೆ ಆಜಾನ್ ಕೂಗದಿರಲು ನಗರದಲ್ಲಿ ನಿನ್ನೆ ನಡೆದ ಮುಸ್ಲಿಂ ಮುಖಂಡರ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಬೆಳಗ್ಗೆ 5 ಗಂಟೆಗೆ ಧ್ವನಿವರ್ಧಕಗಳಲ್ಲಿ ಆಜಾನ್ ಕೂಗದಂತೆ ಎಲ್ಲಾ ಮಸೀದಿ ಮುಸ್ಲಿಂ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ಟಿವಿ 9ಗೆ ಇಮಾಮ್‌ ಮೌಲಾನಾ ಮಕ್ಸೂದ್‌ ಇಮ್ರಾನ್‌ ರಶಾದಿ ಹೇಳಿಕೆ ನೀಡಿದ್ದಾರೆ. ಬೆಳಗ್ಗೆ 5 ಗಂಟೆ, 5.15, 5.30ಕ್ಕೆ ಮೈಕ್​​ನಲ್ಲಿ ಆಜಾನ್ ಕೂಗಬಾರದು. ಸರ್ಕಾರದ ನಿಯಮ ಪಾಲಿಸುವಂತೆ ಮೌಲಾನಾ ಮಕ್ಸೂದ್ ತಿಳಿಸಿದ್ದು, ಪೊಲೀಸರಿಂದ ಅನುಮತಿ ಪಡೆದು ಬೆಳಗ್ಗೆ 6 ಗಂಟೆಯ ಬಳಿಕ ಅಜಾನ್​ ಕೂಗಲು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ

CNG Price Hike: ಮತ್ತೆ ಸಿಎನ್​ಜಿ ದರ ಏರಿಕೆ, ಬೆಂಗಳೂರಿನಲ್ಲಿ 83 ಮುಟ್ಟಿದ ಸಿಎನ್​ಜಿ ದರ

Andrew Symonds: ಕ್ರಿಕೆಟ್ ಲೋಕಕ್ಕೆ ಮತ್ತೊಂದು ಆಘಾತ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆ್ಯಂಡ್ರ್ಯೂ ಸೈಮಂಡ್ಸ್‌ ನಿಧನ

Published On - 8:40 am, Sun, 15 May 22

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?