AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CNG Price Hike: ಮತ್ತೆ ಸಿಎನ್​ಜಿ ದರ ಏರಿಕೆ, ಬೆಂಗಳೂರಿನಲ್ಲಿ 83 ಮುಟ್ಟಿದ ಸಿಎನ್​ಜಿ ದರ

ಕಳೆದ ಅಕ್ಟೋಬರ್​ನಿಂದ ದೇಶದ ವಿವಿಧೆಡೆ ಸಿಎನ್​ಜಿ ದರ ನಿಯಮಿತವಾಗಿ ಹೆಚ್ಚಾಗುತ್ತಿದೆ.

CNG Price Hike: ಮತ್ತೆ ಸಿಎನ್​ಜಿ ದರ ಏರಿಕೆ, ಬೆಂಗಳೂರಿನಲ್ಲಿ 83 ಮುಟ್ಟಿದ ಸಿಎನ್​ಜಿ ದರ
ಸಿಎನ್​ಜಿ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:May 15, 2022 | 8:16 AM

Share

ದೆಹಲಿ: ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (Indraprastha Gas Limited – IGL) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಕಂಪ್ರೆಸ್ಡ್​ ನ್ಯಾಚುರಲ್ ಗ್ಯಾಸ್ (Compressed Natural Gas – CNG) ದರವನ್ನು ಪ್ರತಿ ಕೆಜಿಗೆ ₹ 2 ರೂಪಾಯಿಯಷ್ಟು ಹೆಚ್ಚಿಸಿದೆ. ಈ ಬೆಲೆ ಏರಿಕೆಯಿಂದಿಗೆ ದೆಹಲಿಯಲ್ಲಿ ಒಂದು ಕೆಜಿ ಸಿಎನ್​ಜಿ ಬೆಲೆ ₹ 73.61, ನೊಯ್ಡಾದಲ್ಲಿ ₹ 76.17 ಮತ್ತು ಗುರುಗ್ರಾಮದಲ್ಲಿ ₹ 81.94 ಆಗುತ್ತದೆ. ಬೆಂಗಳೂರಿನಲ್ಲಿ ಒಂದು ಕೆಜಿ ಸಿಎನ್​ಸಿ ಬೆಲೆ ₹ 83ಕ್ಕೆ ಮಾರಾಟವಾಗುತ್ತಿದೆ. ಮೇ ತಿಂಗಳಿನಿಂದ ಈಚೆಗೆ ಸಿಎನ್​ಜಿ ಬೆಲೆ ₹ 8ರಷ್ಟು ಹೆಚ್ಚಾಗಿದೆ.

ದೇಶದ ವಿವಿಧ ನಗರಗಳಲ್ಲಿಯೂ ಸಿಎನ್​ಜಿ ದರವನ್ನು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಹೆಚ್ಚಿಸಿದೆ. ರೇವಾರಿಯಲ್ಲಿ ₹ 84.07, ಕರ್ನಾಲ್​ನಲ್ಲಿ ₹ 82.27, ಕೈತಾಲ್​ನಲ್ಲಿ ₹ 85.40ಕ್ಕೆ ಒಂದು ಕೆಜಿ ಸಿಎನ್​ಜಿ ಸಿಗುತ್ತಿದೆ. ಕಾನ್​ಪುರ್, ಹಮಿರ್​ಪುರ್ ಮತ್ತು ಫತೇಪುರ್​ನಲ್ಲಿ ಸಿಎನ್​ಜಿ ದರ ₹ 83.88 ಇದ್ದರೆ, ಅಜ್ಮೇರ್, ಪಾಲಿ ಮತ್ತು ರಾಜಸಮಂದ್​ನಲ್ಲಿ ₹ 83.88ಕ್ಕೆ ಒಂದು ಕೆಜಿ ಸಿಎನ್​ಜಿ ಸಿಗುತ್ತಿದೆ.

ಕಳೆದ ಅಕ್ಟೋಬರ್​ನಿಂದ ದೇಶದ ವಿವಿಧೆಡೆ ಸಿಎನ್​ಜಿ ದರ ನಿಯಮಿತವಾಗಿ ಹೆಚ್ಚಾಗುತ್ತಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದರಗಳ ಹೆಚ್ಚಳಕ್ಕೆ ಅನುಗುಣವಾಗಿ ಸಿಎನ್​​ಜಿ ದರವೂ ಏರಿಳಿತ ಕಾಣುತ್ತಿದೆ.

ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಪೆಟ್ರೋಲ್ ದರ ಏರಿಕೆ ಕುರಿತು ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:16 am, Sun, 15 May 22

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ