AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವ ಪೀಳಿಗೆ ರಾಜಕೀಯವಾಗಿ ಬೆಳಯಲು ಈ ಚಿಂತನ ಶಿಬಿರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ನಮ್ಮ ಹೋರಾಟ ಹೇಗಿರಬೇಕು ಎಂದು ಚರ್ಚಿಸಿದ್ದೇವೆ. ಸದಸ್ಯ ನೊಂದಾಣಿಯಾಗದಿದ್ದರೆ ಪದಾಧಿಕಾರಿಯಿಂದ ವಜಾ ಮಾಡಲಾಗುತ್ತದೆ. ಈ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚಿಸಲಾಗುತ್ತಿದೆ.

ಯುವ ಪೀಳಿಗೆ ರಾಜಕೀಯವಾಗಿ ಬೆಳಯಲು ಈ ಚಿಂತನ ಶಿಬಿರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್Image Credit source: prajavani.net
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: May 15, 2022 | 8:29 AM

Share

ರಾಜಸ್ಥಾನ: ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ (Congress) ಚಿಂತನ ಶಿಬಿರ ನಡೆಯುತ್ತಿದೆ. ಸಭೆಯಲ್ಲಿ ಕರ್ನಾಟಕ ರಾಜ್ಯದ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಕರ್ನಾಟಕ ರಾಜ್ಯ ರಾಜಕಾರಣದ ಬಗ್ಗೆಯು ಗಂಭೀರ ಚರ್ಚೆಗಳು ನಡೆಯುತ್ತಿವೆ. ಈ ಚಿಂತನ ಶಿಬಿರದಲ್ಲಿ 2023ರ ವಿಧಾನಸಭಾ ಚುನಾವಣೆಯ ತಯಾರಿಯ ಬ್ಲೂ ಪ್ರಿಂಟ್ ನೀಡುವಂತೆ (KPCC) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ (DK Shivakumar) ಅವರಿಗೆ ಹೈಕಮಾಂಡ್ ಸೂಚನೆ ಕೂಡ ನೀಡಿದೆ. ಈ ಚಿಂತನ ಶಿಬಿರ ಕುರಿತಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಿವಿ 9 ಜೊತೆ ಮಾತನಾಡಿದ್ದಾರೆ. ಈ ಚಿಂತನ ಶಿಬಿರ ಹೊಸ ರೂಪ ತೆಗದುಕೊಂಡು ಹೋಗುತ್ತಿದೆ. ವಿದ್ಯಾರ್ಥಿಗಳು, ಮಹಿಳಾ, ಯುವ ಪೀಳಿಗೆಗೆ ರಾಜಕೀಯವಾಗಿ ಬೆಳಯಲು ಅವಕಾಶ ಕೊಡಲು ಚಿಂತನೆ ಮಾಡಲಾಗುತ್ತಿದೆ. ಈ ಬಗ್ಗೆ ಸೋನಿಯಾ, ಪ್ರಿಯಾಂಕ ಗಾಂಧಿ ಕೇಳುತ್ತಿದ್ದಾರೆ ಎಂದು ಹೇಳಿದರು.

ನಮ್ಮ ಹೋರಾಟ ಹೇಗಿರಬೇಕು ಎಂದು ಚರ್ಚಿಸಿದ್ದೇವೆ. ಸದಸ್ಯ ನೊಂದಾಣಿಯಾಗದಿದ್ದರೆ ಪದಾಧಿಕಾರಿಯಿಂದ ವಜಾ ಮಾಡಲಾಗುತ್ತದೆ. ಈ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚಿಸಲಾಗುತ್ತಿದೆ. ಇನ್ನೂ ಒಂದು ಫ್ಯಾಮಿಲಿ ಒಂದು ಟಿಕೆಟ್‌ಗೆ ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿದ್ದು, ಮೊದಲು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಬೇಕು. ನೇರವಾಗಿ ಫ್ಯಾಮಿಲಿಯಿಂದ ಬಂದ್ರೆ ಟಿಕೆಟ್ ಇಲ್ಲ. ನನ್ನ ತಮ್ಮ ಸಹ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾನೆ. ಸಿದ್ದರಾಮಯ್ಯ ನಾವು ಒಟ್ಟಾಗಿಯೇ ಹೋಗುತ್ತಿದ್ದೇವೆ. ನನ್ನ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯವಿಲ್ಲ. ಮೊದಲನಿಂದಲೂ ನಾವು ಒಟ್ಟಾಗಿಯೇ ಇದ್ದೇವೆ ಎಂದರು. ಇದೇ ವೇಳೆ, ಟ್ವೀಟ್​ ವಾರ್​ ಬಗ್ಗೆ ಮಾತನಾಡಿದ್ದು, ರಮ್ಯ ವಿರುದ್ದ ಯಾವ ಟ್ವೀಟ್ ಮಾಡದಂತೆ ಬೆಂಬಲಿಗರಿಗೆ ಸಲಹೆ ನೀಡಿದರು.

ಈಗಾಗಲೇ ವಿಧಾನಸಭಾವಾರು ಸಮೀಕ್ಷೆ ನಡೆಸಿರುವ ಕಾಂಗ್ರೆಸ್ ಹೈಕಮಾಂಡ್, ಈಗ ಕೆಪಿಸಿಸಿಯಿಂದಲೂ ಚುನಾವಣಾ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದೆ. ಸಭೆಯ ನಂತರ ಕಾಂಗ್ರೆಸ್ ಹಿರಿಯ ನಾಯಕರನ್ನು ಡಿಕೆಶಿ ಭೇಟಿಯಾಗಲಿದ್ದಾರೆ. ವರಿಷ್ಠರ ಭೇಟಿಯಲ್ಲಿ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹಾಗೇ ಸಮಯ ಸಿಕ್ಕರೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಭೇಟಿಯಾಗುವ ಸಾಧ್ಯತೆ ಇದೆ.

ಪಂಚರಾಜ್ಯ ರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ನಡೆಯುತ್ತಿರುವ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಇತರ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಂಬಿಕಾ ಸೋನಿ, ಸಲ್ಮಾನ್ ಖುರ್ಷಿದ್, ಅಜಯ್ ಮಾಕನ್, ಪ್ರಿಯಾಂಕಾ ಗಾಂಧಿ, ಪಿ ಚಿದಂಬರಂ, ಅಶೋಕ್ ಗೆಹ್ಲೋಟ್, ಅಧಿರಾಜನ್ ಚೌಧರಿ, ಜಿತೇಂದ್ರ ಭವಾರ್ ಸಿಂಗ್, ಡಾ. ಅಜೋಯ್ ಕುಮಾರ್, ದಿಗ್ವಿಜಯ್ ಸಿಂಗ್, ಆನಂದ್ ಶರ್ಮಾ, ಭೂಪೇಶ್ ಭಾಗೇಲ್, ತಾರಿಕ್ ಅನ್ವರ್ ಮತ್ತು ಹರೀಶ್ ರಾವತ್ ಸಭೆಗೆ ಆಗಮಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.