ರಾಮನಗರ: 2023ರ ಚುನಾವಣೆ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಬಿಗ್ ಫೈಟ್! ಡಿಕೆ ಶಿವಕುಮಾರ್ ಭಾವ ಶರತ್ ಚಂದ್ರ ಪಕ್ಷ ತೊರೆಯುವ ಸಾಧ್ಯತೆ

ಶರತ್ ಚಂದ್ರ ಕಳೆದ 10 ವರ್ಷಗಳಿಂದ ಚನ್ನಪಟ್ಟಣದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2023ರ ಚುನಾವಣೆಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಇದ್ದರು. ಚನ್ನಪಟ್ಟಣ ಕ್ಷೇತ್ರದಿಂದ ಸ್ವರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.

ರಾಮನಗರ: 2023ರ ಚುನಾವಣೆ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಬಿಗ್ ಫೈಟ್! ಡಿಕೆ ಶಿವಕುಮಾರ್ ಭಾವ ಶರತ್ ಚಂದ್ರ ಪಕ್ಷ ತೊರೆಯುವ ಸಾಧ್ಯತೆ
ಸಿಪಿ ಶರತ್ ಚಂದ್ರ
Follow us
TV9 Web
| Updated By: sandhya thejappa

Updated on:May 15, 2022 | 12:17 PM

ರಾಮನಗರ: ಜಿಲ್ಲಾ ಕಾಂಗ್ರೆಸ್​ನಲ್ಲಿ ಟಿಕೆಟ್​ಗಾಗಿ ಬಿಗ್ ಫೈಟ್ ನಡೆಯುತ್ತಿದ್ದು, ಪಕ್ಷದ ನಿರ್ಧಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಭಾವ ಸಿಪಿ ಶರತ್ ಚಂದ್ರ (Sharath Chandra) ಸಿಡಿದೆದ್ದಿದ್ದಾರೆ. ಶರತ್ ಚಂದ್ರ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಕುಟುಂಬಸ್ಥರಿಗೆ ಟಿಕೆಟ್ ನೀಡಲ್ಲ ಅಂತ ಡಿಕೆ ಸುರೇಶ್ ತಿಳಿಸಿದ್ದಾರೆ. ಚನ್ನಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಸುರೇಶ್ ಹೇಳಿಕೆಗೆ ಶರತ್ ಚಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಶರತ್ ಚಂದ್ರ, ನಮ್ಮ ಭಾವ ಆಗಿರುವುದರಿಂದ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ಸುರೇಶ್ ಹೇಳಿದ್ದಾರೆ. ಕಳಂಕ ಬರುತ್ತದೆ ಎಂದು ಟಿಕೆಟ್ ನೀಡುವುದಿಲ್ಲ ಎಂದಿದ್ದಾರೆ. ಈ ತೀರ್ಮಾನದಿಂದ ನನಗೆ ನೋವಾಗಿದೆ ಎಂದು ತಿಳಿಸಿದರು.

ಶರತ್ ಚಂದ್ರ ಕಳೆದ 10 ವರ್ಷಗಳಿಂದ ಚನ್ನಪಟ್ಟಣದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2023ರ ಚುನಾವಣೆಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಇದ್ದರು. ಚನ್ನಪಟ್ಟಣ ಕ್ಷೇತ್ರದಿಂದ ಸ್ವರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. 2018ರ ಚುನಾವಣೆಯಲ್ಲಿ ಸ್ವರ್ಧೆಸಲು ತಯಾರಿ ನಡೆಸಿದ್ದರು. ಆದರೆ ಕೊನೆಗಳಿಗೆಯಲ್ಲಿ ಹೆಚ್ಎಂ ರೇವಣ್ಣರನ್ನ ಕಣಕ್ಕೆ ಇಳಿಸಲಾಗಿತ್ತು. ಆದರೆ ಈ ಬಾರಿಯೂ ಟಿಕೆಟ್ ನೀಡಲು ಆಗಲ್ಲ ಎಂದು ಸುರೇಶ್ ಹೇಳಿದ್ದಕ್ಕೆ ಶರತ್ ಚಂದ್ರ ಬೇಸರ ಹೊರಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ತೊರೆದು ಬೇರೆ ಪಕ್ಷದತ್ತ ಹೋಗಲು ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.

ಕಳೆದ ಹತ್ತು ವರ್ಷದಿಂದ ಚನ್ನಪಟ್ಟಣದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ ಎಂದು ಟಿವಿ9ಗೆ ತಿಳಿಸಿದ ಶರತ್, ಯೋಗೇಶ್ವರ್ ಪಕ್ಷದಿಂದ ಹೋದಾಗ ಜನ ನೀವೇ ಅಭ್ಯರ್ಥಿ ಆಗಬೇಕು ಎಂದು ಒತ್ತಾಯ ಮಾಡಿದ್ದರು. ನಾನು ಕೂಡ ಸಿದ್ದನಿದ್ದೆ. ಆದರೆ ನನ್ನನ್ನ ಎಐಸಿಸಿಗೆ ಕಳುಹಿಸಿದ್ದರು. ನನಗೆ ಟಿಕೆಟ್ ಸಿಗಲಿಲ್ಲ. ಹೊರಗಿನಿಂದ ಹೆಚ್ಎಮ್ ರೇವಣ್ಣ ಅವರನ್ನ ಕರೆತಂದು ಅಭ್ಯರ್ಥಿ ಮಾಡಿದ್ದರು. ಆದರು ಪಕ್ಷ ಸಂಘಟನೆ ಮಾಡುತ್ತಿದ್ದೆ. ನನ್ನ ನಡುವಳಿಕೆ ನೋಡಿ ಜನ ಇಷ್ಟ ಪಡುತ್ತಿದ್ದಾರೆ. ನನಗೆ ಟಿಕೆಟ್ ನೀಡಲು ಸ್ಥಳೀಯವಾಗಿ ಯಾರು ವಿರೋಧ ವ್ಯಕ್ತಪಡಿಸುತ್ತಿಲ್ಲ. ನಾನು ಜನರ ಹತ್ತಿರ ಇರಬೇಕು ಎಂಬ ಆಸೆ ಇದೆ. ಕಾರ್ಯಕರ್ತರ ಅಭಿಪ್ರಾಯ ತಿಳಿದು ನನ್ನ ಮುಂದಿನ ನಡೆ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ
Image
ಟಿಸಿಎಸ್​ ವಿಶ್ವ 10ಕೆ ಓಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ: 19 ಸಾವಿರಕ್ಕಿಂತ ಹೆಚ್ಚು ಅಥ್ಲೀಟ್​ಗಳು ಭಾಗಿ
Image
ಶಂಕರ್ ​ನಾಗ್​ ನಿಧನರಾದಾಗ ಅಂತ್ಯಸಂಸ್ಕಾರಕ್ಕೆ ಬರಲು ಮಾಸ್ಟರ್​ ಮಂಜುನಾಥ್​ಗೆ ಸಾಧ್ಯವಾಗಲಿಲ್ಲ; ಕಾರಣ ಏನು?
Image
ಹೊನ್ನಾವರದ ಗೇರುಸೊಪ್ಪಾ ಸರ್ಕಲ್ ಬಳಿ ವ್ಯಕ್ತಿ ಮೇಲೆ ಹರಿದ ಲಾರಿ, ಬೆಂಗಳೂರಿನಲ್ಲಿ ನಟೋರಿಯಸ್ ಕಳ್ಳನ ಬಂಧನ, ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ
Image
Literature: ಅನುಸಂಧಾನ; ನಾನು ಎನ್ನುವುದು ನಿಜಕ್ಕೂ ಇದೆಯೆ?

ರೇಸ್​ನಲ್ಲಿ ಹಲವು ಅಭ್ಯರ್ಥಿಗಳು: ಕಾಂಗ್ರೆಸ್​ನಲ್ಲಿ ಎರಡು ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗಿದೆ. ಮಾಜಿ ವಿಪಕ್ಷ ನಾಯಕರ ಎಸ್ ಆರ್ ಪಾಟೀಲ್ ಮತ್ತೆ ಟಿಕೆಟ್ ಕೇಳುತ್ತಿದ್ದಾರೆ ಕಳೆದ ಬಾರಿ ಕೈತಪ್ಪಿದ ಹಿನ್ನೆಲೆ ಈ ಬಾರಿ ಟಿಕೆಟ್​ಗೆ ಬೇಡಿಕೆ ಇಟ್ಟಿದ್ದಾರೆ. ಎಸ್​ಆರ್ ಪಾಟೀಲ್ ಜೊತೆ ಬಿಎಲ್ ಶಂಕರ್, ವಿಆರ್ ಸುದರ್ಶನ್ ಹೆಸರು ಸಹ ರೇಸ್ ನಲ್ಲಿದೆ. ನಿವೇದಿತ್ ಆಳ್ವಾ, ಎಂಸಿ ವೇಣುಗೋಪಾಲ್, ಪುಷ್ಪ ಅಮರನಾಥ್ ಸೇರಿದಂತೆ ಹಲವರಿಂದ ಲಾಬಿ ನಡೆಯುತ್ತಿದೆ. ಕೆಲ ನಾಯಕರು ಹೈಕಮಾಂಡ್ ಬಾಗಿಲು ತಟ್ಟುತ್ತಿದ್ದಾರೆ. ಉದಯಪುರ ಶಿಬಿರ ಮುಗಿಸಿ ಬೆಂಗಳೂರಿಗೆ ವಾಪಸ್ ಆದ ಬಳಿಕ ಟಿಕೆಟ್ ಬಗ್ಗೆ ಚರ್ಚೆ ನಡೆಯುತ್ತದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:34 am, Sun, 15 May 22