SRH vs KKR: 15 ಸೆಕೆಂಡ್ಗಳ ನಂತರ ಡಿಆರ್ಎಸ್; ಮನವಿಯನ್ನು ಒಪ್ಪದ ಅಂಪೈರ್ ಜತೆ ರಿಂಕು ಸಿಂಗ್ ವಾಗ್ವಾದ
IPL 2022 | Rinku Singh: ಈ ಪ್ರಕರಣದ ನಡೆಯುವಾಗ ರಿವ್ಯೂ ಸಲ್ಲಿಸಬೇಕಿದ್ದ ರಿಂಕು ಸಿಂಗ್ ಟೈಮರ್ ತೋರಿಸುವ ಸ್ಕ್ರೀನ್ಗೆ ವಿರುದ್ಧವಾಗಿ ಮುಖ ಮಾಡಿ ನಿಂತಿದ್ದರು. ಸ್ಯಾಮ್ ಬಿಲ್ಲಿಂಗ್ಸ್ ಟೈಮರ್ ಕಡೆ ಮುಖಮಾಡಿದ್ದರು. ಆದರೆ ಚರ್ಚೆಯ ವೇಳೆ ಅವರು ಸಮಯ ಮೀರುತ್ತಿರುವುದನ್ನು ಗಮನಿಸಲಿಲ್ಲ!
ಕೋಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ಸನ್ರೈಸರ್ಸ್ ಹೈದರಾಬಾದ್ (SRH) ನಡುವೆ ಶನಿವಾರ ನಡೆದ ಪಂದ್ಯವು ವಿವಾದಕ್ಕೆ ಸಾಕ್ಷಿಯಾಗಿದೆ. 12ನೇ ಓವರ್ನ ಮೂರನೇ ಎಸೆತದಲ್ಲಿ ಎಸ್ಆರ್ಹೆಚ್ನ ಎಡಗೈ ವೇಗಿ ಟಿ.ನಟರಾಜನ್ (T Natarajan) ಕೆಕೆಆರ್ನ ಬ್ಯಾಟರ್ ರಿಂಕು ಸಿಂಗ್ರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. ಈ ಸಂದರ್ಭದಲ್ಲಿ ರಿಂಕು ಸಿಂಗ್ (Rinku Singh) ನಾನ್ ಸ್ಟ್ರೈಕರ್ನಲ್ಲಿದ್ದ ಸ್ಯಾಮ್ ಬಿಲ್ಲಿಂಗ್ಸ್ ನೆರವನ್ನು ಕೇಳಿದರು. ಈರ್ವರೂ ಪರಸ್ಪರ ಸಂವಾದ ನಡೆಸಿ ಅಂಪೈರ್ ಮನವಿಯ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದರು. ಆದರೆ ಅಂಪೈರ್ ಇದನ್ನು ಒಪ್ಪಲಿಲ್ಲ. ಕಾರಣ, ಅದಾಗಲೇ ಡಿಆರ್ಎಸ್ ಮನವಿಗೆ ಸಲ್ಲಿಸಲು ನಿಗದಿಯಾಗಿರುವ 15 ಸೆಕೆಂಡ್ಗಳ ಕಾಲಾವಕಾಶ ಮುಗಿದಿತ್ತು. ಇದರಿಂದ ನಿರಾಶೆಗೊಂಡ ಕೆಕೆಆರ್ ಬ್ಯಾಟರ್ಗಳು ಅಂಪೈರ್ ಬಳಿ ವಾಗ್ವಾದ ನಡೆಸಿದರು.
ಈ ಪ್ರಕರಣದ ನಡೆಯುವಾಗ ರಿವ್ಯೂ ಸಲ್ಲಿಸಬೇಕಿದ್ದ ರಿಂಕು ಸಿಂಗ್ ಟೈಮರ್ ತೋರಿಸುವ ಸ್ಕ್ರೀನ್ಗೆ ವಿರುದ್ಧವಾಗಿ ಮುಖ ಮಾಡಿ ನಿಂತಿದ್ದರು. ಸ್ಯಾಮ್ ಬಿಲ್ಲಿಂಗ್ಸ್ ಟೈಮರ್ ಕಡೆ ಮುಖಮಾಡಿದ್ದರು. ಆದರೆ ಚರ್ಚೆಯ ವೇಳೆ ಅವರು ಸಮಯ ಮೀರುತ್ತಿರುವುದನ್ನು ಗಮನಿಸಲಿಲ್ಲ. ಹೀಗಾಗಿ ಈರ್ವರೂ ರಿವ್ಯೂ ಸಲ್ಲಿಸಲು ನಿರ್ಧರಿಸಿ ಮನವಿ ಸಲ್ಲಿಸುವ ವೇಳೆಗೆ ಅದಾಗಲೇ ಸಮಯ ಮುಗಿದಿತ್ತು. ಅಂಪೈರ್ ಆಟಗಾರರ ಬಳಿ ತೆರಳಿ ಅವರಿಗೆ ಸಮಯ ಮುಗಿದಿರುವುದನ್ನು ತಿಳಿಸಿದರು. ಇದರಿಂದ ನಿರಾಶೆಗೊಂಡ ಬ್ಯಾಟರ್ಗಳ ಅಂಪೈರ್ ನಡುವೆ ಒಂದೆರಡು ಮಾತುಗಳನ್ನಾಡಿದರು. ಆದರೆ ನಿಯಮದ ಪ್ರಕಾರ ರಿಂಕು ಸಿಂಗ್ ಪೆವಿಲಿಯನ್ ಕಡೆ ಹೆಜ್ಜೆಹಾಕಲೇಬೇಕಾಯಿತು.
ಅಚ್ಚರಿಯ ವಿಚಾರವೆಂದರೆ ಒಂದು ವೇಳೆ ರಿಂಕು ಸಿಂಗ್ ರಿವ್ಯೂ ಮಾಡಿದ್ದರೂ ಕೂಡ ಅದು ಅವರ ಪರವಾಗೇನೂ ಇರಲಿಲ್ಲ! ಮೈದಾನದಲ್ಲಿರುವ ಅಂಪೈರ್ ನಿರ್ಧಾರ ಸರಿಯಾಗಿತ್ತು. ಒಂದು ವೇಳೆ ಬ್ಯಾಟರ್ ಸರಿಯಾದ ಸಮಯಕ್ಕೆ ರಿವ್ಯೂ ಮಾಡಿದ್ದರೂ ಕೂಡ ಆ ರಿವ್ಯೂವನ್ನು ಕೆಕೆಆರ್ ಕಳೆದುಕೊಳ್ಳುತ್ತಿತ್ತು. ರಿಂಕು ಸಿಂಗ್ 6 ಎಸೆತಗಳಲ್ಲಿ 5 ರನ್ ಗಳಿಸಿದ್ದರು. ನಂತರ ಅವರು ಭಾರವಾದ ಹೆಜ್ಜೆಗಳನ್ನಿಟ್ಟು ಪೆವಿಲಿಯನ್ ಕಡೆ ತೆರಳಿದರು. ಇದರಿಂದ ಕೆಕೆಆರ್ 94 ರನ್ಗಳೊಂದಿಗೆ 5 ವಿಕೆಟ್ ಕಳೆದುಕೊಂಡಂತಾಗಿತ್ತು.
ರಿಂಕು ಸಿಂಗ್ ರಿವ್ಯೂ ಮಾಡಿದ ಸಂದರ್ಭದ ವಿಡಿಯೋ:
— Aditya Kukalyekar (@adikukalyekar) May 14, 2022
— Aditya Kukalyekar (@adikukalyekar) May 14, 2022
ಕೆಕೆಆರ್ಗೆ ಆಸರೆಯಾಗಿದ್ದು ಭರ್ಜರಿಯಾಗಿ ಬ್ಯಾಟ್ ಬೀಸಿದ ಕೆರೆಬಿಯನ್ ದೈತ್ಯ ಆಂಡ್ರ್ಯೂ ರಸೆಲ್. ಅವರು 28 ಎಸೆತಗಳಲ್ಲಿ 49 ರನ್ ಸಿಡಿಸಿತಂಡದ ಮೊತ್ತವನ್ನು 177 ರನ್ಗಳಿಗೆ ಏರಿಸಿದರು. ಬಿಲ್ಲಿಂಗ್ಸ್ 29 ಎಸೆತಗಳಲ್ಲಿ 34 ರನ್ಗಳಿಸಿ ತಂಡಕ್ಕೆ ಆಧಾರವಾದರು.
ಕೆಕೆಆರ್ ನೀಡಿದ 177 ರನ್ಗಳ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ಶರಣಾಯಿತು. 54 ರನ್ಗಳ ಜಯ ಸಾಧಿಸಿದ ಕೆಕೆಆರ್ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.
ಮತ್ತಷ್ಟು ಐಪಿಎಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 am, Sun, 15 May 22