KKR vs SRH IPL Match Result: ರಸೆಲ್ ಅಬ್ಬರಕ್ಕೆ ಮಂಕಾದ ಹೈದರಾಬಾದ್; ಕೆಕೆಆರ್ ಪ್ಲೇ ಆಫ್ ಕನಸು ಜೀವಂತ

KKR vs SRH IPL Match Result: ಶನಿವಾರ ಪುಣೆಯಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ 54 ರನ್ ಗಳ ಜಯ ಸಾಧಿಸಿತು.

KKR vs SRH IPL Match Result: ರಸೆಲ್ ಅಬ್ಬರಕ್ಕೆ ಮಂಕಾದ ಹೈದರಾಬಾದ್; ಕೆಕೆಆರ್ ಪ್ಲೇ ಆಫ್ ಕನಸು ಜೀವಂತ
ಆಂಡ್ರೆ ರಸೆಲ್
Follow us
TV9 Web
| Updated By: ಪೃಥ್ವಿಶಂಕರ

Updated on:May 14, 2022 | 11:41 PM

ಐಪಿಎಲ್ 2022 (IPL 2022) ಕೊನೆಯ ಹಂತಕ್ಕೆ ತಲುಪುತ್ತಿದ್ದು, ಕಳೆದ ಬಾರಿಯಂತೆಯೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತನ್ನ ಪೂರ್ಣ ಸಾಮರ್ಥ್ಯದ ಪ್ರದರ್ಶನವನ್ನು ಪ್ರಾರಂಭಿಸಿದೆ. ಪ್ಲೇಆಫ್ ರೇಸ್​ನಲ್ಲಿ ಪ್ರತಿ ಪಂದ್ಯಕ್ಕೂ ಮಾಡು ಇಲ್ಲವೇ ಮಡಿ ಎನ್ನುವ ಪರಿಸ್ಥಿತಿ ಎದುರಿಸುತ್ತಿರುವ ಕೋಲ್ಕತ್ತಾ ಕೊನೆಯ ಪಂದ್ಯದವರೆಗೂ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶನಿವಾರ ಪುಣೆಯಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ 54 ರನ್ ಗಳ ಜಯ ಸಾಧಿಸಿತು. ಸ್ಟಾರ್ ಆಲ್ ರೌಂಡರ್ ಆಂಡ್ರೆ ರಸೆಲ್ (Andre Russell) ನಿಜವಾದ ಅರ್ಥದಲ್ಲಿ ಆಲ್ ರೌಂಡರ್ ಆಟ ಪ್ರದರ್ಶಿಸಿದರು. ಏಕಾಂಗಿಯಾಗಿ ಹೈದರಾಬಾದ್ ತಂಡವನ್ನು ಪಂದ್ಯದಿಂದ ಹೊರಕ್ಕೆ ಕರೆದೊಯ್ದು, ತಂಡಕ್ಕೆ ಸತತ ಎರಡನೇ ಜಯವನ್ನು ನೀಡಿದರು.

ಎಂಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿತ್ತು.ಆದರೆ ಕೋಲ್ಕತ್ತಾಗೆ ಇದೇ ಕೊನೆಯ ಅವಕಾಶವಾಗಿತ್ತು. ಇದಕ್ಕೂ ಮುನ್ನ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಕೋಲ್ಕತ್ತಾ ಇದೇ ರೀತಿಯ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದ್ದು, ಅಲ್ಲಿಯೂ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ಅದೇ ಆಟವನ್ನು, ಕೋಲ್ಕತ್ತಾ ಈ ಬಾರಿಯೂ ಪುನರಾವರ್ತಿಸಿತು. ಹೆಣಗಾಡುತ್ತಿರುವ ಹೈದರಾಬಾದ್ ವಿರುದ್ಧ, ಮೊದಲು 177 ರನ್‌ಗಳ ಪ್ರಬಲ ಸ್ಕೋರ್ ಗಳಿಸಿತು ಮತ್ತು ನಂತರ SRH ಅನ್ನು ಕೇವಲ 123 ರನ್‌ಗಳಿಗೆ ನಿಲ್ಲಿಸಿತು.

ಹೈದರಾಬಾದ್ ಇನ್ನಿಂಗ್ಸ್ ಹೈದರಾಬಾದ್ ಇನ್ನಿಂಗ್ಸ್ ಆರಂಭದಲ್ಲಿ ವೇಗ ಪಡೆದುಕೊಂಡಿದ್ದು, ಕೆಕೆಆರ್‌ನ ಬಲಿಷ್ಠ ಬೌಲಿಂಗ್ ಅನ್ನು ಏಕಾಂಗಿಯಾಗಿ ಎದುರಿಸಿದ ಹೆಗ್ಗಳಿಕೆ ಅಭಿಷೇಕ್ ಶರ್ಮಾಗೆ ಸಲ್ಲಬೇಕು. ಅವರ ಜೊತೆಗಾರ ನಾಯಕ ಕೆನ್ ವಿಲಿಯಮ್ಸ್ ಮತ್ತು ರಾಹುಲ್ ತ್ರಿಪಾಠಿ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಹೀಗಾಗಿ 9 ನೇ ಓವರ್‌ನಲ್ಲಿ ಎರಡೂ ವಿಕೆಟ್‌ಗಳು 54 ರನ್‌ಗಳಿಗೆ ಪತನಗೊಂಡವು. ನಂತರ 12ನೇ ಓವರ್‌ನಲ್ಲಿ 72 ರನ್ ಗಳಿಸಿದ್ದಾಗ ವರುಣ್ ಚಕ್ರವರ್ತಿ ಅಭಿಷೇಕ್ (43 ರನ್, 28 ಎಸೆತ) ಅವರ ಉತ್ತಮ ಇನಿಂಗ್ಸ್‌ಗೆ ಅಂತ್ಯ ಹಾಡಿದರು.

ಇದನ್ನೂ ಓದಿ
Image
DC vs SRH IPL 2022 Head To Head: ಎರಡು ತಂಡಗಳಿಗೂ ಗೆಲುವು ಅಗತ್ಯ; ಇಬ್ಬರ ಮುಖಾಮುಖಿ ವರದಿ ಹೀಗಿದೆ
Image
Wriddhiman Saha: ಬಿಸಿಸಿಐ ಕೇಳಿದರೆ ನಾನು ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ: ಸಾಹಾರಿಂದ ಮತ್ತೊಂದು ಬಾಂಬ್
Image
Wriddhiman Saha: ನಿವೃತ್ತಿ ನೀಡು ಎಂದು ದ್ರಾವಿಡ್ ಸೂಚಿಸಿದರು: ತಂಡದಿಂದ ಕೈಬಿಟ್ಟ ಬೆನ್ನಲ್ಲೇ ಸಾಹ ಶಾಕಿಂಗ್ ಹೇಳಿಕೆ

ಏಡನ್ ಮಾರ್ಕ್ರಾಮ್ (32 ರನ್, 25 ಎಸೆತಗಳು) ಕೆಲವು ಆಕರ್ಷಕ ಹೊಡೆತಗಳನ್ನು ಬಾರಿಸಿದರು, ಆದರೆ 15 ನೇ ಓವರ್‌ನಲ್ಲಿ ಅವರ ವಿಕೆಟ್ ಪತನದೊಂದಿಗೆ ಎಲ್ಲಾ ಭರವಸೆಗಳು ಸುಳ್ಳಾದವು. ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್ ಮತ್ತು ಶಶಾಂಕ್ ಸಿಂಗ್ ಕೂಡ ಏನೂ ಮಾಡಲಾಗಲಿಲ್ಲ. ಕೋಲ್ಕತ್ತಾ ತಂಡವನ್ನು ಬ್ಯಾಟ್‌ನಿಂದ ಪಾರು ಮಾಡಿದ ರಸೆಲ್ (3/22) ಚೆಂಡಿನಲ್ಲೂ ಅದ್ಭುತ ಪ್ರದರ್ಶನ ನೀಡಿ ತಂಡದ ಯಶಸ್ವಿ ಬೌಲರ್ ಎನಿಸಿಕೊಂಡರು. ಇವರಲ್ಲದೆ ಟಿಮ್ ಸೌಥಿ (2/23) ಕೂಡ ಅದ್ಭುತ ಬೌಲಿಂಗ್ ಮಾಡಿದರು.

ಕೆಕೆಆರ್ ಇನ್ನಿಂಗ್ಸ್ ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಮೊದಲ ನಾಲ್ಕು ಓವರ್‌ಗಳಲ್ಲಿ ಕೇವಲ 20 ರನ್ ಗಳಿಸಿತು. ಈ ನಡುವೆ ಮಾರ್ಕೊ ಯಾನ್ಸೆನ್ ಬೌಲಿಂಗ್‌ನಲ್ಲಿ ವೆಂಕಟೇಶ್ ಅಯ್ಯರ್ (7) ವಿಕೆಟ್ ಕಳೆದುಕೊಂಡಿತು. ಅಜಿಂಕ್ಯ ರಹಾನೆ (24 ಎಸೆತಗಳಲ್ಲಿ 28, ಮೂರು ಸಿಕ್ಸರ್) ಮುಂದಿನ ಎರಡು ಓವರ್‌ಗಳಲ್ಲಿ 35 ರನ್ ಗಳಿಸಿ ಪವರ್‌ಪ್ಲೇನಲ್ಲಿ ಸ್ಕೋರ್ ಅನ್ನು 55 ಕ್ಕೆ ಕೊಂಡೊಯ್ದರು.

ಉಮ್ರಾನ್ ತಮ್ಮ ಮೊದಲ ಓವರ್‌ನಲ್ಲಿ ರಾಣಾ ಮತ್ತು ರಹಾನೆ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರೆ, ನಾಯಕ ಶ್ರೇಯಸ್ ಅಯ್ಯರ್ (15)ಗೆ ಎರಡನೇ ಓವರ್‌ನಲ್ಲಿ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ರಾಣಾ ಮತ್ತು ರಹಾನೆ 48 ರನ್ ಜೊತೆಯಾಟ ನಡೆಸಿದರು. ನಟರಾಜನ್ ಅವರು ರಿಂಕು ಸಿಂಗ್ (ಐದು) ಅವರನ್ನು ಇನ್ಸ್ವಿಂಗ್ ಯಾರ್ಕರ್‌ನಲ್ಲಿ ಬೌಲ್ಡ್ ಮಾಡುವ ಮೂಲಕ ಸ್ಕೋರ್ ಐದು ವಿಕೆಟ್‌ಗೆ 94 ರನ್ ಮಾಡಿದರು.

ಅಂತಹ ಪರಿಸ್ಥಿತಿಯಲ್ಲಿ, ರಸೆಲ್, ನಟರಾಜನ್ ಅವರ ಫುಲ್ ಟಾಸ್ ಅನ್ನು ಬೃಹತ್ ಸಿಕ್ಸರ್ ಆಗಿ ಪರಿವರ್ತಿಸಿದರ., ನಂತರ ಬಿಲ್ಲಿಂಗ್ಸ್ ಉಮ್ರಾನ್ ಮೇಲೆ ಎರಡು ಬೌಂಡರಿಗಳನ್ನು ಬಾರಿಸಿದರು. ಇದಾದ ನಂತರ ಬಿಲ್ಲಿಂಗ್ಸ್ (34 ರನ್, 29 ಎಸೆತ) ಭುವನೇಶ್ವರ್ ಕುಮಾರ್ (27 ರನ್‌ಗೆ ಒಂದು ವಿಕೆಟ್) ಅವರಿಗೆ ಸುಲಭ ಕ್ಯಾಚ್ ನೀಡಿದರು. ವಾಷಿಂಗ್ಟನ್ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ರಸೆಲ್ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ರಸೆಲ್ ಕೇವಲ 28 ಎಸೆತಗಳಲ್ಲಿ ಮೂರು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳನ್ನು ಹೊಡೆದು ಅಜೇಯ 49 ರನ್ ಗಳಿಸಿದರು ಮತ್ತು ಬಿಲ್ಲಿಂಗ್ಸ್ ಅವರೊಂದಿಗೆ ಆರನೇ ವಿಕೆಟ್‌ಗೆ 63 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.

Published On - 11:24 pm, Sat, 14 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ