CSK vs GT, Head To Head: ಉಭಯ ತಂಡಗಳಿಗೂ ಇದು ಔಪಚಾರಿಕ ಪಂದ್ಯ; ಮುಖಾಮುಖಿ ವರದಿಯಲ್ಲಿ ಯಾರು ಬೆಸ್ಟ್?

CSK vs GT IPL 2022 Head To Head: ಈ ಎರಡು ತಂಡಗಳ ನಡುವೆ ನಡೆದ ಏಕೈಕ ಪಂದ್ಯವು 17 ಏಪ್ರಿಲ್ 2022 ರಂದು ನಡೆದಿತ್ತು. ರಶೀದ್ ನಾಯಕತ್ವದಲ್ಲಿ ಗುಜರಾತ್ ಮೂರು ವಿಕೆಟ್‌ಗಳಿಂದ ಚೆನ್ನೈ ತಂಡವನ್ನು ಸೋಲಿಸಿತ್ತು.

CSK vs GT, Head To Head: ಉಭಯ ತಂಡಗಳಿಗೂ ಇದು ಔಪಚಾರಿಕ ಪಂದ್ಯ; ಮುಖಾಮುಖಿ ವರದಿಯಲ್ಲಿ ಯಾರು ಬೆಸ್ಟ್?
CSK vs GT
Follow us
TV9 Web
| Updated By: ಪೃಥ್ವಿಶಂಕರ

Updated on: May 14, 2022 | 6:48 PM

ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL) 15 ನೇ ಋತುವಿನ ರೇಸ್‌ನಿಂದ ಹೊರಗುಳಿದಿದೆ. ಲೀಗ್‌ನ ಇತಿಹಾಸದಲ್ಲಿ ಚೆನ್ನೈ ಪ್ಲೇಆಫ್‌ನಲ್ಲಿ ಆಡದಿರುವುದು ಇದು ಎರಡನೇ ಬಾರಿ. ಈ ಮೊದಲು ಈ ತಂಡವು 2020 ರಲ್ಲಿ ಪ್ಲೇಆಫ್ ತಲುಪಲು ಸಾಧ್ಯವಾಗಿರಲಿಲ್ಲ. ಈಗ IPL 2022 ರಲ್ಲಿ, ಈ ತಂಡವು ಪ್ಲೇಆಫ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ನಾಯಕತ್ವದ ಈ ತಂಡವು ಇನ್ನೂ ಎರಡು ಪಂದ್ಯಗಳನ್ನು ಆಡಬೇಕಾಗಿದೆ, ಅದರಲ್ಲಿ ಒಂದು ಪಂದ್ಯವನ್ನು ಭಾನುವಾರದಂದು ಡಬಲ್ ಹೆಡರ್ ದಿನದಂದು ಆಡಬೇಕಾಗಿದೆ. ಈ ಪಂದ್ಯವು ಈ ಋತುವಿನ ಹೊಸ ತಂಡ ಮತ್ತು ಈಗಾಗಲೇ ಪ್ಲೇ ಆಫ್‌ಗೆ ಪ್ರವೇಶಿಸಿರುವ ಗುಜರಾತ್ ಟೈಟಾನ್ಸ್‌ (Gujarat Titans) ವಿರುದ್ಧ ನಡೆಯಲಿದೆ. ಸದ್ಯ ಗುಜರಾತ್ ತಂಡ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಚೆನ್ನೈ ತಂಡ ಎಂಟು ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.

ಗುಜರಾತ್ ಸಹಜವಾಗಿಯೇ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ ಆದರೆ ಇನ್ನೂ ಅವರು ಈ ಪಂದ್ಯವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಈ ಪಂದ್ಯವನ್ನು ಗೆಲ್ಲುವ ಮೂಲಕ ಗುಜರಾತ್ 20 ಅಂಕಗಳನ್ನು ಹೊಂದಲ್ಲಿದ್ದು, ನಂಬರ್-1 ಸ್ಥಾನದಲ್ಲಿ ಉಳಿಯುವ ಮೂಲಕ ಲೀಗ್ ಹಂತವನ್ನು ಪೂರ್ಣಗೊಳಿಸುವುದು ಖಚಿತ. ಅದೇ ಸಮಯದಲ್ಲಿ, ಚೆನ್ನೈಗೆ, ಈ ಪಂದ್ಯವು ವಿಶ್ವಾಸಾರ್ಹತೆಯ ಹೋರಾಟದಂತಿದೆ.

ಮುಖಾಮುಖಿ ಅಂಕಿಅಂಶಗಳು ಈ ಎರಡು ತಂಡಗಳ ನಡುವೆ ಮುಖಾಮುಖಿ ಅಂಕಿಅಂಶಗಳು ಗಮನಿಸಿದರೆ, ಈ ಎರಡು ತಂಡಗಳ ನಡುವೆ ಇದುವರೆಗೆ ಕೇವಲ ಒಂದು ಪಂದ್ಯ ಮಾತ್ರ ನಡೆದಿದೆ. ಗುಜರಾತ್ ಈ ಋತುವಿನಲ್ಲಿ ಮೊದಲ ಬಾರಿಗೆ ಐಪಿಎಲ್ ಆಡುತ್ತಿದ್ದು, ಈ ತಂಡ ತನ್ನ ಮೊದಲ ಸೀಸನ್‌ನಲ್ಲಿ ಉತ್ತಮ ಆಟ ಪ್ರದರ್ಶಿಸಿದೆ. ಈ ಎರಡು ತಂಡಗಳ ನಡುವೆ ನಡೆದ ಏಕೈಕ ಪಂದ್ಯವು 17 ಏಪ್ರಿಲ್ 2022 ರಂದು ನಡೆದಿತ್ತು. ರಶೀದ್ ನಾಯಕತ್ವದಲ್ಲಿ ಗುಜರಾತ್ ಮೂರು ವಿಕೆಟ್‌ಗಳಿಂದ ಚೆನ್ನೈ ತಂಡವನ್ನು ಸೋಲಿಸಿತ್ತು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು.

ಇದನ್ನೂ ಓದಿ
Image
IPL 2022: ಕೊಹ್ಲಿ- ರೋಹಿತ್ ಕಳಪೆ ಫಾರ್ಮ್; ಚಿಂತಿಸುವ ಅಗತ್ಯವಿಲ್ಲ ಎಂದ ಸೌರವ್ ಗಂಗೂಲಿ
Image
Big news: ಐಪಿಎಲ್​ನಲ್ಲಿ ಮತ್ತೆ ಕಳ್ಳಾಟ! ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ ಸಿಬಿಐ
Image
IPL 2022: ಮಾರಕ ದಾಳಿಯಿಂದಾಗಿ ಈ ಐಪಿಎಲ್​ನಲ್ಲಿ ಮಿಂಚಿದ ಭಾರತದ ಅನ್​ಕ್ಯಾಪ್ಡ್ ಬೌಲರ್​ಗಳಿವರು..!

ಪಂದ್ಯದ ಬಗ್ಗೆ ಇಲ್ಲಿದೆ ವಿವರ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟ್ ಮಾಡಿತು. ಪ್ರಸ್ತುತ ವಿಜೇತ ತಂಡ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತ್ತು. ಚೆನ್ನೈ ಪರ ರಿತುರಾಜ್ ಗಾಯಕ್ವಾಡ್ ಅದ್ಭುತ ಇನ್ನಿಂಗ್ಸ್ ಆಡಿ 73 ರನ್ ಗಳಿಸಿದರು. ಇವಲ್ಲದೇ ಅಂಬಟಿ ರಾಯುಡು 46 ರನ್ ಗಳಿಸಿದ್ದರು. ಇವರಿಬ್ಬರ ಈ ಇನ್ನಿಂಗ್ಸ್ ತಂಡದ ಗೆಲುವಿಗೆ ಸಾಕಾಗಲಿಲ್ಲ. ಗುಜರಾತ್ ಪರ ಡೇವಿಡ್ ಮಿಲ್ಲರ್ ಅಜೇಯ 94 ರನ್ ಗಳಿಸಿದರು. ಅಂತಿಮವಾಗಿ ಮಿಲ್ಲರ್​ಗೆ ಆಸರೆಯಾದ ರಶೀದ್ ಖಾನ್ ಚೆನ್ನೈನಿಂದ ಗೆಲುವನ್ನು ಕಿತ್ತುಕೊಂಡರು.

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್