Fire Crime: ಕಿಡಿಗೇಡಿಗಳಿಂದ ರಾತ್ರೋರಾತ್ರಿ ಅರಣ್ಯ ಪ್ರದೇಶಕ್ಕೆ ಬೆಂಕಿ: ಧಗ-ಧಗ ಉರಿದ 5 ಎಕರೆ ಅರಣ್ಯ!

|

Updated on: Mar 10, 2023 | 5:43 PM

ರಥರೋರಾತ್ರಿ ಬಂದು ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಯಲ್ಲಾಪುರದ ಅರಣ್ಯ ಪ್ರದೇಶ (Forest Region) ಧಗಧಗನೆ ಉರಿದಿದೆ. ಕಿಡಿಗೇಡಿಗಳ ಈ ಕೃತ್ಯದಿಂದ ಯಲ್ಲಾಪುರ ‌ತಾಲೂಕಿನ ಬಿಸಗೋಡ, ನಾಗರಖಾನು ಬಳಿಯ ಅರಣ್ಯ ಪ್ರದೇಶ ನಾಶವಾಗಿದೆ.

Fire Crime: ಕಿಡಿಗೇಡಿಗಳಿಂದ ರಾತ್ರೋರಾತ್ರಿ ಅರಣ್ಯ ಪ್ರದೇಶಕ್ಕೆ ಬೆಂಕಿ:  ಧಗ-ಧಗ ಉರಿದ 5 ಎಕರೆ ಅರಣ್ಯ!
ಸಾಂದರ್ಭಿಕ ಚಿತ್ರ
Follow us on

ಯಲ್ಲಾಪುರ: ಪ್ರತಿ ಬಾರಿಯೂ ಬೇಸಿಗೆ ಬಿರುಸುಗೊಳ್ಳುತ್ತಿದ್ದಂತೆಯೇ ರಾಜ್ಯದ ಅರಣ್ಯಗಳು ಹತ್ತಿ ಉರಿಯುವದನ್ನು (Forest Fire) ನಾವು ನೋಡುತ್ತೇವೆ. ಇದರಿಂದ ಆಗುವ ನಷ್ಟ, ಜೀವಹಾನಿ ಅಷ್ಟಿಷ್ಟಲ್ಲ. ಆದರೆ ಇದೀಗ ಕಿಡಿಗೇಡಿಗಳು ಯಲ್ಲಾಪುರದ (Yellapur) ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿ ವಿಕೃತಿಯನ್ನು ಮೆರೆದಿದ್ದಾರೆ. ರಥರೋರಾತ್ರಿ ಬಂದು ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಯಲ್ಲಾಪುರದ ಅರಣ್ಯ ಪ್ರದೇಶ (Forest Region) ಧಗಧಗನೆ ಉರಿದಿದೆ. ಕಿಡಿಗೇಡಿಗಳ ಈ ಕೃತ್ಯದಿಂದ ಯಲ್ಲಾಪುರ ‌ತಾಲೂಕಿನ ಬಿಸಗೋಡ, ನಾಗರಖಾನು ಬಳಿಯ ಅರಣ್ಯ ಪ್ರದೇಶ ನಾಶವಾಗಿದೆ. ಹರಸಾಹಸಪಟ್ಟು ಬೆಂಕಿ‌ನಂದಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ.

ಆರೋಪಿಗಳು ಮೀಸಲು ಅರಣ್ಯಕ್ಕೆ ಬೆಂಕಿ ಹಚ್ಚಿದ ಪರಿಣಾಮ ಬೆಂಕಿ ಅರಣ್ಯ ತುಂಬ ಆವರಿಸಿ ಅಕ್ಕಪಕ್ಕದ ತೋಟಗಳಿಗೂ ಹಬ್ಬಿ ಹೊತ್ತಿ ಉರಿದಿದೆ. ಅಗ್ನಿ ನಂದಿಸಲು ಅರಣ್ಯ ಇಲಖೆ ಸಿಬ್ಬಂದಿ ತಡರಾತ್ರಿವರೆಗೂ ಕಾರ್ಯಚರಣೆ ನಡೆಸಿದ್ದರು. ಘಟನೆಯಲ್ಲಿ 5 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಅರಣ್ಯ ಇಲಾಖೆಯ ಕಟ್ಟೆಚ್ಚರ ನಡುವೆಯೂ ಪದೇ ಪದೇ ಕಾಡ್ಚಿಚ್ಚು ಪ್ರಕರಣಗಳು ಸಂಭವಿಸುತ್ತಿದ್ದು, ರಾಜ್ಯದ ಅರಣ್ಯ ದಹನವಾಗುತ್ತಿದೆ.

ಇದನ್ನು ಓದಿ: ಕರಾವಳಿಯ ವಿಶೇಷ ಆಚರಣೆ ಹೋಳಿ ಸುಗ್ಗಿ ಕುಣಿತ, ಇಲ್ಲಿದೆ ನೋಡಿ ಅದರ ಝಲಕ್

ಇದಲ್ಲದೆ ಬೇಸಿಗೆಯ ಉರಿ ಬಿಸಿಲಿಗೆ ಕರ್ನಾಟಕ ಅರಣ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಫೆಬ್ರುವರಿ 15 ರಿಂದ ಅರಣ್ಯದಲ್ಲಿ 2,042 ಕ್ಕೂ ಹೆಚ್ಚು ಬೆಂಕಿ ಪ್ರಕರಣಗಳು ಸಂಭವಿಸಿವೆ. ಈ ಪೈಕಿ 627 ಕಾಡ್ಗಿಚ್ಚು ಪ್ರಕರಣಗಳು ಸೇರಿಕೊಂಡಿವೆ. ಇನ್ನು ಅರಣ್ಯ ವಲಯವಾರು ಪ್ರಕಾರ ನೋಡುವುದಾರೆ, ಬೆಳಗಾವಿ-245, ಭದ್ರಾವತಿ-178, ಚಿಕ್ಕಬಳ್ಳಾಪುರ- 128, ಚಿತ್ರದುರ್ಗ-129, ಹಳಿಯಾಳ-151, ಹಾಸನ-117, ರಾಮನಗರ-105 ಮತ್ತು ಸಾಗರದಲ್ಲಿ 163 ಬೆಂಕಿ ಅವಘಡಗಳು ದಾಖಲಾಗಿವೆ.