ಬೆಂಗಳೂರು: ಹಳೆಯದ್ದೆಲ್ಲಾ ಮರೆಯಬೇಕು. ಹೊಸದನ್ನ ಶುರು ಮಾಡಬೇಕು. ಆದ್ರೆ, 2019 ಕೆಲ ಮರೆಯಲಾಗದ ಘಟನೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲೊಂದು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಪಿಎ ಆತ್ಮಹತ್ಯೆ. ಜೊತೆಗೆ ಐಎಂಎ ಸ್ಕೀಮ್ ನಂಬಿ ನಿರಾಶರಾದ ಬರೊಬ್ಬರಿ 62 ಸಾವಿರ ಮಂದಿ. ಎಂಎಲ್‌ಎಗಳ ಹನಿಟ್ರ್ಯಾಪ್ ಮತ್ತು ಕೆಪಿಎಲ್ ಮ್ಯಾಚ್ ಫಿಕ್ಸಿಂಗ್.
ಪರಮೇಶ್ವರ್ ಒಡೆತನದ ಕಾಲೇಜ್‌ಗಳ ಮೇಲೆ IT ರೇಡ್:
ಪರಮೇಶ್ವರ್ ಪಿಎ ಆತ್ಮಹತ್ಯೆ
ಆವತ್ತು ಬೆಳಗ್ಗೆ 9.30ರ ಸುಮಾರಿಗೆ ಕೆಲ ಮಾಧ್ಯಮದ ವರದಿಗಾರರಿಗೆ ಹಾಗೂ ತಮ್ಮ ಆಪ್ತರಿಗೆ ಕರೆ ಮಾಡಿದ್ದ ರಮೇಶ್ ಡಿ.ಕೆ.ಶಿವಕುಮಾರ್ರಂಥವರನ್ನೇ ಬಿಟ್ಟಿಲ್ಲ ಇನ್ನು ನನ್ನನ್ನು ಬಿಡ್ತಾರಾ ಅಂತಾ ಆತಂಕ ಹೇಳಿಕೊಂಡಿದ್ರು. ಅಷ್ಟೇ ಅಲ್ಲ ನಾನಿನ್ನೂ ಬದುಕಿರಲ್ಲ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತಾನೂ ಹೇಳಿದ್ರು. ಸ್ನೇಹಿತರು ಅದೆಷ್ಟೇ ಧೈರ್ಯ ಹೇಳಿದ್ರು, ಕೇಳೋ ಸ್ಥಿತಿಯಲ್ಲಿ ಇರದ ರಮೇಶ್, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ರು.
ನೈಟ್ ಪ್ಯಾಂಟ್‌ನಿಂದಲೇ ನೇಣಿಗೆ ಶರಣು:
ಜ್ಞಾನಭಾರತಿ ಕ್ಯಾಂಪಸ್ನ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ 200 ಮೀಟರ್ನಷ್ಟು ನಡೆದುಕೊಂಡು ಹೋಗಿ ತಾವು ಮನೆಯಿಂದ ತಂದಿದ್ದ ನೈಟ್ ಪ್ಯಾಂಟ್‌ನಿಂದಲೇ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ರು. ರಮೇಶ್ ಆತ್ಮಹತ್ಯೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕುಟುಂಬಸ್ಥರ ಕಣ್ಣಿಗೆ ಎದೆಯೇ ಒಡೆದು ಹೋಗುವಂಥ ದೃಶ್ಯ ಎದುರಾಗಿತ್ತು. ರಮೇಶ್ ಮೃತದೇಹ ಮರದಲ್ಲಿ ನೇತಾಡ್ತಿದ್ದನ್ನ ಕಂಡು ಪತ್ನಿ ಸೌಮ್ಯಾ, ಸೋದರ ಸೋದರಿಯರು ಅಕ್ಷರಶ ಕುಸಿದು ಹೋಗಿದ್ರು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ರಮೇಶ್ ಡೆತ್‌ನೋಟ್ ಒಂದನ್ನ ಬರೆದಿಟ್ಟಿದ್ದು ತನ್ನ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ ಅಂತಾ ಬರೆದಿಟ್ಟಿದ್ರು. ಆದ್ರೆ ಐಟಿ ಇಲಾಖೆ ತಾವು ರಮೇಶ್ ಮನೆ ಸರ್ಚ್ ಮಾಡಿಲ್ಲ. ಅವರ ವಿಚಾರಣೆ ಮಾಡಿಲ್ಲ ಅಂತಾ ತಿಳಿಸಿತ್ತು.
Published On - 12:32 pm, Mon, 30 December 19