AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಚ್ಚಿ ಬೀಳಿಸಿದ್ದ ಅಲೆಯನ್ಸ್‌ ವಿವಿ ಅಯ್ಯಪ್ಪ ದೊರೆ ಕೊಲೆ ಕೇಸ್

ಬೆಂಗಳೂರನ್ನ ನಡುಗಿಸಿದ ಇನ್ನೊಂದು ಭೀಕರ ಹತ್ಯೆ ಅಯ್ಯಪ್ಪ ದೊರೈ ಕೊಲೆ. ಆವತ್ತು ಅಕ್ಟೋಬರ್‌ 16 ಬೆಳಗ್ಗೆ. ಬೆಂಗಳೂರಿನ ಹೃದಯಭಾಗದಲ್ಲಿರೋ ಆರ್‌.ಟಿ.ನಗರದಲ್ಲಿರೋ ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಅಲ್ಲೋಲ ಕಲ್ಲೋಲ. ಅದಾಗಲೇ ಅಲ್ಲೊಂದು ಡೆಡ್‌ಬಾಡಿ ಬಿದ್ದಿದೆ ಅನ್ನೋದನ್ನ ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಅಲ್ಲಿ ನಡೆದಿದ್ದೊಂದು ಹೈಪ್ರೊಫೈಲ್‌ ಮರ್ಡರ್‌. ಕೊಲೆಯಾಗಿ ಬಿದ್ದಿದ್ದ ವ್ಯಕ್ತಿ ವಿವಿಐಪಿ ಅಯ್ಯಪ್ಪ.. ಅಯ್ಯಪ್ಪ ದೊರೆ. ಅಯ್ಯಪ್ಪ ದೊರೆ ಅಲೆಯನ್ಸ್‌ ಯೂನಿವರ್ಸಿಟಿ ಅನ್ನೋ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಮುಂದೆ ತಾನೇ ಅದರ ಕುಲಪತಿಯಾಗಿದ್ದ. […]

ಬೆಚ್ಚಿ ಬೀಳಿಸಿದ್ದ ಅಲೆಯನ್ಸ್‌ ವಿವಿ ಅಯ್ಯಪ್ಪ ದೊರೆ ಕೊಲೆ ಕೇಸ್
ಸಾಧು ಶ್ರೀನಾಥ್​
|

Updated on:Nov 19, 2020 | 12:00 AM

Share

ಬೆಂಗಳೂರನ್ನ ನಡುಗಿಸಿದ ಇನ್ನೊಂದು ಭೀಕರ ಹತ್ಯೆ ಅಯ್ಯಪ್ಪ ದೊರೈ ಕೊಲೆ. ಆವತ್ತು ಅಕ್ಟೋಬರ್‌ 16 ಬೆಳಗ್ಗೆ. ಬೆಂಗಳೂರಿನ ಹೃದಯಭಾಗದಲ್ಲಿರೋ ಆರ್‌.ಟಿ.ನಗರದಲ್ಲಿರೋ ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಅಲ್ಲೋಲ ಕಲ್ಲೋಲ. ಅದಾಗಲೇ ಅಲ್ಲೊಂದು ಡೆಡ್‌ಬಾಡಿ ಬಿದ್ದಿದೆ ಅನ್ನೋದನ್ನ ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಅಲ್ಲಿ ನಡೆದಿದ್ದೊಂದು ಹೈಪ್ರೊಫೈಲ್‌ ಮರ್ಡರ್‌. ಕೊಲೆಯಾಗಿ ಬಿದ್ದಿದ್ದ ವ್ಯಕ್ತಿ ವಿವಿಐಪಿ ಅಯ್ಯಪ್ಪ.. ಅಯ್ಯಪ್ಪ ದೊರೆ.

ಅಯ್ಯಪ್ಪ ದೊರೆ ಅಲೆಯನ್ಸ್‌ ಯೂನಿವರ್ಸಿಟಿ ಅನ್ನೋ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಮುಂದೆ ತಾನೇ ಅದರ ಕುಲಪತಿಯಾಗಿದ್ದ. ಆ ನಂತ್ರ ಈತನ ಮಡದಿ ಕುಲಪತಿಯಾಗಿದ್ರು. ಜನಸಾಮಾನ್ಯರ ಪಕ್ಷ ಅನ್ನೋ ಪಕ್ಷ ಕಟ್ಟಿದ್ದ. 2014ರಲ್ಲಿ ಮುದ್ದೇಬಿಹಾಳದಿಂದ ಚುನಾವಣೆಗೆ ಸ್ಪರ್ಧಿಸಿದ್ದ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನಾಮಿನೇಟೆಡ್‌ ಸಿಂಡಿಕೇಟ್ ಸದಸ್ಯನಾಗಿದ್ದ. ಅಲ್ಲಿನ ವಿದ್ಯಾರ್ಥಿ ಸಂಘದ ಪ್ರಮುಖನಾಗಿದ್ದ.

ವಾಕಿಂಗ್‌ ವೇಳೆ ಹತ್ಯೆ: ಹಿಂದಿನ ಮನೆಯಲ್ಲಿ ಊಟ ಮುಗಿಸಿ ರಾತ್ರಿ ವಾಕಿಂಗ್‌ಗೆ ಮೈದಾನಕ್ಕೆ ಬಂದಿದ್ದಾತನನ್ನ ದುಷ್ಕರ್ಮಿಗಳು ಮಾರಣಾಂತಿಕವಾಗಿ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್‌ ಆಗಿದ್ರು. ಮರುದಿನ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿತ್ತು. ಗಾಬರಿಯಲ್ಲಿ ದುಷ್ಕರ್ಮಿಗಳು ಮಚ್ಚನ್ನ ಅಲ್ಲೇ ಬಿಸಾಡಿ ಹೋಗಿದ್ರು. ಹಿರಿಯ ಪೊಲೀಸ್‌ ಅಧಿಕಾರಿಗಳೆಲ್ಲಾ ಸ್ಪಾಟ್‌ಗೆ ಬಂದು ಪರಿಶೀಲಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್‌ ತಂಡಗಳು ರಚನೆಯಾಗಿವೆ.

ತನಿಖೆ ಮುಂದುವರೆಸಿದ ಪೊಲೀಸರಿಗೆ ಅಲೆಯನ್ಸ್ ವಿವಿಯ ವಿವಾದದ ವಿಚಾರ ಗೊತ್ತಾಗಿದೆ. ಅಯ್ಯಪ್ಪ ಎಂಟ್ರಿಯಾಗೋವರೆಗೂ ಅಲೆಯನ್‌ ವಿವಿ ಬನ್ನೇರುಘಟ್ಟ ರಸ್ತೆಯಲ್ಲಿ ಕೇವಲ ಕಾಲೇಜ್ ಆಗಿರುತ್ತೆ. ಕಾಲೇಜ್ ಆಗಿದ್ದನ್ನ ಖಾಸಗಿ ವಿವಿಯನ್ನಾಗಿ ಮಾಡಿದ್ದೇ ಅಯ್ಯಪ್ಪ ದೊರೆ ಮಾಸ್ಟರ್‌ ಮೈಂಡ್‌. ಅಯ್ಯಪ್ಪ ದೊರೆ ಆ ವೇಳೆಯಲ್ಲಿ ಸುಧೀರ್ ಅಂಗೂರ್ ಮಧುಕರ್‌ ಅಂಗೂರ್ ಇಬ್ಬರ ಬಳಿಯಲ್ಲಿ ಮಾತನಾಡಿ ಹಣ ಹೂಡಿಸುತ್ತಾರೆ. ಮಧುಕರ್ ಅಂಗೂರ್ ಅಮೆರಿಕದಲ್ಲಿದ್ರು. ಸುಧೀರ್ ಅಂಗೂರ್ ನೇತೃತ್ವದಲ್ಲಿ ಸುಮಾರು 60 ಎಕರೆ ಕೋಟಿ ಕೋಟಿ ಮೌಲ್ಯದ ಪ್ರಾಪರ್ಟಿಯನ್ನ ಖರೀದಿ ಮಾಡಲಾಗುತ್ತೆ. ಅಂಗೂರ್ ಸಹೋದರರ ನೇತೃತ್ವದಲ್ಲಿ ಖಾಸಗಿ ವಿವಿ ಸ್ಥಾಪನೆಯಾಗುತ್ತೆ. ನಂತ್ರ, ಸುಧೀರ್ ಅಂಗೂರ್ ಇದರ ಮ್ಯಾನೇಜ್‌ಮೆಂಟ್‌ ನೋಡಿಕೊಳ್ಳುತ್ತಿದ್ರು. ವ್ಯವಹಾರವನ್ನ ಅಯ್ಯಪ್ಪ ದೊರೆ ನೋಡ್ತಾ ಇರ್ತಾನೆ.

ಈ ನಡುವೆ ಮಧುಕರ್, ಸುಧೀರ್‌ ನಡುವೆ ವಿವಿಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರದಲ್ಲಿ ಗಲಾಟೆ ಶುರುವಾಗಿದೆ. ಸುಧೀರ್ ಜೊತೆಯಲ್ಲಿದ್ದ ಅಯ್ಯಪ್ಪ ದೊರೆ ಮಧುಕರ್‌ ಸಪೋರ್ಟ್‌ಗೆ ನಿಂತಿದ್ದಾನೆ. ಇದು ಸುಧೀರ್‌ ಸಿಟ್ಟಿಗೆ ಕಾರಣವಾಗಿತ್ತು. ಈ ಎಲ್ಲಾ ವಿಚಾರ ಮನಗಂಡ ಪೊಲೀಸರು ಅಯ್ಯಪ್ಪ ದೊರೆ ಹತ್ಯಾ ರಹಸ್ಯ ಭೇದಿಸಿದ್ರು. ಈ ಹತ್ಯೆ ರೂವಾರಿ ಬೇರಾರೂ ಆಗಿರಲ್ಲಿಲ. ಸ್ವತಃ ಸುಧೀರ್ ಅಂಗೂರ್‌ ಆಗಿದ್ದ. ಸೂರಜ್‌ ಅನ್ನೋ ವ್ಯಕ್ತಿಗೆ ಅಯ್ಯಪ್ಪ ದೊರೆಯನ್ನ ಕೊಲ್ಲೋ ಡೀಲ್ ಕೊಟ್ಟಿದ್ದ. ಸೂರಜ್ ನಾಲ್ಕು ಹುಡುಗರನ್ನ ಒಟ್ಟು ಮಾಡಿಕೊಂಡಿದ್ದ. ಸುಧೀರ್ ಯಾರನ್ನ ಬೇಕಾದ್ರೂ ಕರೆದುಕೊಂಡು ಹೋಗಿ ಹೊಡಿ. ಒಬ್ಬೊರಿಗೂ 20 ಲಕ್ಷ ಹಣ ಕೊಡ್ತೀನಿ. ನಿನ್ನ ಲೈಫ್‌ ಸೆಟ್ಲ್ ಮಾಡಿಸ್ತೀನಿ ಅಂದಿದ್ದ. ಅದರಂತೆ ಸೂರಜ್ ತನ್ನ ಟೀಂ ಜೊತೆ ಅಯ್ಯಪ್ಪ ದೊರೆಯನ್ನ ಕೊಂದೇ ಬಿಟ್ಟಿದ್ದ.

ಸುಧೀರ್ ಆವತ್ತು ಇಬ್ಬರ ಹತ್ಯೆಗೆ ಸುಪಾರಿ ನೀಡಿದ್ದ. ಒಬ್ಬ ಅಯ್ಯಪ್ಪ ದೊರೆ. ಇನ್ನೊಬ್ಬರು ಮಧುಕರ್ ಅಂಗೂರ್‌. ಆ ರಾತ್ರಿ ಅಯ್ಯಪ್ಪ ದೊರೆಯನ್ನ ಕೊಂದು ಸೂರಜ್‌ ಸುಧೀರ್ ಮನೆಗೆ ಹೋದಾಗ ಆತ ಇನ್ನೊಂದು ಎಷ್ಟು ಹೊತ್ತಿನಲ್ಲಿ ಅಂತಾ ಕೇಳಿದ್ದ. ಆದ್ರೆ ಪೊಲೀಸರು ಅದಾಗಲೇ ಮಧುಕರ್ ಮನೆಗೆ ಸೆಕ್ಯುರಿಟಿ ಕೊಟ್ಟಿದ್ರು. ಹೀಗಾಗಿ ಹಂತಕರಿಗೆ ಮತ್ತೊಂದು ಹತ್ಯೆ ಸಾಧ್ಯವಾಗಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಫಾರಿ ಕೊಟ್ಟ ಸುಧೀರ್, ಸುಪಾರಿ ಪಡೆದ ಸೂರಜ್‌ ಸೇರಿದಂತೆ ಒಟ್ಟು 12 ಜನರನ್ನ ಅರೆಸ್ಟ್ ಮಾಡಿದ್ರು. ಪೊಲೀಸರು ಚಾರ್ಜ್‌ಶೀಟ್‌ ಸಿದ್ಧಪಡಿಸುತ್ತಿದ್ದು ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

Published On - 11:51 am, Mon, 30 December 19