ಬೆಚ್ಚಿ ಬೀಳಿಸಿದ ಅಯ್ಯಪ್ಪ ದೊರೆ ಮತ್ತು ಲಕ್ಷ್ಮಣ ಹತ್ಯೆಯ ಸತ್ಯ!

ಬೆಂಗಳೂರು: ಹೊಸ ವರ್ಷಾರಂಭಕ್ಕೆ ಪ್ರತಿಯೊಬ್ಬರು ಕಾತರಿಸಿ ಕಾಯುತ್ತಿದ್ದಾರೆ. ಈಗಾಗಲೇ ಗಂಟೆಗಳ ಲೆಕ್ಕದಲ್ಲಿ ಕೌಂಟ್‌ಡೌನ್‌ ಶುರುವಾಗಿದೆ. 2020ನ್ನ ಸ್ವಾಗತಿಸಲು ಸಕಲ ಸಿದ್ದತೆ ನಡೆಸಲಾಗುತ್ತಿದೆ. ಹೊಸ ಕನಸಿನೊಂದಿಗೆ ಹೊಸ ಕಾಲಘಟ್ಟಕ್ಕೆ ಕಾಲಿಡೋ ಮುನ್ನ ಹಳೆಯ ಮಾಸದ ನೆನಪುಗಳು ನೋವಿನಂತೆ ಇರಿಯುತ್ತಿವೆ. 2020ರ ಮೊದಲ ಸೂರ್ಯೋದಯ. ಇದಕ್ಕಾಗಿ ಪ್ರತಿಯೊಬ್ಬರೂ ಕಾತರಿಸಿ ಕಾಯುತ್ತಿದ್ದಾರೆ. ಹೊಸ ಕನಸುಗಳಿಗೆ ಲಗ್ಗೆ ಇಡಲು ಅದೆಷ್ಟೋ ಮನಸ್ಸುಗಳು ಸಿದ್ದವಾಗಿದೆ. ಹಳೆಯದ್ದೆನ್ನೆಲ್ಲಾ ಮರೆತು, ಹೊಸ ಜೀವನ ಅನ್ನೋರೆಷ್ಟೋ.. ಹೊಸ ಗುರಿಯತ್ತ ಮುನ್ನಗ್ಗಲು ಹೊರಟವರೆಷ್ಟೋ.. ಆದ್ರೆ, ಮರೆತೆ ಅಂದರೂ ಮರೆಯಲಾಗದ.. ಪದೇ […]

ಬೆಚ್ಚಿ ಬೀಳಿಸಿದ ಅಯ್ಯಪ್ಪ ದೊರೆ ಮತ್ತು ಲಕ್ಷ್ಮಣ ಹತ್ಯೆಯ ಸತ್ಯ!
Follow us
ಸಾಧು ಶ್ರೀನಾಥ್​
|

Updated on:Nov 18, 2020 | 11:58 PM

ಬೆಂಗಳೂರು: ಹೊಸ ವರ್ಷಾರಂಭಕ್ಕೆ ಪ್ರತಿಯೊಬ್ಬರು ಕಾತರಿಸಿ ಕಾಯುತ್ತಿದ್ದಾರೆ. ಈಗಾಗಲೇ ಗಂಟೆಗಳ ಲೆಕ್ಕದಲ್ಲಿ ಕೌಂಟ್‌ಡೌನ್‌ ಶುರುವಾಗಿದೆ. 2020ನ್ನ ಸ್ವಾಗತಿಸಲು ಸಕಲ ಸಿದ್ದತೆ ನಡೆಸಲಾಗುತ್ತಿದೆ. ಹೊಸ ಕನಸಿನೊಂದಿಗೆ ಹೊಸ ಕಾಲಘಟ್ಟಕ್ಕೆ ಕಾಲಿಡೋ ಮುನ್ನ ಹಳೆಯ ಮಾಸದ ನೆನಪುಗಳು ನೋವಿನಂತೆ ಇರಿಯುತ್ತಿವೆ.

2020ರ ಮೊದಲ ಸೂರ್ಯೋದಯ. ಇದಕ್ಕಾಗಿ ಪ್ರತಿಯೊಬ್ಬರೂ ಕಾತರಿಸಿ ಕಾಯುತ್ತಿದ್ದಾರೆ. ಹೊಸ ಕನಸುಗಳಿಗೆ ಲಗ್ಗೆ ಇಡಲು ಅದೆಷ್ಟೋ ಮನಸ್ಸುಗಳು ಸಿದ್ದವಾಗಿದೆ. ಹಳೆಯದ್ದೆನ್ನೆಲ್ಲಾ ಮರೆತು, ಹೊಸ ಜೀವನ ಅನ್ನೋರೆಷ್ಟೋ.. ಹೊಸ ಗುರಿಯತ್ತ ಮುನ್ನಗ್ಗಲು ಹೊರಟವರೆಷ್ಟೋ.. ಆದ್ರೆ, ಮರೆತೆ ಅಂದರೂ ಮರೆಯಲಾಗದ.. ಪದೇ ಪದೇ ಕಾಡಿಸುವ ಅದೆಷ್ಟೋ ಘಟನೆಗಳಿಗೆ 2019 ಸಾಕ್ಷಿಯಾಗಿದೆ. ಮನುಷ್ಯ ಅದೆಷ್ಟು ಕ್ರೂರಿ.. ಅದೆಷ್ಟು ಸ್ವಾರ್ಥಿ ಅನ್ನೋದನ್ನ ಸಾಭೀತು ಪಡಿಸೋ ಘಟನೆಗಳಿವು. ಏನೋ ಆಗಿ ಇನ್ನೇನೋ ಅಡ್ಡಪರಿಣಾಮ ಬೀರಿದ ಪ್ರಕರಣಗಳೆಷ್ಟೋ… ಇಲ್ಲಿ ನೋವಿದೆ.. ಇಲ್ಲಿ ಆಸೆಯಿದೆ.. ಕೆಟ್ಟ ಮನದ ಹುಚ್ಚುಚ್ಚು ಯೋಚನೆ ಸೃಷ್ಟಿಸಿದ ಕಣ್ಣೀರಿದೆ.

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಃ.. ಇದರರ್ಥ ಎಲ್ಲಿ ನಾರಿಯರನ್ನ ಪೂಜಿಸ್ತಾರೋ ಅಲ್ಲಿ ದೇವರಿರ್ತಾನೆ. ಆದ್ರೆ ಈ ನಾರಿ ಮಾತ್ರ ಕಂಪ್ಲೀಟ್‌ ಡಿಫರೆಂಟ್‌. ಆಕೆಯನ್ನ ಹತ್ತಿರ ಬಿಟ್ಟುಕೊಂಡ್ರೆ ಮನೆ ಬಾಗಿಲಿಗೆ ಬರೋದು ಯಮ. ಈಕೆ ಸೀರೆ ಉಟ್ಟರೆ ಅಪ್ಪಟ ಭಾರತೀಯ ನಾರಿ. ವೆಸ್ಟ್ರನ್‌ ಗೆಟಪ್‌ನಲ್ಲಿ ನಿಂತ್ರೆ ಅಬ್ಬಬ್ಬಾ ಸುರ ಸುಂದರಿ. ಇನ್ನೀಕೆ ಬೆಂಗಳೂರಿನಲ್ಲಿ ಸೈಕಾಲಜಿಯಲ್ಲಿ ಡಿಗ್ರಿ ಮುಗಿಸಿ, ಲಂಡನ್‌ನ ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ಮಾಸ್ಟರ್‌ ಡಿಗ್ರಿ ಮಾಡ್ತಾ ಇದ್ದಾಕೆ. ಮನೆಯಲ್ಲಿ ಹಣ ಕೊಳೀತಾ ಬಿದ್ದಿದೆ. ಹೆಸರು ವರ್ಷಿಣಿ. ವಯಸ್ಸು ಜಸ್ಟ್ 21.

ನಟೋರಿಯಸ್‌ ರೌಡಿ ಲಕ್ಷ್ಮಣನ ಮರ್ಡರ್​: 2019ರ ಮಾರ್ಚ್ 7ನೇ ತಾರೀಕು ಅದು. ಬೆಂಗಳೂರಿನ ಇಸ್ಕಾನ್‌ ದೇಗುಲದ ಸಮೀಪ. ಮಧ್ಯಾಹ್ನ 12.30ರ ಸುಮಾರಿಗೆ ತನ್ನ ಇನ್ನೋವಾ ಕಾರ್‌ನಲ್ಲಿ ಬರ್ತಿದ್ದ ನಟೋರಿಯಸ್‌ ರೌಡಿ, ಶ್ರೀಮಂತರ ಶ್ರೀಮಂತ ಲಕ್ಷ್ಮಣ ತನ್ನೊಬ್ಬ ಡ್ರೈವರ್‌ ಜೊತೆಯಲ್ಲಿ ಪಾಸ್‌ ಆಗಿದ್ದ. ಇದೇ ವೇಳೆ ಅಲ್ಲೊಂದು ಸ್ಕಾರ್ಪಿಯೋ ಕಾರ್‌ ಪಾಸ್‌ ಆಗಿತ್ತು. ಇದಾಗಿ ಕೆಲ ಹೊತ್ತಷ್ಟೇ.. ಇನ್ನೋವಾ ಕಾರ್‌ನನ್ನ ಅಡ್ಡಗಟ್ಟಿದ್ದ ಸ್ಕಾರ್ಪಿಯೋದಲ್ಲಿದ್ದ ಹಂತಕರು ಮನ ಬಂದಂತೆ ಮಚ್ಚು ಬೀಸಿ ಲಕ್ಷ್ಮಣನ ಇಹಲೋಕದ ವ್ಯವಹಾರವನ್ನೇ ಮುಗಿಸಿ ಬಿಟ್ಟಿದ್ರು. ಅಲ್ಲಿ ನೆರೆದಿದ್ದ ಸಾರ್ವಜನಕರಿಗೆ ಸಿನಿಮಾ ಕ್ಲೈಮ್ಯಾಕ್ಸ್ ನೋಡಿದ ರೀತಿ ಭಾಸವಾಗಿತ್ತು. ಮೈಗಂಟಿದ್ದ ರಕ್ತ ಒರೆಸಿಕೊಂಡಿದ್ದ ಹಂತಕರು ತಾವು ಬಂದಿದ್ದ ಸ್ಕಾರ್ಪಿಯೋದಲ್ಲಿಯೇ ಕ್ಷಣ ಮಾತ್ರದಲ್ಲಿ ಎಸ್ಕೇಪ್ ಆಗಿದ್ರು.

ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದ ಲಕ್ಷ್ಮಣ: ಲಕ್ಷ್ಮಣ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದ. ರಾಜಕಾರಣದಲ್ಲೂ ಕೈಯಾಡಿಸತೊಡಗಿದ್ದ. ಹಲವು ಡೀಲಿಂಗ್‌ಗಳಲ್ಲಿ ನೂರಾರು ಕೋಟಿ ರೂಪಾಯಿ ಹಣ ಸಂಪಾದಿಸಿದ್ದ. ಕೂಲಿಯಾಳಾಗಿದ್ದಾತ ಕೋಟಿ ಕೋಟಿ ಹಣ ಎಣಿಸುತ್ತಿದ್ದ. ಇಂತಾ ಲಕ್ಷ್ಮಣ ಮಟಾಷ್ ಅನ್ನೋದು ಗೊತ್ತಾಗ್ತಾ ಇದ್ದಂತೆ ಇಡೀ ಬೆಂಗಳೂರು ಸ್ಟನ್‌ ಆಗಿತ್ತು. ಪೊಲೀಸರು ಹಂತಕರ ಬೇಟೆಗೆ ಸಮರೋಪಾದಿಯಲ್ಲಿ ಕಾರ್ಯಾಚರಣೆಗೆ ಇಳಿದಿದ್ರು.

ಪೊಲೀಸರಿಗೆ ಲಕ್ಷ್ಮಣನ ಹೆಣ್ಣಿನ ವೀಕ್‌ನೆಸ್‌ ಗೊತ್ತಾಗಿದೆ. ಕೊಲೆಯಾದ ದಿನ ಕೂಡಾ ಈತ ರೂಂ ಮಹಾಲಕ್ಷ್ಮಿ ಲೇಔಟ್‌ನ ಹೋಟೆಲ್ ಒಂದರಲ್ಲಿ ರೂಂಬುಕ್ ಮಾಡಿದ್ದು.. ಮನೆಯಲ್ಲಿ ಮಡದಿಗೆ ಎರಡು ದಿನ ಬರೋದಿಲ್ಲ ಅಂತಾ ಹೇಳಿ ಬಂದಿದ್ದು ಗೊತ್ತಾಗಿತ್ತು. ಅದು ಆ ಹೆಣ್ಣಿಗೋಸ್ಕರ. ಆಕೆ ವರ್ಷಿಣಿ.

ಅಂಕಲ್ ಅಂತ ಕರೀತಿದ್ದ ವರ್ಷಿಣಿ: ವರ್ಷಿಣಿ ಮತ್ತು ಲಕ್ಷ್ಮಣ ಕಂಗೇರಿಯಲ್ಲಿ ಅಕ್ಕಪಕ್ಕದ ನಿವಾಸಿಗಳು. ಇಬ್ಬರೂ ಫ್ಯಾಮಿಲಿ ಫ್ರೆಂಡ್ಸ್‌. ಆರಂಭದಲ್ಲಿ ಅಂಕಲ್ ಅಂಕಲ್ ಅಂತಾ ಕರೀತಾ ಇದ್ದ ವರ್ಷಿಣಿ ಆ ನಂತ್ರ ಱಸ್ಕಲ್ ಸ್ಟುಪಿಡ್ ಅನ್ನೋ ರೀತಿಗೆ ಬಂದಿದ್ಳು. ಲವರ್‌ಗಿಂತಾ ಹೆಚ್ಚಾಗಿ ಲಕ್ಷ್ಮಣನೊಂದಿಗೆ ವರ್ತಿಸುತ್ತಿದ್ಳು. ಇದರ ಜೊತೆಯಲ್ಲಿ ಲಕ್ಷ್ಮಣನ ಓಲ್ಡ್ ಅಸೋಸಿಯೇಟ್‌, ಮನೆಗಳ್ಳ ರೂಪೇಶ್ ಜೊತೆ ಈಕೆಗೆ ಪ್ರೀತಿ ಹುಟ್ಟಿತ್ತು. ಆದ್ರೆ ಹಳೇ ರೌಡಿ ಮೋಟ್‌ ಬೆಳ್ ಹರೀಶನ ಮಗಳು ವರ್ಷಿಣಿ ಹಲವು ಭೂಗತ ಪಾತಕಿಗಳ ಸಂಪರ್ಕವಿತ್ತು.

ವರ್ಷಿಣಿ ಜೊತೆ ಪ್ರೀತಿಗೆ ಬಿದ್ದಿದ್ದ ಲಕ್ಷ್ಮಣ: ವರ್ಷಿಣಿ ಜೊತೆ ಪ್ರೀತಿಗೆ ಬಿದ್ದಿದ್ದ ಲಕ್ಷ್ಮಣ ಈಕೆ ಲಂಡನ್‌ಗೆ ಉನ್ನತ ವ್ಯಾಸಂಗಕ್ಕಾಗಿ ತೆರಳಿದಾಗ ಅದರ ಖರ್ಚು ವೆಚ್ಚ ಭರಿಸುತ್ತಿದ್ದ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲಕ್ಷ್ಮಣ ಜೈಲಿಗೆ ಹೋಗ್ತಾ ಇದ್ದಂತೆ ವರ್ಷಿಣಿಯೊಂದಿಗೆ ರೂಪೇಶ ಸಂಪರ್ಕ ಸಾಧಿಸಿದ್ದ. ಲಕ್ಷ್ಮಣನೊಂದಿಗೆ ಇದ್ದುಕೊಂಡೇ ಆತನ ಹತ್ಯೆಗೆ ವರ್ಷಿಣಿ ಜೊತೆ ಸೋರಿ ಸ್ಕೆಚ್ ರೂಪಿಸಿದ್ದ.

ವಾಟ್ಸಪ್ ಕಾಲ್‌ ಮಾಡಿದ್ದ ವರ್ಷಿಣಿ: ಆವತ್ತು ಲಂಡನ್‌ನಿಂದ ಬೆಂಗಳೂರಿಗೆ ಬಂದಿದ್ದಾಗಿ ವಾಟ್ಸಪ್ ಕಾಲ್‌ ಮಾಡಿ ಸುಳ್ಳು ಹೇಳಿದ್ದ ವರ್ಷಿಣಿ. ಮಹಾಲಕ್ಷ್ಮಿ ಲೇಔಟ್‌ನ ಹೋಟೆಲ್‌ ಅಡ್ರಸ್‌ ಹೇಳಿದ್ಳು. ಖುಷಿಯಲ್ಲಿ ಲಕ್ಷ್ಮಣ ಏಕಾಂಗಿಯಾಗಿ ಹೊರಟಿದ್ದ. ಆದ್ರೆ ಲಂಡನ್‌ನಲ್ಲೇ ಕುಳಿತಿದ್ದ ವರ್ಷಿಣಿ ಪದೇ ಪದೇ ಲಕ್ಷ್ಮಣನಿಗೆ ಕಾಲ್‌ ಮಾಡ್ತಾ ಲೊಕೇಷನ್‌ ಕೇಳಿ ಅದನ್ನ ಹತ್ಯೆಗೆ ಹೊಂಚು ಹಾಕಿ ಕುಳಿತಿದ್ದ ರೂಪೇಶ್‌ ಮತ್ತು ಗ್ಯಾಂಗ್‌ಗೆ ತಿಳಿಸ್ತಿದ್ಳು. ಹೋಟೆಲ್‌ಗೆ ಬಂದಿದ್ದ ಲಕ್ಷ್ಮಣ ವರ್ಷಿಣಿ ಇಲ್ಲದೇ ಇದ್ದಿದ್ದನ್ನ ನೋಡಿ ವಾಪಸ್‌ ಹೊರಟಿದ್ದ. ಈ ವೇಳೆಯಲ್ಲಿ ಅಟ್ಯಾಕ್ ಮಾಡಿದ ರೂಪೇಶ್‌ ಅಂಡ್ ಗ್ಯಾಂಗ್‌ ಲಕ್ಷ್ಮಣನನ್ನ ಕೊಂದೇ ಬಿಟ್ಟಿತ್ತು. ಲಕ್ಷ್ಮಣ ಸತ್ತ ನಂತ್ರ ಲಂಡನ್‌ನಿಂದ ಬಂದಿದ್ದ ವರ್ಷಿಣಿ ದೊಡ್ಡ ನಾಟಕವಾಡಿದ್ಳು.

ಪೊಲೀಸರ ತನಿಖೆಯಲ್ಲಿ ಅಸಲಿಯತ್ತು ಬಯಲು:  ಆದ್ರೆ, ಪೊಲೀಸರು ಒಂದೆರಡು ದಿನಗಳಲ್ಲೇ ಈಕೆಯ ಅಸಲಿಯತ್ತನ್ನ ಹೊರಗೆಳೆದಿದ್ರು. ವರ್ಷಿಣಿ ಸೇರಿದಂತೆ ರೂಪೇಶ್‌, ವರುಣ್, ಅಲೋಕ್‌, ಮಧು, ದೇವರಾಜ ಅನ್ನೋರನ್ನ ಅರೆಸ್ಟ್ ಮಾಡಿದ್ರು. ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಹೇಮಿ ಅಲಿಯಾಸ್‌ ಹೇಮಂತ, ಕ್ಯಾಟ್‌ ರಾಜ ಎಂಬ ರೌಡಿಯನ್ನ ಶೂಟ್ ಮಾಡಿ ಅರೆಸ್ಟ್ ಮಾಡಿದ್ರು.

ಸದ್ಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಕಾ ಕಾಯ್ದೆ ಪ್ರಯೋಗಿಸಿದ್ದಾರೆ. ಲಕ್ಷ್ಮಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 12ಜನ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಲಕ್ಷ್ಮಣ್‌ ಹತ್ಯೆಯಾದಾಗ ವರ್ಷಿಣಿ ದೇಶದಲ್ಲಿಯೇ ಇರಲಿಲ್ಲ. ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿಲ್ಲ ಅನ್ನೋ ಕಾರಣಕ್ಕೆ ನ್ಯಾಯಾಲಯ ಜಾಮೀನು ನೀಡಿದೆ. ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ.

Published On - 12:49 pm, Mon, 30 December 19

ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ
ಗ್ಯಾರಂಟಿಗಳಿಗೆ ನನ್ನ ವಿರೋಧವಿಲ್ಲ, ನಿಲ್ಲಿಸಬೇಡಿ, ಮುಂದುವರೆಸಿ: HDK
ಗ್ಯಾರಂಟಿಗಳಿಗೆ ನನ್ನ ವಿರೋಧವಿಲ್ಲ, ನಿಲ್ಲಿಸಬೇಡಿ, ಮುಂದುವರೆಸಿ: HDK