IMA ವಂಚನೆ ಕೇಸ್: ಇದುವರೆಗೂ 32 ಆರೋಪಿಗಳ ಸೆರೆ

IMA ವಂಚನೆ ಕೇಸ್: ಇದುವರೆಗೂ 32 ಆರೋಪಿಗಳ ಸೆರೆ
ಮನ್ಸೂರ್​ ಖಾನ್​

ಬೆಂಗಳೂರು: ಜೂನ್ 10.. 2019. ಬೆಂಗಳೂರಿನ ಶಿವಾಜಿನಗರ ಐಎಂಎ ಮುಖ್ಯ ಕಚೇರಿ ಮುಂದೆ ದೊಡ್ಡ ಜನಸಾಗರ. ಕಣ್ಣೀರು, ಅಳಲು, ಆತಂಕ, ದುಗುಡ. ಹೆಚ್ಚಿನ ಬಡ್ಡಿ ಆಸೆಗೆ ಬಿದ್ದು ಐಎಂಎಯಲ್ಲಿ ಹೂಡಿಕೆ ಮಾಡಿದ್ದ ಸಾವಿರಾರು ಜನ್ರಿಗೆ ಐಎಂಎ ಸಂಸ್ಥಾಪಕ ಮನ್ಸೂರ್‌ ಅಲಿಖಾನ್‌ ನಿಗೂಢವಾಗಿ ನಾಪತ್ತೆಯಾಗಿದ್ದ. ರಾಜಕಾರಣಿಗಳಿಗೆ ಲಂಚ ನೀಡಿ ಸಾಕಾಗಿದೆ. ನಾನು ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ. ನನ್ನ ಬಳಿ 500 ಕೋಟಿಯಷ್ಟು ಬೆಲೆ ಬಾಳೋ ಆಸ್ತಿ ಇದೆ. ಮಾರಿ ಹೂಡಿಕೆದಾರರಿಗೆ ಹಣ ನೀಡಿ ಅಂತ ಆಡಿಯೋ ಒಂದು ರಿಲೀಸ್‌ ಮಾಡಿ […]

sadhu srinath

|

Nov 18, 2020 | 11:57 PM

ಬೆಂಗಳೂರು: ಜೂನ್ 10.. 2019. ಬೆಂಗಳೂರಿನ ಶಿವಾಜಿನಗರ ಐಎಂಎ ಮುಖ್ಯ ಕಚೇರಿ ಮುಂದೆ ದೊಡ್ಡ ಜನಸಾಗರ. ಕಣ್ಣೀರು, ಅಳಲು, ಆತಂಕ, ದುಗುಡ. ಹೆಚ್ಚಿನ ಬಡ್ಡಿ ಆಸೆಗೆ ಬಿದ್ದು ಐಎಂಎಯಲ್ಲಿ ಹೂಡಿಕೆ ಮಾಡಿದ್ದ ಸಾವಿರಾರು ಜನ್ರಿಗೆ ಐಎಂಎ ಸಂಸ್ಥಾಪಕ ಮನ್ಸೂರ್‌ ಅಲಿಖಾನ್‌ ನಿಗೂಢವಾಗಿ ನಾಪತ್ತೆಯಾಗಿದ್ದ. ರಾಜಕಾರಣಿಗಳಿಗೆ ಲಂಚ ನೀಡಿ ಸಾಕಾಗಿದೆ. ನಾನು ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ. ನನ್ನ ಬಳಿ 500 ಕೋಟಿಯಷ್ಟು ಬೆಲೆ ಬಾಳೋ ಆಸ್ತಿ ಇದೆ. ಮಾರಿ ಹೂಡಿಕೆದಾರರಿಗೆ ಹಣ ನೀಡಿ ಅಂತ ಆಡಿಯೋ ಒಂದು ರಿಲೀಸ್‌ ಮಾಡಿ ನಾಪತ್ತೆಯಾಗಿದ್ದ. ಹಣ ಹೂಡಿಕೆ ಮಾಡಿದವರು ಎದ್ನೋ ಬಿದ್ನೋ ಅಂತಾ ಐಎಂಎ ಜ್ಯುವೆಲರಿ ಶಾಪ್‌ ಮುಂದೆ ಬಂದು ಪ್ರತಿಭಟನೆ ಮಾಡಿದ್ರು. ರೊಚ್ಚಿಗೆದ್ದ ಜನ ಅಂಗಡಿಗೆ ನುಗ್ಗಲು ಯತ್ನಿಸಿದ್ರು.

ಮುಂದೆ, ಈ ಬಗ್ಗೆ ತನಿಖೆ ಶುರು ಮಾಡಿದ ಪೊಲೀಸರಿಗೆ ಮನ್ಸೂರ್ ದೇಶ ಬಿಟ್ಟು ಪರಾರಿಯಾಗಿದ್ದು ಗೊತ್ತಾಗಿದೆ. ದೇಶ ಬಿಡೋಕೂ ಮುನ್ನ 62 ಸಾವಿರ ಜನರಿಂದ 2,800ಕೋಟಿ ಹೂಡಿಕೆ ಮಾಡಿಕೊಂಡಿದ್ದು ತನಿಖೆಯಿಂದ ಬಯಲಾಗಿದೆ. ಹಣ ಕಳೆದುಕೊಂಡ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸರ್ಕಾರ ತನಿಖೆಗೆ ಎಸ್‌ಐಟಿ ರಚನೆ ಮಾಡಿತ್ತು. SIT ನೇತೃತ್ವವನ್ನ ಇಂದಿನ ಬೆಂಗಳೂರು ಟ್ರಾಫಿಕ್ ಜಂಟಿ ಆಯುಕ್ತ ರವಿಕಾಂತೆಗೌಡ ವಹಿಸಿಕೊಂಡಿದ್ರು. ತನಿಖೆಯ ನಾಯಕತ್ವವನ್ನು ಎಸ್​ಪಿ ಗಿರೀಶ್ ನಡೆಸಿದ್ರು. ಈ ವೇಳೆ ಡಿವೈಎಸ್‌ಪಿ ಬದ್ರಿನಾಥ್‌ ಬಾಲರಾಜ್‌ ಸೇರಿದಂತೆ ಒಟ್ಟು ನೂರು ಜನರ ತಂಡ ರಚನೆಯಾಗಿತ್ತು.

32 ಮಂದಿ ಬಂಧನ: ಈ ತಂಡಕ್ಕೆ ದುಬೈನಲ್ಲಿ ಮನ್ಸೂರ್ ಖಾನ್‌ ಇರೋದು ಗೊತ್ತಾಗಿತ್ತು. ಅಲ್ಲಿಂದಲೇ ಆತನನ್ನ ಭಾರತಕ್ಕೆ ಮನವೊಲಿಸಿ ಕರೆ ತಂದಿದ್ರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 32 ಜನರನ್ನ ಎಸ್‌ಐಟಿ ಅರೆಸ್ಟ್ ಮಾಡಿತ್ತು. ಇದೀಗ ಈ ಕೇಸ್‌ ಸಿಬಿಐ ತನಿಖೆಯಲ್ಲಿದೆ. ಎರಡು ಪ್ರತ್ಯೇಕ ಚಾರ್ಜ್‌ಶೀಟ್‌ನ ಸಿಬಿಐ ಸಲ್ಲಿಕೆ ಮಾಡಿದೆ. ಮನ್ಸೂರ್‌ 1500 ಕೋಟಿ ರೂಪಾಯಿಯನ್ನ ಸಾರ್ವಜನಿಕರಿಗೆ ವಾಪಸ್‌ ಕೊಡಬೇಕು ಅನ್ನೋದು ತನಿಖೆಯಿಂದ ಗೊತ್ತಾಗಿದೆ. ಆತನಿಗೆ ಸಂಬಂಧಿಸಿದ 210 ಕೋಟಿ ಆಸ್ತಿಯನ್ನ ಜಪ್ತಿ ಮಾಡಲಾಗಿದೆ. ಮನ್ಸೂರ್ ಜೈಲಲ್ಲಿದ್ದಾನೆ.

Follow us on

Related Stories

Most Read Stories

Click on your DTH Provider to Add TV9 Kannada