ಆನ್​ಲೈನ್ ಗೇಮ್ ಪಾಸ್​ವರ್ಡ್​ ಕೊಟ್ಟಿಲ್ಲವೆಂದು ಯುವಕನ ಕೊಂದು, ಸುಟ್ಟು ಹಾಕಿದ ಸ್ನೇಹಿತರು

|

Updated on: Jan 19, 2024 | 10:36 AM

ಕ್ಷುಲ್ಲಕ ವಿಚಾರ ಯುವಕನನ್ನೇ ಬಲಿ ತೆಗೆದುಕೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಆನ್‌ಲೈನ್ ಮೊಬೈಲ್ ಗೇಮ್‌ನ (ಫ್ರೀ ಫೈರ್) ಪಾಸ್‌ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಯುವಕನನ್ನು ಅವನ ನಾಲ್ವರು ಸ್ನೇಹಿತರು ಕೊಲೆ ಮಾಡಿದ್ದಾರೆ. ನಂತರ ಅವರ ದೇಹವನ್ನು ಸ್ನೇಹಿತರು ಸುಟ್ಟು ಹಾಕಿ ಕಾಡಿನಲ್ಲಿ ಎಸೆದಿರುವ ಮಾಹಿತಿ ಲಭ್ಯವಾಗಿದೆ.

ಆನ್​ಲೈನ್ ಗೇಮ್ ಪಾಸ್​ವರ್ಡ್​ ಕೊಟ್ಟಿಲ್ಲವೆಂದು ಯುವಕನ ಕೊಂದು, ಸುಟ್ಟು ಹಾಕಿದ ಸ್ನೇಹಿತರು
ಪೊಲೀಸ್​
Image Credit source: India Today
Follow us on

ಕ್ಷುಲ್ಲಕ ವಿಚಾರ ಯುವಕನನ್ನೇ ಬಲಿ ತೆಗೆದುಕೊಂಡಿರುವ ಘಟನೆ ಪಶ್ಚಿಮ ಬಂಗಾಳ(West Bengal)ದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಆನ್‌ಲೈನ್ ಮೊಬೈಲ್ ಗೇಮ್‌ನ (ಫ್ರೀ ಫೈರ್) ಪಾಸ್‌ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಯುವಕನನ್ನು ಅವನ ನಾಲ್ವರು ಸ್ನೇಹಿತರು ಕೊಲೆ ಮಾಡಿದ್ದಾರೆ. ನಂತರ ಅವರ ದೇಹವನ್ನು ಸ್ನೇಹಿತರು ಸುಟ್ಟು ಹಾಕಿ ಕಾಡಿನಲ್ಲಿ ಎಸೆದಿರುವ ಮಾಹಿತಿ ಲಭ್ಯವಾಗಿದೆ.

ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿದ್ದ ಪಾಪೈ ದಾಸ್ (18) ಶವ ಜನವರಿ 15 ರಂದು ಕಾಡಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕನ ತಾಯಿ ಪೂರ್ಣಿಮಾ ದಾಸ್ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಗಿತ್ತು. ಈ ಐವರು ಕ್ವಾರ್ಟರ್ಸ್​ ಒಂದರಲ್ಲಿ ಆನ್​ಲೈನ್​ ಆಟಗಳನ್ನು ಆಡುತ್ತಿದ್ದರು. ಯುವಕ ಸಜೆ 8 ಗಂಟೆಗೆ ಮನೆಯಿಂದ ಹೊರ ಹೋದವನು ವಾಪಸ್ ಬಂದಿರಲಿಲ್ಲ. ಆತನನ್ನು ಕೊಂದ ಸ್ನೇಹಿತರು ತಮ್ಮ ಬೈಕ್​ಗಳಿಂದ ಪೆಟ್ರೋಲ್ ತೆಗೆದು ಯುವಕನನ್ನು ಸುಟ್ಟುಹಾಕಿದ್ದಾರೆ.

ಮತ್ತಷ್ಟು ಓದಿ: ಹೈದರಾಬಾದ್: ತಲೆ ಕಡಿದು ಬರ್ಬರವಾಗಿ ಪತ್ನಿಯ ಹತ್ಯೆ ಮಾಡಿದ ಆಟೋ ಡ್ರೈವರ್

ಕೊಲೆಯಲ್ಲಿ ಭಾಗಿಯಾಗಿದ್ದ ನಾಲ್ವರು ಅಪ್ರಾಪ್ತ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ನಾಳೆ ಜಿಲ್ಲಾ ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:28 am, Fri, 19 January 24