ನಿನ್ನ ಖಾಸಗಿ ಫೋಟೋಗಳಿವೆ ಎಂದು 18 ವರ್ಷಗಳ ಹಳೆಯ ಸ್ನೇಹಿತನ ಬಳಿಯೇ ಲಕ್ಷ ಲಕ್ಷ ಪೀಕಿದ ಅಣ್ಣ-ತಮ್ಮ

| Updated By: ಆಯೇಷಾ ಬಾನು

Updated on: Feb 05, 2024 | 9:40 AM

ಗೆಳೆಯನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಅಣ್ಣ-ತಮ್ಮ ಸುಳ್ಳಿನ ಜಾಲ ಬೀಸಿ ವಿಶ್ವಾಸ ದ್ರೋಹ ಬಗೆದು ಹಣ ಲೂಟಿ ಮಾಡಿದ್ದಾರೆ. ಓರ್ವ ವ್ಯಕ್ತಿಯ ಬಳಿ ನಿನ್ನ ಖಾಸಗಿ ಫೋಟೋಸ್ ಇದೆ. ಅದನ್ನು ಡಿಲಿಟ್ ಮಾಡಿಸುವೆ ಎಂದು ಗೆಳೆಯನ ಬಳಿಯೇ ಲಕ್ಷಲಕ್ಷ ವಸೂಲಿ ಮಾಡಿದ್ದಾರೆ. ಸ್ನೇಹಿತರ ಮಾತು ನಂಬಿ ಬರೋಬ್ಬರಿ 65 ಲಕ್ಷ ಹಣ ಕಳೆದುಕೊಂಡು ಯುವಕ ಕಂಗಾಲಾಗಿದ್ದಾನೆ.

ನಿನ್ನ ಖಾಸಗಿ ಫೋಟೋಗಳಿವೆ ಎಂದು 18 ವರ್ಷಗಳ ಹಳೆಯ ಸ್ನೇಹಿತನ ಬಳಿಯೇ ಲಕ್ಷ ಲಕ್ಷ ಪೀಕಿದ ಅಣ್ಣ-ತಮ್ಮ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಫೆ.05: ಒಂದು ಉತ್ತಮ ಸ್ನೇಹ (Friendship) ಜೀವನವನ್ನು ಬದಲಾಯಿಸುತ್ತೆ ಎನ್ನುವುದು ಎಷ್ಟು ನಿಜವೋ, ಅದೇ ರೀತಿ ಕೆಟ್ಟ ಸ್ನೇಹ ಜೀವನವನ್ನೇ ನರಕ ಮಾಡುತ್ತೆ ಎಂಬುವುದೂ ಕೂಡ ಅಷ್ಟೇ ಸತ್ಯ. ಬೆಂಗಳೂರಿನಲ್ಲಿ ಸ್ನೇಹದ ಹೆಸರಿನಲ್ಲಿ ಮೋಸ ಹೋದ ಘಟನೆಯೊಂದು ನಡೆದಿದೆ. ನಿನ್ನ ಖಾಸಗಿ ಫೋಟೋ ನಮ್ಮ ಬಳಿ ಇದೆ ಎಂದು ಸುಳ್ಳು ಹೇಳಿ ಗೆಳೆಯನಿಂದಲೇ ಲಕ್ಷ ಲಕ್ಷ ಹಣ ಪಡೆದು ಮೋಸ (Cheat) ಮಾಡಲಾಗಿರುವ ಘಟನೆ ನಡೆದಿದೆ.

ಗೆಳೆಯನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಅಣ್ಣ-ತಮ್ಮ ಸುಳ್ಳಿನ ಜಾಲ ಬೀಸಿ ವಿಶ್ವಾಸ ದ್ರೋಹ ಬಗೆದು ಹಣ ಲೂಟಿ ಮಾಡಿದ್ದಾರೆ. ನಿನ್ನ ಖಾಸಗಿ ಫೋಟೋಸ್ ಇದೆ ಅಂತಾ ಗೆಳೆಯನ ಬಳಿಯೇ ಲಕ್ಷಲಕ್ಷ ವಸೂಲಿ ಮಾಡಿದ್ದಾರೆ. ಸ್ನೇಹಿತರ ಮಾತು ನಂಬಿ ಬರೋಬ್ಬರಿ 65 ಲಕ್ಷ ಹಣ ಕಳೆದುಕೊಂಡು ಯುವಕ ಕಂಗಾಲಾಗಿದ್ದಾನೆ. ಸ್ನೇಹಿತರ ವಿಶ್ವಾಸ ದ್ರೋಹ ಹಾಗೂ ವಂಚನೆ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ತಂಗಿ ಬಗ್ಗೆ ಅಸೂಯೆ, ಬುರ್ಖಾ ಧರಿಸಿ ಬಂದು ಮನೆಯಲ್ಲೇ ಆಭರಣಗಳನ್ನು ಕದ್ದ ಸಹೋದರಿ

ಶಿವಮೊಗ್ಗ ಮೂಲದ ಟೆಕ್ಕಿಯೋರ್ವನ ಜೊತೆ ಸುಮಾರು 18 ವರ್ಷಗಳ ಸ್ನೇಹ ಹೊಂದಿದ್ದ ಅಕ್ಷಯ್ ಕುಮಾರ್ ಹಾಗೂ ಭರತ್ ಎಂಬ ಅಣ್ಣ-ತಪ್ಪ ಮೋಸ ಮಾಡಿದ್ದಾರೆ. ಬಿಟಿಎಂ ಲೇಔಟ್ ಮೂಲದ ಸಹೋದರರು ತಮ್ಮ ಹಳೆಯ ಸ್ನೇಹವನ್ನೇ ದುರುಪಯೋಗ ಪಡಿಸಿಕೊಂಡಿದ್ದಾರೆ. ಸ್ನೇಹಿತ ಒಳ್ಳೆಯ ಕೆಲಸದಲ್ಲಿದ್ದಾನೆ ಎಂದು ಹಣ ವಸೂಲಿ ಮಾಡಿದ್ದಾರೆ. ಅಪರಿಚಿತ ವ್ಯಕ್ತಿ ಬಳಿ ನಿನ್ನ ಖಾಸಗಿ ಫೋಟೋಗಳಿವೆ. ಅವುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸುತ್ತಿದ್ದಾನೆ. ಅವನಿಗೆ ಅರ್ಜೆಂಟಾಗಿ 12 ಲಕ್ಷ ಕೊಡಬೇಕು ಅಂತಾ ನಂಬಿಸಿದ್ದಾರೆ. ಸ್ನೇಹಿತ ನನ್ನ ಒಳ್ಳೆಯದಕ್ಕಾಗಿ ಹೇಳುತ್ತಿದ್ದಾನೆ ಎಂದು ನಂಬಿದ ಟೆಕ್ಕಿ ಹಣ ಕೊ್ಟಿದ್ದಾನೆ. ಹೀಗೆ ಪದೇ ಪದೇ ಹಣ ಪಡೆದು ದೋಖಾ ಮಾಡಿದ್ದಾರೆ.

ಸ್ನೇಹಿತರು ಹೇಳುತ್ತಿರುವುದು ನಿಜ ಎಂದು ನಂಬಿ ಮೋಸ ಹೋದ ಟೆಕ್ಕಿ, ಮನೆಯವರು, ಬ್ಯಾಂಕ್ ಲೋನ್ ಮಾಡಿ ಹಣ ಕೊಟ್ಟಿದ್ದ. ಆದರೆ ಕೊನೆಗೆ ಸ್ನೇಹಿತರಿಬ್ಬರ ಕಳ್ಳಾಟ ಬಯಲಾಗಿದೆ. ಸದ್ಯ ಸ್ನೇಹಿತರ ಮಕ್ಮಲ್ ಟೋಪಿ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಣ್ಣ ತಮ್ಮನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ