ಒಂದೇ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಗೆಳೆಯರು: ಬೆಂಕಿ ಹಚ್ಚಿ ಓರ್ವ ಗೆಳೆಯನ ಕೊಲೆ

ಒಂದೇ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಗೆಳೆಯರು: ಬೆಂಕಿ ಹಚ್ಚಿ ಓರ್ವ ಗೆಳೆಯನ ಕೊಲೆ
ಕೊಲೆಯಾಗಿದ್ದ ವ್ಯಕ್ತಿ ಬಸವರಾಜ್ ಮತ್ತು ಆರೋಪಿ ಜಗದೀಶ್

ಇಬ್ಬರಿಗೂ ತಲೆಖಾನ್ ಮೂಲದ ಒಂದೇ ಮಹಿಳೆ ಜೊತೆ ಅನೈತಿಕ ಸಂಬಂಧವಿತ್ತು. ಇದೇ ಕಾರಣಕ್ಕೆ ಬಸವರಾಜ್​​ನನ್ನು ಕೊಲ್ಲಬೇಕು ಅಂತ ಜಗದೀಶ್, ಜಗದೀಶ್​ನನ್ನ ಕೊಲ್ಲಬೇಕು ಅಂತ ಮೃತ ಬಸವರಾಜ್ ಪ್ಲಾನ್ ಮಾಡಿದ್ದರು.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 15, 2022 | 11:04 AM

ರಾಯಚೂರು: ಸುಟ್ಟು ಕರಕಲಾಗಿದ್ದ ಅಪರಿಚಿತ ವ್ಯಕ್ತಿ ಕೊಲೆ (Murder) ಪ್ರಕರಣ ಸಂಬಂಧ ಅರ್ಧಂಬರ್ಧ ಸುಟ್ಟ ಕೈಬೆರಳಲ್ಲಿನ ಉಂಗುರುಗಳು, ಚಪ್ಪಲಿ ಆಧಾರದಲ್ಲಿ ಕೇಸ್ ಟ್ರೇಸ್ ಮಾಡಲಾಗಿದೆ. ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಿದ್ದಿಗಿ ಬಳಿ ಘಟನೆ ನಡೆದಿದೆ. ಇದೇ ಮೇ 8 ರಂದು ನಡೆದಿದ್ದ ಕೊಲೆ, ಮೇ 9 ರಂದು ಬೆಳಕಿಗೆ ಬಂದಿದೆ. ಒಬ್ಬಳು ಮಹಿಳೆ ಜೊತೆ ಗೆಳೆಯರು ಅನೈತಿಕ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ಸ್ನೇಹಿತನ್ನು ಸುಟ್ಟು ಹಾಕಿ ಕೊಲೆ ಮಾಡಲಾಗಿದೆ. ಬಸವರಾಜ್ (35)ಕೊಲೆಯಾಗಿದ್ದ ವ್ಯಕ್ತಿ. ಈತ ಮಸ್ಕಿ ತಾಲ್ಲೂಕಿನ ತಲೆಖಾನ್ ನಿವಾಸಿಯಾಗಿದ್ದಾನೆ. ಜವಳಗೇರಾ ಮೂಲದ ಜಗದೀಶ್ ಹಚ್ಚೋಳಿಯನ್ನು ಬಳಗಾನೂರ ಪೊಲೀಸರು ಬಂಧಿಸಿದ್ದಾರೆ. ಮೃತ ಬಸವರಾಜ್ ಹಾಗೂ ಆರೋಪಿ ಜಗದೀಶ್ ಸ್ನೇಹಿತರಾಗಿದ್ದು, ಇಬ್ಬರು ಭತ್ತ ಕಟಾವು ಮಾಡೊ ಮಿಷಿನ್ ಆಪರೇಟರ್​ಗಳಾಗಿದ್ದರು. ಇಬ್ಬರಿಗೂ ತಲೆಖಾನ್ ಮೂಲದ ಒಂದೇ ಮಹಿಳೆ ಜೊತೆ ಅನೈತಿಕ ಸಂಬಂಧವಿತ್ತು. ಇದೇ ಕಾರಣಕ್ಕೆ ಬಸವರಾಜ್​​ನನ್ನು ಕೊಲ್ಲಬೇಕು ಅಂತ ಜಗದೀಶ್, ಜಗದೀಶ್​ನನ್ನ ಕೊಲ್ಲಬೇಕು ಅಂತ ಮೃತ ಬಸವರಾಜ್ ಪ್ಲಾನ್ ಮಾಡಿದ್ದರು.

ಈ ಮಧ್ಯೆ ಮೃತ ಬಸವರಾಜ್ ಸಹೋದರ ನಾಗರಾಜ್ ಮದುವೆ ಫಿಕ್ಸ್ ಆಗಿತ್ತು. ಆಗ ಒಂದು ಲಕ್ಷ ಸಾಲ ಕೊಡಿಸೋದಾಗಿ ನಂಬಿಸಿ ಕರೆದೊಯ್ದಿದ್ದ ಆರೋಪಿ ಜಗದೀಶ್, ಬಹುರ್ದೆಸೆಗೆಂದು ದಿದ್ದಿಗಿ ಬಳಿ ನಿರ್ಜನ ಪ್ರದೇಶದಲ್ಲಿ ಕರೆದೊಯ್ದಿದ್ದಾನೆ. ಆಗ ಬೈಕ್ ಓಡಿಸುತ್ತಿದ್ದ ಬಸವರಾಜ್ ಕುತ್ತಿಗೆಯನ್ನು  ಬಾರ್ಬರ್ ಶಾಪ್​ನಲ್ಲಿ ಬಳಸೊ ಬ್ಲೇಡ್​ನಿಂದ ಕುಯ್ದಿದ್ದಾನೆ. ಬಳಿಕ ಬಸವರಾಜ್​ಗೆ ಬೈಕ್​ನಲ್ಲಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ನಂತರ ಕ್ಯಾನಲ್‌ ವೊಂದರಲ್ಲಿ ಬೈಕ್ ತೊಳೆದು ಸಿಂಧನೂರು ಬಸ್ ನಿಲ್ದಾಣದಲ್ಲಿ ಬಿಟ್ಟಿದ್ದ. ಮೃತನ ಫೋನ್ ತೆಗೆದುಕೊಂಡು ವಿವಿಧ ಕಡೆ ಓಡಾಡಿ ಸಾಕ್ಷಿ ನಾಶಕ್ಕೆ ಯತ್ನಿಸಿದ್ದ. ಬಳಿಕ ಮೃತನ ಕುಟುಂಬಸ್ಥರಿಂದ ನಾಪತ್ತೆ ಕೇಸ್ ದಾಖಲು ಮಾಡಲಾಗಿದೆ. ಆ ಬಳಿಕ ಮೃತನ ಬೆರಳಿನಲ್ಲಿದ್ದ ಉಂಗುರಗಳು, ಚಪ್ಪಲಿ ಆಧಾರದಲ್ಲಿ ಕೇಸ್ ಪತ್ತೆ ಮಾಡಲಾಗಿದೆ. ನಂತರ ಆರೋಪಿ ಜಗದೀಶ್ ಬಂಧಿಸಲಾಗಿದೆ. ಈ ಬಗ್ಗೆ ಬಳಗಾನೂರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ತುಮಕೂರು: ತುಮಕೂರು (Tumakuru) ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗಿನ ಜಾವ ವಿದ್ಯಾರ್ಥಿನಿ ತೇಜಾ(19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ತೇಜಾ ಪಾವಗಡದಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದರು. ವಿದ್ಯಾರ್ಥಿನಿ ತೇಜಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada