ಸೈಬರ್ ಪೊಲೀಸರ ದಾಳಿ; ಗಾಂಜಾ ಮಾರುತ್ತಿದ್ದ ಟಂ ಟಂ ಚಾಲಕರ ಬಂಧನ, ‌ಮತ್ತೊಬ್ಬ ಪರಾರಿ

ಸಾರ್ವಜನಿಕವಾಗಿ ಜನನಿಬಿಡ ಬಸ್ ನಿಲ್ದಾಣದ ಬಳಿ ರಸ್ತೆಯ ಮೇಲೆ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ 3 ಟಂ ಟಂ ಚಾಲಕರ ಮೇಲೆ ಸಿಇಎನ್ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

ಸೈಬರ್ ಪೊಲೀಸರ ದಾಳಿ; ಗಾಂಜಾ ಮಾರುತ್ತಿದ್ದ ಟಂ ಟಂ ಚಾಲಕರ ಬಂಧನ, ‌ಮತ್ತೊಬ್ಬ ಪರಾರಿ
ಸೈಬರ್ ಪೊಲೀಸರ ದಾಳಿ; ಗಾಂಜಾ ಮಾರುತ್ತಿದ್ದ ಟಂ ಟಂ ಚಾಲಕರ ಬಂಧನ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​

Updated on: Jan 16, 2024 | 11:37 AM

ಗದಗ, ಜನವರಿ 16: ಸಾರ್ವಜನಿಕವಾಗಿ ಜನನಿಬಿಡ ಬಸ್ ನಿಲ್ದಾಣದ ಬಳಿ ರಸ್ತೆಯ ಮೇಲೆ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಟಂ ಟಂ ಚಾಲಕರ ಮೇಲೆ ಸಿಇಎನ್ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಪರಾರಿಯಾದ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ.

ಸಿಇಎನ್ ಪೊಲೀಸ್ ಠಾಣೆಯ ಎಸ್. ಎಮ್. ಶಿರಗುಪ್ಪಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದು, ಹುಲಕೋಟಿ ಗ್ರಾಮದ ಸಾಯಿ ನಗರ‌ ನಿವಾಸಿಗಳಾದ ಟಂ ಟಂ ಚಾಲಕರಾದ ಮಣಿಕಂಠ ತಂದೆ ಕರಿಯಪ್ಪ ಕೊಂಡಿಕೊಪ್ಪ (22), ಹರೀಶ್ ತಂದೆ ಹನಮಂತಪ್ಪ ಹರಕುಣಿ (23) ಎಂಬ ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಮರಿಯಪ್ಪ ತಂದೆ ಕರಿಯಪ್ಪ ಕವಡಿಕಿ ಎಂಬ ಟಂ ಟಂ ಚಾಲಕ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿನ ಸೈಬರ್​ ಕ್ರೈಂ ಪ್ರಕರಣಗಳ ಪತ್ತೆಗೆ ನಾಲ್ವರು ಡಿಸಿಪಿಗಳ ನೇಮಕ

ಬಂಧಿತರಿಂದ 13,440 ರೂ. ಮೌಲ್ಯದ 448 ಗ್ರಾಮ ಗಾಂಜಾ ಹಾಗೂ ಟಂ‌ಟಂ ಜಪ್ತಿ ಮಾಡಲಾಗಿದೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ 0006/2024-NARCOTIC DRUGS AND PSYCHOTROPIC SUBSTANCE ACT, 1985( U/s-20(b)(¡¡)(A)) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ