Tractor ಕಳ್ಳತನ ಮಾಡಿದ್ದ ‘ಗಲೀಜು ಕಳ್ಳ’ ಕೊನೆಗೂ ಖಾಕಿ ವಶಕ್ಕೆ

| Updated By: ಸಾಧು ಶ್ರೀನಾಥ್​

Updated on: Aug 06, 2020 | 4:17 PM

ಬೆಂಗಳೂರು: ನಗರದಲ್ಲಿ ಟ್ರ್ಯಾಕ್ಟರ್​ ಕಳ್ಳತನ ಮಾಡುತ್ತಿದ್ದವನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ಗಣೇಶನ್ ಅಲಿಯಾಸ್ ಗಲೀಜು ಬಂಧಿತ ಆರೋಪಿ. ತಮಿಳುನಾಡು ಮೂಲದ ಈ ಪ್ರೊಫೆಷನಲ್ ಕಳ್ಳ ಬೆಂಗಳೂರಲ್ಲಿ ಟ್ರ್ಯಾಕ್ಟರ್ ಓಡಿಸಲು ಬಂದಿದ್ದ. ಇದೇ ವೇಳೆ ಕೆಲಸ ಕೊಟ್ಟ ಮಾಲೀಕನ ಟ್ರ್ಯಾಕ್ಟರ್​ ಕಳ್ಳತನ ಮಾಡಲು ಮುಂದಾಗಿದ್ದ ಗಲೀಜು. ಆದರೆ, ಅದೇ ಸಮಯದಲ್ಲಿ ಮತ್ತೊಂದು ಚೆನ್ನಾಗಿದ್ದ ಟ್ರಾಕ್ಟರ್, ಗಣೇಶನ್ ಕಣ್ಣಿಗೆ ಬಿದ್ದು ಅದನ್ನ ಕಳ್ಳತನ ಮಾಡಲು ಮುಂದಾದ. ಅಂತೆಯೇ, ಕಳೆದ ಜನವರಿಯಲ್ಲಿ ನವಾಜ್ ಜಾನ್ ಎಂಬುವವರ ಟ್ರ್ಯಾಕ್ಟರ್​ ಅನ್ನು ಗಣೇಶನ್ […]

Tractor ಕಳ್ಳತನ ಮಾಡಿದ್ದ ‘ಗಲೀಜು ಕಳ್ಳ’ ಕೊನೆಗೂ ಖಾಕಿ ವಶಕ್ಕೆ
Follow us on

ಬೆಂಗಳೂರು: ನಗರದಲ್ಲಿ ಟ್ರ್ಯಾಕ್ಟರ್​ ಕಳ್ಳತನ ಮಾಡುತ್ತಿದ್ದವನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ಗಣೇಶನ್ ಅಲಿಯಾಸ್ ಗಲೀಜು ಬಂಧಿತ ಆರೋಪಿ.

ತಮಿಳುನಾಡು ಮೂಲದ ಈ ಪ್ರೊಫೆಷನಲ್ ಕಳ್ಳ ಬೆಂಗಳೂರಲ್ಲಿ ಟ್ರ್ಯಾಕ್ಟರ್ ಓಡಿಸಲು ಬಂದಿದ್ದ. ಇದೇ ವೇಳೆ ಕೆಲಸ ಕೊಟ್ಟ ಮಾಲೀಕನ ಟ್ರ್ಯಾಕ್ಟರ್​ ಕಳ್ಳತನ ಮಾಡಲು ಮುಂದಾಗಿದ್ದ ಗಲೀಜು. ಆದರೆ, ಅದೇ ಸಮಯದಲ್ಲಿ ಮತ್ತೊಂದು ಚೆನ್ನಾಗಿದ್ದ ಟ್ರಾಕ್ಟರ್, ಗಣೇಶನ್ ಕಣ್ಣಿಗೆ ಬಿದ್ದು ಅದನ್ನ ಕಳ್ಳತನ ಮಾಡಲು ಮುಂದಾದ.

ಅಂತೆಯೇ, ಕಳೆದ ಜನವರಿಯಲ್ಲಿ ನವಾಜ್ ಜಾನ್ ಎಂಬುವವರ ಟ್ರ್ಯಾಕ್ಟರ್​ ಅನ್ನು ಗಣೇಶನ್ ಕದ್ದಿದ್ದ. ಈ ಕುರಿತು ಬಂಡೆಪಾಳ್ಯ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಲಾಕ್​ಡೌನ್ ಇದ್ದ ಕಾರಣ ಪೊಲೀಸರು ಆರೋಪಿಯನ್ನ ಬಂಧಿಸಲು ಸಾಧ್ಯವಾಗಿರಲಿಲ್ಲ. ಇದೀಗ ಲಾಕ್ ಡೌನ್ ತೆರವಾಗಿದ್ದು ಗಣೇಶನ್​ನ ಕೊನೆಗೂ ಬಂಧಿಸಿದ್ದಾರೆ.

​ಆರೋಪಿಯ ವಿರುದ್ಧ ಈ ಹಿಂದೆ ಮಾಲೂರು ಪೊಲೀಸ್ ಠಾಣೆಯಲ್ಲಿ ಟ್ರಾಕ್ಟರ್ ಕಳ್ಳತನದ ಮತ್ತೊಂದು ಕೇಸ್ ಸಹ ದಾಖಲಾಗಿತ್ತು ಎಂದು ತಿಳಿದುಬಂದಿದೆ.