AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯ Mobile Hack: ನಿಮ್ಮ Hot Photo ಗಳಿದ್ದರೆ ಕಳಿಸಿ ಅಂತಾ ಮೆಸೇಜ್!​

ಬೆಂಗಳೂರು: ಮಹಿಳೆಯ ಮೊಬೈಲ್ ಹ್ಯಾಕ್ ಮಾಡಿದ ಹ್ಯಾಕರ್​ಗಳು ಆಕೆಯ ಸ್ನೇಹಿತರಿಗೆ ಅಶ್ಲೀಲ ಸಂದೇಶ ಕಳಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಹ್ಯಾಕರ್ಸ್ ಹಾವಳಿಯಿಂದ ಬೇಸತ್ತ ಸಂತ್ರಸ್ಥ ಮಹಿಳೆ ಠಾಣೆಗೆ ದೂರು ನೀಡಿದ್ದಾಳೆ. ನಗರದ ಬಸವನಗುಡಿ ನಿವಾಸಿಯಾದ 36 ವರ್ಷದ ವಿವಾಹಿತ ಮಹಿಳೆಯ ನಂಬರ್ ಹ್ಯಾಕ್ ಆಗಿದೆ. ಸಂತ್ರಸ್ಥೆ ಹಾಗೂ ಆಕೆಯ ಸ್ನೇಹಿತರು ಸೇರಿ ಒಂದು WhatsApp ಗ್ರೂಪ್ ಕ್ರಿಯೇಟ್ ಮಾಡಿದ್ರು. ಆ ಗ್ರೂಪ್​ನಲ್ಲಿ ಸಂತ್ರಸ್ಥ ಮಹಿಳೆ ಕೂಡ ಅಡ್ಮಿನ್ ಆಗಿದ್ರು. ಈ ನಡುವೆ ಯಾರೋ ಅಪರಿಚಿತರು ಕರೆ […]

ಮಹಿಳೆಯ Mobile Hack: ನಿಮ್ಮ Hot Photo ಗಳಿದ್ದರೆ ಕಳಿಸಿ ಅಂತಾ ಮೆಸೇಜ್!​
ಸಾಂದರ್ಭಿಕ ಚಿತ್ರ
KUSHAL V
| Updated By: ಸಾಧು ಶ್ರೀನಾಥ್​|

Updated on:Aug 06, 2020 | 12:40 PM

Share

ಬೆಂಗಳೂರು: ಮಹಿಳೆಯ ಮೊಬೈಲ್ ಹ್ಯಾಕ್ ಮಾಡಿದ ಹ್ಯಾಕರ್​ಗಳು ಆಕೆಯ ಸ್ನೇಹಿತರಿಗೆ ಅಶ್ಲೀಲ ಸಂದೇಶ ಕಳಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಹ್ಯಾಕರ್ಸ್ ಹಾವಳಿಯಿಂದ ಬೇಸತ್ತ ಸಂತ್ರಸ್ಥ ಮಹಿಳೆ ಠಾಣೆಗೆ ದೂರು ನೀಡಿದ್ದಾಳೆ.

ನಗರದ ಬಸವನಗುಡಿ ನಿವಾಸಿಯಾದ 36 ವರ್ಷದ ವಿವಾಹಿತ ಮಹಿಳೆಯ ನಂಬರ್ ಹ್ಯಾಕ್ ಆಗಿದೆ. ಸಂತ್ರಸ್ಥೆ ಹಾಗೂ ಆಕೆಯ ಸ್ನೇಹಿತರು ಸೇರಿ ಒಂದು WhatsApp ಗ್ರೂಪ್ ಕ್ರಿಯೇಟ್ ಮಾಡಿದ್ರು. ಆ ಗ್ರೂಪ್​ನಲ್ಲಿ ಸಂತ್ರಸ್ಥ ಮಹಿಳೆ ಕೂಡ ಅಡ್ಮಿನ್ ಆಗಿದ್ರು.

ಈ ನಡುವೆ ಯಾರೋ ಅಪರಿಚಿತರು ಕರೆ ಮಾಡಿ ನಿಮಗೆ ಲಿಂಕ್ ಒಂದು ಕಳುಹಿಸಿದ್ದೇವೆ. ಅದನ್ನ ಓಪನ್ ಮಾಡಿ ನೋಡಿ ಎಂದು ಕಾಲ್ ಕಟ್ ಮಾಡಿದ್ದಾರೆ. ಅದರಂತೆ ಲಿಂಕ್ ಓಪನ್ ಮಾಡುತ್ತಿದ್ದಂತೆ ಮಹಿಳೆಯ ನಂಬರ್ ಹ್ಯಾಕ್ ಆಗಿದೆ. ಬಳಿಕ ಗ್ರೂಪ್​ನಲ್ಲಿರೋ ಎಲ್ಲಾ ಮಹಿಳೆಯರ ನಂಬರ್​ಗೆ ಅಶ್ಲೀಲ ಫೋಟೋಗಳನ್ನ ಕಳುಹಿಸಲಾಗಿದೆ.

ಅಷ್ಟೇ ಅಲ್ಲದೇ ಮಹಿಳೆ ನಂಬರ್​ನಿಂದ ದುಷ್ಕರ್ಮಿಗಳು ಅಶ್ಲೀಲ ವಿಡಿಯೋಗಳನ್ನೂ ಸಹ ಕಳುಹಿಸಿದ್ದಾರೆ. ಬಳಿಕ ಮಹಿಳೆಯ ನಂಬರ್​ನಿಂದ ಸ್ನೇಹಿತರಿಗೆ ಪರ್ಸನಲ್ ಮೆಸೇಜ್ ಕಳಿಸಿ ನಿಮ್ಮ ಹಾಟ್ ಫೋಟೋಗಳಿದ್ದರೆ ಕಳುಹಿಸಿ, ಒಂದೊಂದು ಫೋಟೋಗೆ ಇಂತಿಷ್ಟು ಹಣ ಕೊಡುತ್ತೇನೆ. ನೀವು ಆರಾಮವಾಗಿ ಜೀವನ ನಡೆಸಬಹುದು ಎಂದು ಮೆಸೇಜ್ ಮಾಡಿದ್ದಾರಂತೆ.

ಈ ವಿಚಾರ ತಿಳಿಯುತ್ತಿದ್ದಂತೆ ಶಾಕ್​ ಆದ ಮಹಿಳೆಯು ನಗರದ ದಕ್ಷಿಣ ವಿಭಾಗ Cyber Security ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

Published On - 12:40 pm, Thu, 6 August 20