Tractor ಕಳ್ಳತನ ಮಾಡಿದ್ದ ‘ಗಲೀಜು ಕಳ್ಳ’ ಕೊನೆಗೂ ಖಾಕಿ ವಶಕ್ಕೆ
ಬೆಂಗಳೂರು: ನಗರದಲ್ಲಿ ಟ್ರ್ಯಾಕ್ಟರ್ ಕಳ್ಳತನ ಮಾಡುತ್ತಿದ್ದವನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ಗಣೇಶನ್ ಅಲಿಯಾಸ್ ಗಲೀಜು ಬಂಧಿತ ಆರೋಪಿ. ತಮಿಳುನಾಡು ಮೂಲದ ಈ ಪ್ರೊಫೆಷನಲ್ ಕಳ್ಳ ಬೆಂಗಳೂರಲ್ಲಿ ಟ್ರ್ಯಾಕ್ಟರ್ ಓಡಿಸಲು ಬಂದಿದ್ದ. ಇದೇ ವೇಳೆ ಕೆಲಸ ಕೊಟ್ಟ ಮಾಲೀಕನ ಟ್ರ್ಯಾಕ್ಟರ್ ಕಳ್ಳತನ ಮಾಡಲು ಮುಂದಾಗಿದ್ದ ಗಲೀಜು. ಆದರೆ, ಅದೇ ಸಮಯದಲ್ಲಿ ಮತ್ತೊಂದು ಚೆನ್ನಾಗಿದ್ದ ಟ್ರಾಕ್ಟರ್, ಗಣೇಶನ್ ಕಣ್ಣಿಗೆ ಬಿದ್ದು ಅದನ್ನ ಕಳ್ಳತನ ಮಾಡಲು ಮುಂದಾದ. ಅಂತೆಯೇ, ಕಳೆದ ಜನವರಿಯಲ್ಲಿ ನವಾಜ್ ಜಾನ್ ಎಂಬುವವರ ಟ್ರ್ಯಾಕ್ಟರ್ ಅನ್ನು ಗಣೇಶನ್ […]
ಬೆಂಗಳೂರು: ನಗರದಲ್ಲಿ ಟ್ರ್ಯಾಕ್ಟರ್ ಕಳ್ಳತನ ಮಾಡುತ್ತಿದ್ದವನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ಗಣೇಶನ್ ಅಲಿಯಾಸ್ ಗಲೀಜು ಬಂಧಿತ ಆರೋಪಿ.
ತಮಿಳುನಾಡು ಮೂಲದ ಈ ಪ್ರೊಫೆಷನಲ್ ಕಳ್ಳ ಬೆಂಗಳೂರಲ್ಲಿ ಟ್ರ್ಯಾಕ್ಟರ್ ಓಡಿಸಲು ಬಂದಿದ್ದ. ಇದೇ ವೇಳೆ ಕೆಲಸ ಕೊಟ್ಟ ಮಾಲೀಕನ ಟ್ರ್ಯಾಕ್ಟರ್ ಕಳ್ಳತನ ಮಾಡಲು ಮುಂದಾಗಿದ್ದ ಗಲೀಜು. ಆದರೆ, ಅದೇ ಸಮಯದಲ್ಲಿ ಮತ್ತೊಂದು ಚೆನ್ನಾಗಿದ್ದ ಟ್ರಾಕ್ಟರ್, ಗಣೇಶನ್ ಕಣ್ಣಿಗೆ ಬಿದ್ದು ಅದನ್ನ ಕಳ್ಳತನ ಮಾಡಲು ಮುಂದಾದ.
ಅಂತೆಯೇ, ಕಳೆದ ಜನವರಿಯಲ್ಲಿ ನವಾಜ್ ಜಾನ್ ಎಂಬುವವರ ಟ್ರ್ಯಾಕ್ಟರ್ ಅನ್ನು ಗಣೇಶನ್ ಕದ್ದಿದ್ದ. ಈ ಕುರಿತು ಬಂಡೆಪಾಳ್ಯ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಲಾಕ್ಡೌನ್ ಇದ್ದ ಕಾರಣ ಪೊಲೀಸರು ಆರೋಪಿಯನ್ನ ಬಂಧಿಸಲು ಸಾಧ್ಯವಾಗಿರಲಿಲ್ಲ. ಇದೀಗ ಲಾಕ್ ಡೌನ್ ತೆರವಾಗಿದ್ದು ಗಣೇಶನ್ನ ಕೊನೆಗೂ ಬಂಧಿಸಿದ್ದಾರೆ.
ಆರೋಪಿಯ ವಿರುದ್ಧ ಈ ಹಿಂದೆ ಮಾಲೂರು ಪೊಲೀಸ್ ಠಾಣೆಯಲ್ಲಿ ಟ್ರಾಕ್ಟರ್ ಕಳ್ಳತನದ ಮತ್ತೊಂದು ಕೇಸ್ ಸಹ ದಾಖಲಾಗಿತ್ತು ಎಂದು ತಿಳಿದುಬಂದಿದೆ.