ಕೊರೊನಾ ಸೋಂಕಿನ ಭಯಕ್ಕೆ.. ಮನೆ ತೊರೆದವರ Flat ಗಳಿಗೆ ಕನ್ನ!
ಬೆಂಗಳೂರು: ಒಂದೇ ಅಪಾರ್ಟ್‌ಮೆಂಟ್‌ನಲ್ಲಿರುವ 4 ಫ್ಲ್ಯಾಟ್‌ಗಳಲ್ಲಿ ಕಳ್ಳತನವಾಗಿರೋ ಘಟನೆ ನಗರದ ಫ್ರೇಜರ್‌ಟೌನ್‌ನಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ಥರು ವಾಸವಿದ್ದ ಅಪಾರ್ಟ್‌ಮೆಂಟ್‌ನ ಪಕ್ಕದ ಬಿಲ್ಡಿಂಗ್ನಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು. ಜೊತೆಗೆ ಅಪಾರ್ಟ್ ಮೆಂಟ್ನಲ್ಲಿ ಓರ್ವ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ, ಈತನು ಕೊರೊನಾದಿಂದ ಸಾವನ್ನಪ್ಪಿರೋದಾಗಿ ಅನುಮಾನಗೊಂಡಿದ್ದ ಫ್ಲ್ಯಾಟ್ ನಿವಾಸಿಗಳು ಸೋಂಕಿನ ಭೀತಿಯಿಂದ ಊರಿನಲ್ಲಿದ್ದ ಸಂಬಂಧಿಕರ ಮನೆಗೆ ತೆರಳಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ನಾಲ್ಕು ಫ್ಲ್ಯಾಟ್ಗಳಿಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದಾರೆ. ಸುಮಾರು 20 ಲಕ್ಷ ರೂಪಾಯಿ […]
ಬೆಂಗಳೂರು: ಒಂದೇ ಅಪಾರ್ಟ್‌ಮೆಂಟ್‌ನಲ್ಲಿರುವ 4 ಫ್ಲ್ಯಾಟ್‌ಗಳಲ್ಲಿ ಕಳ್ಳತನವಾಗಿರೋ ಘಟನೆ ನಗರದ ಫ್ರೇಜರ್‌ಟೌನ್‌ನಲ್ಲಿ ಬೆಳಕಿಗೆ ಬಂದಿದೆ.
ಸಂತ್ರಸ್ಥರು ವಾಸವಿದ್ದ ಅಪಾರ್ಟ್‌ಮೆಂಟ್‌ನ ಪಕ್ಕದ ಬಿಲ್ಡಿಂಗ್ನಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು. ಜೊತೆಗೆ ಅಪಾರ್ಟ್ ಮೆಂಟ್ನಲ್ಲಿ ಓರ್ವ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ, ಈತನು ಕೊರೊನಾದಿಂದ ಸಾವನ್ನಪ್ಪಿರೋದಾಗಿ ಅನುಮಾನಗೊಂಡಿದ್ದ ಫ್ಲ್ಯಾಟ್ ನಿವಾಸಿಗಳು ಸೋಂಕಿನ ಭೀತಿಯಿಂದ ಊರಿನಲ್ಲಿದ್ದ ಸಂಬಂಧಿಕರ ಮನೆಗೆ ತೆರಳಿದ್ದರು.
ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ನಾಲ್ಕು ಫ್ಲ್ಯಾಟ್ಗಳಿಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದಾರೆ. ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದಾರೆ. ಜೊತೆಗೆ, ಲೈಸೆನ್ಸ್ gun ಸಹ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಆದರೆ, 2 ಫ್ಲ್ಯಾಟ್‌ಗಳು ಖಾಲಿ ಮಾಡಿದ್ದ ಹಿನ್ನೆಲೆಯಲ್ಲಿ ಕಳ್ಳರಿಗೆ ಏನೂ ಸಿಕ್ಕಿಲ್ಲ. ಸದ್ಯ ಭಾರತಿನಗರ ಠಾಣೆಯಲ್ಲಿ 2 ಪ್ರತ್ಯೇಕ ಕೇಸ್ ದಾಖಲಾಗಿದೆ.