ಬೆಂಗಳೂರು: ಮೈ ಬಗ್ಗಿಸಿ ದುಡಿಯುವ ಬದಲು ತಮ್ಮ ಮೋಜು ಮಸ್ತಿಗಾಗಿ ಇತರರು ಕಷ್ಟಪಟ್ಟು ದುಡಿದು ಖರೀದಿಸಿ ಬೈಕ್ಗಳನ್ನು (Bike theft) ಕದಿಯುತ್ತಿದ್ದ ಖತರ್ನಾಕ್ ಆರೋಪಿಗಳ ಗ್ಯಾಂಗ್ ಇದೀಗ ಬೆಂಗಳೂರು (Bangalore) ಪೊಲೀಸರ ಬಲೆಗೆ ಬಿದ್ದಿದೆ. ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರು ಮತ್ತು ತಮಿಳುನಾಡಿನಲ್ಲಿ (Tamil Nadu) ಬೈಕ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಬೈಕ್ ಕಳವು ಮಾಡುತ್ತಿದ್ದ 7 ಆರೋಪಿಗಳ ಸಹಿತ 1.20 ಕೋಟಿಗೂ ಹೆಚ್ಚು ಮೌಲ್ಯದ 72 ಬೈಕ್ಗಳನ್ನು ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಬೈಕ್ಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳು, ನಂತರ ಆ ಬೈಕ್ಗಳನ್ನು ತಮಿಳುನಾಡು ರಾಜ್ಯಕ್ಕೆ ಕಡಿಮೆ ಬೆಲೆಗೆ ಮಾರಿ ಮೋಜು ಮಸ್ತಿ ಮಾಡುತ್ತಿದ್ದರು. ಕಳವು ಮಾಡಿದ 2 ಲಕ್ಷ ಮೌಲ್ಯದ ಬೈಕ್ಗಳನ್ನ ಕೇವಲ 25 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಹೊಸೂರು ಟೋಲ್ನಲ್ಲಿ 100 ರೂಪಾಯಿ ಕೊಟ್ಟು ತಮಿಳುನಾಡಿಗೆ ಕಂಡೊಯ್ದು ಅಲ್ಲಿನ ರಿಜಿಸ್ಟ್ರೇಷನ್ ನಂಬರ್ ಹಾಕಿಸಿ ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ: Bangalore Airport: ಅಬ್ಬಬ್ಬಾ..! ಚಿನ್ನವನ್ನೇ ಪಾದುಕೆ ಮಾಡಿಕೊಂಡು ಸಾಗಿಸುತ್ತಿದ್ದವ ಬೆಂಗಳೂರು ಏರ್ಪೋಟ್ನಲ್ಲಿ ಸಿಕ್ಕಿಬಿದ್ದ
ದೊಡ್ಡ ಬೆಲೆಯ ಬೈಕ್ಗಳನ್ನು 25 ಸಾವಿರಕ್ಕೆ ಮಾರಾಟ ಮಾಡಿದರೆ, ಕಡಿಮೆ ಬೆಲೆ ಬೈಕ್ಗಳನ್ನು 10 ಸಾವಿರಕ್ಕೂ ಮಾರಾಟ ಮಾಡುತ್ತಿದ್ದರು. ತಮಿಳುನಾಡಿನ ವಾನಂಬಾಡಿ, ಹುಡುಗತ್ತೂರು, ಅಳಂಗಾಯಂ, ಜಮುನಾ ಮತ್ತೂರುರಿನಲ್ಲಿ ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆಗೆ ಬೈಕ್ ಸಿಗುತ್ತದೆ ಅಂತಾ ಯಾವುದೇ ಡಾಕ್ಯುಮೆಂಟ್ಸ್ ಕೇಳದೆ ಜನರು ಖರೀದಿಸುತ್ತಿದ್ದರು. ಕೆಲವರು ದಾಖಲೆ ಕೇಳಿದರೆ ಬೈಕ್ ಮೇಲೆ ಲೋನ್ ಇದೆ ಇದು ಕ್ಲಿಯರ್ ಅದ ಮೇಲೆ ಸಿಗುತ್ತದೆ ಅಂತ ನಂಬಿಸಿ ಮೋಸ ಮಾಡುತ್ತಿದ್ದರು.
ಬೈಕ್ ಕಳ್ಳತನದ ಬಗ್ಗೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗೆ ಇಳಿದ ಪೊಲೀಸರು ಖತರ್ನಾಕ್ ಗ್ಯಾಂಗ್ ಅನ್ನು ಬಂಧಿಸಿ 1.20 ಕೋಟಿಗೂ ಹೆಚ್ಚು ಮೌಲ್ಯದ 72 ಬೈಕ್ಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ. ಎಲ್ಲೆಲ್ಲಿ ಬೈಕ್ಗಳನ್ನು ಕಳವು ಮಾಡಲಾಗಿದೆ, ಕದ್ದ ಬೈಕ್ಗಳನ್ನು ಯಾರಿಗೆ ಮಾರಲಾಗಿದೆ ಮತ್ತು ಅವುಗಳನ್ನು ವಶಕ್ಕೆ ಪಡೆಯಲು ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅಗ್ನೇಯ ವಿಭಾಗ ಡಿಸಿಪಿ ಸಿ.ಕೆ ಬಾಬಾ, ಕುಖ್ಯಾತ ಅಂತರಾಜ್ಯ ಬೈಕ್ ಕಳ್ಳರ ಬಂಧನ ಮಾಡಿದ್ದೇವೆ. ಒಟ್ಟು 1 ಕೋಟಿ 20 ಲಕ್ಷ ಮೌಲ್ಯದ ಬೈಕ್ಗಳನ್ನ ವಶಪಡಿಸಿಕೊಂಡಿದ್ದೇವೆ. ಅಗ್ನೇಯ ವಿಭಾಗದ ವಿವಿಧ ಠಾಣೆಗಳಲ್ಲಿ ಬೈಕ್ ಕಳ್ಳತನವಾಗಿತ್ತು. ಹೈ ಎಂಡ್ ಬೈಕ್ಗಳನ್ನ ಟಾರ್ಗೆಟ್ ಮಾಡುತ್ತಿದ್ದರು. ಮೊದಲಿಗೆ ಒಬ್ಬನನ್ನ ಬಂಧಿಸಿ ವಿಚಾರಣೆ ಮಾಡಿದ್ದೆವು. ಪ್ರಮುಖ ಆರೋಪಿ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಅಗಿ ಕೆಲಸ ಮಾಡುತ್ತಿದ್ದ. ಯಾವ ರೀತಿ ಬೈಕ್ ಸ್ಟಾರ್ಟ್ ಮಾಡಬೇಕು ಅನ್ನೋದನ್ನ ಕೂಡ ಕಲಿಸುತ್ತಿದ್ದ. ಬಸ್ ಮೂಲಕ ಬೆಂಗಳೂರಿಗೆ ಬರುತ್ತಿದ್ದ ಆರೋಪಿಗಳು ಅಗ್ನೇಯ ವಿಭಾಗದಲ್ಲೇ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಇದೇ ಮೊದಲ ಬಾರಿ ಸಿಕ್ಕಿಬಿದ್ದಿದ್ದಾರೆ ಎಂದರು.
ಮತ್ತಷ್ಟು ಕ್ರೈಂ ನ್ಯೂಸ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Tue, 23 May 23