Bangalore Airport: ಅಬ್ಬಬ್ಬಾ..! ಚಿನ್ನವನ್ನೇ ಪಾದುಕೆ ಮಾಡಿಕೊಂಡು ಸಾಗಿಸುತ್ತಿದ್ದವ ಬೆಂಗಳೂರು ಏರ್ಪೋಟ್​ನಲ್ಲಿ ಸಿಕ್ಕಿಬಿದ್ದ

ಬ್ಯಾಂಕಾಕ್​ನಿಂದ ಬಂದ ವ್ಯಕ್ತಿ 502 ಗ್ರಾಂ ತೂಕದ ಎರಡು ಚಿನ್ನದ ತುಂಡುಗಳನ್ನ ಎರಡು ಕಾಲಿನ ಪಾದದಲ್ಲಿಟ್ಟು ಟೇಪ್ ಸುತ್ತಿದ್ದ. ಏರ್ಪೋಟ್​ನಲ್ಲಿ ಇಳಿದ ವೇಳೆ ಅನುಮಾನಗೊಂಡು ಪರಿಶೀಲನೆ ನಡೆಸಿದ ವೇಳೆ ಚಿನ್ನ ಅಡಗಿಸಿಟ್ಟಿರುವುದು ಬಯಲಾಗಿದೆ.

Bangalore Airport: ಅಬ್ಬಬ್ಬಾ..! ಚಿನ್ನವನ್ನೇ ಪಾದುಕೆ ಮಾಡಿಕೊಂಡು ಸಾಗಿಸುತ್ತಿದ್ದವ ಬೆಂಗಳೂರು ಏರ್ಪೋಟ್​ನಲ್ಲಿ ಸಿಕ್ಕಿಬಿದ್ದ
ಅಧಿಕಾರಿಗಳು ವಶಕ್ಕೆ ಪಡೆದ ಚಿನ್ನ
Follow us
ಆಯೇಷಾ ಬಾನು
|

Updated on: May 23, 2023 | 3:31 PM

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ(Kempegowda International Airport Bengaluru) ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ವಿದೇಶದಿಂದ ಅಕ್ರಮವಾಗಿ ಕದ್ದು ಮುಚ್ಚಿ ಸಾಗಾಟ ಮಾಡಲಾಗುತ್ತಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ(Gold seize). ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕ ತನ್ನ ಪಾದದಲ್ಲಿ ಚಿನ್ನದ ತುಂಡುಗಳನ್ನಿಟ್ಟು ಟೇಪ್ ಹಾಕಿಕೊಂಡಿದ್ದ. ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಲು ಟೇಪ್ ಹಾಕಿದ್ದ. ಆದ್ರೆ ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಬ್ಯಾಂಕಾಕ್​ನಿಂದ ಬಂದ ವ್ಯಕ್ತಿ 502 ಗ್ರಾಂ ತೂಕದ ಎರಡು ಚಿನ್ನದ ತುಂಡುಗಳನ್ನ ಎರಡು ಕಾಲಿನ ಪಾದದಲ್ಲಿಟ್ಟು ಟೇಪ್ ಸುತ್ತಿದ್ದ. ಏರ್ಪೋಟ್​ನಲ್ಲಿ ಇಳಿದ ವೇಳೆ ಅನುಮಾನಗೊಂಡು ಪರಿಶೀಲನೆ ನಡೆಸಿದ ವೇಳೆ ಚಿನ್ನ ಅಡಗಿಸಿಟ್ಟಿರುವುದು ಬಯಲಾಗಿದೆ. ಮತ್ತೊಬ್ಬ ಪ್ರಯಾಣಿಕ ತನ್ನ ಹ್ಯಾಂಡ್ ಬ್ಯಾಗ್​ನಲ್ಲಿಟ್ಟುಕೊಂಡು ಚಿನ್ನದ ಸರ ಸಾಗಾಟ ಮಾಡ್ತಿದ್ದ. ಆತನಿಂದನೂ 197 ಗ್ರಾಂ‌ ತೂಕದ ಚಿನ್ನದ ಸರವನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಬ್ಬರು ಪ್ರಯಾಣಿಕರಿಂದ ಒಟ್ಟು 700 ಗ್ರಾಂ ತೂಕದ 43 ಲಕ್ಷ 65 ಸಾವಿರದ‌ 291 ರೂಪಾಯಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಬಿಸಿಲಿನ ಪ್ರತಾಪಕ್ಕೆ ಕರಾವಳಿಯಲ್ಲಿ ಬತ್ತಿದ ಜಲಮೂಲ; ನದಿಯ ಆಳದಲ್ಲಿದ್ದ ಕೌತುಕಗಳ ದರ್ಶನ, ನೋಡಲು ಮುಗಿಬಿದ್ದ ಜನ

ಮೈಸೂರಿನಲ್ಲಿ 50 ಮೊಬೈಲ್​ ಜಪ್ತಿ

ಮೈಸೂರು ಜಿಲ್ಲೆಯಲ್ಲಿ ಕಳುವಾಗಿದ್ದ 9 ಲಕ್ಷ ಮೌಲ್ಯದ 50 ಮೊಬೈಲ್​ಗಳನ್ನು​ ಜಪ್ತಿ ಮಾಡಲಾಗಿದೆ. ಹಾಗೂ 5 ಲಕ್ಷ ರೂ. ಮೌಲ್ಯದ 30 ಮೊಬೈಲ್​ಗಳನ್ನು​ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್​ ಮಾಹಿತಿ ನೀಡಿದ್ದಾರೆ. ಮೊಬೈಲ್​ ಮಾಲೀಕರು CEIR ಪೋರ್ಟ್ ಮೂಲಕ ದೂರು ದಾಖಲಿಸಿದ್ದರು. ಕೇರಳ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಮೊಬೈಲ್​ ಜಪ್ತಿ ಮಾಡಿದ್ದೇವೆ. ಮೇ 18ರಂದು ಡ್ರಾಪ್ ಕೇಳುವ ನೆಪದಲ್ಲಿ ಆಟೋ ಚಾಲಕನನ್ನು ಸುಲಿಗೆ ಮಾಡಿದ್ದವರ ಪೈಕಿ ಒಬ್ಬನ ಬಂಧನ ಆಗಿದೆ. ಚಾಕು ತೋರಿಸಿ ಆಟೋ, ಮೊಬೈಲ್, 2 ಸಾವಿರ ನಗದು ದರೋಡೆ ಮಾಡಲಾಗಿತ್ತು. ವರುಣ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕ ಪ್ರಕರಣ ದಾಖಲಿಸಿದ್ದ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಯುತ್ತಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್​ ಮಾಹಿತಿ ನೀಡಿದ್ದಾರೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ