ಹಣ ನೀಡದಿದ್ರೆ ರೇಪ್ ಕೇಸ್ ದಾಖಲಿಸುವ ಬೆದರಿಕೆ, ಆರೋಪಿಗಳು ಅಂದರ್
ಬೆಳಗಾವಿ: ಬಟ್ಟೆ ವ್ಯಾಪಾರಿಯನ್ನು ನಗ್ನ ಮಾಡಿ ಹಣಕ್ಕೆ ಬೇಡಿಕೆಯಿಟ್ಟು, ಹಣ ನೀಡದಿದ್ರೆ ರೇಪ್ ಕೇಸ್ ದಾಖಲಿಸುವ ಬೆದರಿಕೆಯೊಡ್ಡಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಇಬ್ಬರು ಮಹಿಳೆಯರು ಸೇರಿದಂತೆ 6 ಆರೋಪಿಗಳನ್ನು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ ಸಹ ಇದ್ದಾನೆ. ಆಯೇಷಾ ಶೇಖ್, ಹೀನಾ ಅಕ್ಬರ್ ಸವಣೂರ, ಅಲೀಶಾನ್ ಶಾಬುದ್ದೀನ್, ಅಖೀಬ್ ಅಲ್ಲಾಭಕ್ಷ್ ಬೇಪಾರಿ ಮತ್ತು ಸಲ್ಮಾನ್ ಗುಲಾಜ್‌ಬೇಗ್ ಬಂಧಿತರು. ವ್ಯಾಪಾರಿ ಎಂ.ಎಂ. ಮುಜಾವರ್ ಬಳಿ ಆರೋಪಿ ಆಯೇಷಾ ₹6 ಲಕ್ಷ ಪಡೆದಿದ್ದರು. […]
ಬೆಳಗಾವಿ: ಬಟ್ಟೆ ವ್ಯಾಪಾರಿಯನ್ನು ನಗ್ನ ಮಾಡಿ ಹಣಕ್ಕೆ ಬೇಡಿಕೆಯಿಟ್ಟು, ಹಣ ನೀಡದಿದ್ರೆ ರೇಪ್ ಕೇಸ್ ದಾಖಲಿಸುವ ಬೆದರಿಕೆಯೊಡ್ಡಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಇಬ್ಬರು ಮಹಿಳೆಯರು ಸೇರಿದಂತೆ 6 ಆರೋಪಿಗಳನ್ನು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ ಸಹ ಇದ್ದಾನೆ.
ಆಯೇಷಾ ಶೇಖ್, ಹೀನಾ ಅಕ್ಬರ್ ಸವಣೂರ, ಅಲೀಶಾನ್ ಶಾಬುದ್ದೀನ್, ಅಖೀಬ್ ಅಲ್ಲಾಭಕ್ಷ್ ಬೇಪಾರಿ ಮತ್ತು ಸಲ್ಮಾನ್ ಗುಲಾಜ್‌ಬೇಗ್ ಬಂಧಿತರು.
ವ್ಯಾಪಾರಿ ಎಂ.ಎಂ. ಮುಜಾವರ್ ಬಳಿ ಆರೋಪಿ ಆಯೇಷಾ ₹6 ಲಕ್ಷ ಪಡೆದಿದ್ದರು. ಹಣ ನೀಡುವುದಾಗಿ ಮನೆಗೆ ಕರೆಸಿಕೊಂಡು ಕೂಡಿಹಾಕಿದ್ರು. ಆ ವೇಳೆ ಅವರನ್ನ ನಗ್ನಗೊಳಿಸಿದ ಆಯೇಷಾ ಗ್ಯಾಂಗ್, 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದೆ. ಹಣ ನೀಡದಿದ್ರೆ ಅತ್ಯಾಚಾರ ಪ್ರಕರಣ ದಾಖಲಿಸುವ ಬೆದರಿಕೆಯನ್ನೂ ಹಾಕಿದ್ದಾರೆ.
ಮನೆಗೆ ಹೋಗಿ ಹಣವನ್ನು ತರುವುದಾಗಿ ಹೇಳಿದ್ದ ವ್ಯಾಪಾರಿ, ಅವರಿಂದ ತಪ್ಪಿಸಿಕೊಂಡು ಬಂದು ಮಾಳಮಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವ್ಯಾಪಾರಿಯ ದೂರು ಆಧರಿಸಿ 6 ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ.