ವಿವಾಹ ಸಮಾರಂಭವೊಂದರಲ್ಲಿ ಪಾಕಿಸ್ತಾನದ ಗ್ಯಾಂಗ್ಸ್ಟರ್(Gangster) ಅಮೀರ್ ಬಾಲಾಜ್ ಟಿಪ್ಪುವನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಪರಿಚಿತ ವ್ಯಕ್ತಿಗಳು ಅಮೀರ್ ಮೇಲೆ ಗುಂಡು ಹಾರಿಸಿದ್ದಾರೆ, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ದುಷ್ಕರ್ಮಿಗಳು ಆತನ ಮತ್ತು ಇತರ ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ಆದಾಗ್ಯೂ, ಬಾಲಾಜ್‌ನ ಸಹಚರರು ತಕ್ಷಣವೇ ದಾಳಿಕೋರನನ್ನು ಹತ್ಯೆ ಮಾಡಿದ್ದಾರೆ. ಚಿಕಿತ್ಸೆ ವೇಳೆ ಬಾಲಾಜ್ ಮೃತಪಟ್ಟರೆ, ಗಾಯಗೊಂಡ ಇಬ್ಬರು ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ದಾಳಿಕೋರರನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಆರಿಫ್ ಅಮೀರ್ ಅಲಿಯಾಸ್ ಟಿಪ್ಪು ಟ್ರಕನ್ ವಾಲಾ ಅವರ ಪುತ್ರ ಬಾಲಾಜ್ ಭೂಗತ ಜಗತ್ತಿನ ಇತಿಹಾಸ ಹೊಂದಿರುವ ಕುಟುಂಬದಿಂದ ಬಂದವರು. 2010ರಲ್ಲಿ ಅಲ್ಲಾಮಾ ಇಕ್ಬಾಲ್ ಏರ್‌ಪೋರ್ಟ್‌ನಲ್ಲಿ ಅವರ ತಂದೆ ಕೊಲೆಯಾಗಿದ್ದರು.ಅಜ್ಜ ಕೂಡ ಹಳೆಯ ವೈಷಮ್ಯಕ್ಕೆ ಬಲಿಯಾಗಿದ್ದರು.
ಪೊಲೀಸರ ಪ್ರಕಾರ, ಬಾಲಾಜ್ ಭಾನುವಾರ ಸಂಜೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ. ಆಗ ಅಪರಿಚಿತ ದುಷ್ಕರ್ಮಿ ಬಲಾಜ್ ಸೇರಿದಂತೆ ಮೂವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಾಲಾಜ್ ಟಿಪ್ಪುವನ್ನು ಲಾಹೋರ್‌ನ ಭೂಗತ ಜಗತ್ತಿನ ಅತ್ಯಂತ ಪ್ರಭಾವಶಾಲಿ ಮತ್ತು ಭಯಾನಕ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.
ತಿಹಾರ್ ಜೈಲಿನಲ್ಲಿ ಗ್ಯಾಂಗ್ಸ್ಟರ್ ತಿಲ್ಲು ತಾಜ್‌ಪುರಿಯಾ ಹತ್ಯೆ
ತಿಹಾರ್ ಜೈಲಿನಲ್ಲಿ ಮತ್ತೊಮ್ಮೆ ಗ್ಯಾಂಗ್ವಾರ್(Gang War)ನಡೆದಿದ್ದು, ಗ್ಯಾಂಗ್ಸ್ಟರ್ ತಿಲ್ಲು ತಾಜ್ಪುರಿಯಾನನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಜೈಲಿನ 4 ಕೈದಿಗಳು ತಿಲ್ಲು ತಾಜ್‌ಪುರಿಯ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಎಲ್ಲಾ ದಾಳಿಕೋರರು ಗೋಗಿ ಗ್ಯಾಂಗ್‌ನವರು ಎಂದು ಹೇಳಲಾಗುತ್ತಿದೆ, ವಾಸ್ತವವಾಗಿ ರೋಹಿಣಿ ನ್ಯಾಯಾಲಯದಲ್ಲಿ ಜಿತೇಂದ್ರ ಗೋಗಿಯನ್ನು ಕೊಲೆ ಮಾಡಿದ ಆರೋಪವನ್ನು ತಿಲ್ಲು ಎದುರಿಸುತ್ತಿದ್ದ.
ಮತ್ತಷ್ಟು ಓದಿ: ಉಮೇಶ್ ಪಾಲ್ ಹತ್ಯೆ ಪ್ರಕರಣ: ಗ್ಯಾಂಗ್ಸ್ಟರ್ ಗುಡ್ಡು ಮುಸ್ಲಿಂ ಮನೆ ಜಪ್ತಿ ಮಾಡಿದ ಪೊಲೀಸರು
ಹಲ್ಲೆ ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು, ಆದರೆ ವೈದ್ಯರು ಆತ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ತಿಲ್ಲು ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿ ಹೆಸರು ಯೋಗೇಶ್ ತುಂಡ ಎಂದು ಹೇಳಲಾಗಿದೆ, ತಿಲ್ಲು ತಾಜ್‌ಪುರಿಯ ವಿರುದ್ಧ ಕೊಲೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ರೋಹಿಣಿ ಕೋರ್ಟ್‌ನ ಕೋರ್ಟ್ ಕೊಠಡಿಯಲ್ಲಿ ಗ್ಯಾಂಗ್ಸ್ಟರ್ ಜಿತೇಂದ್ರ ಗೋಗಿ ಹತ್ಯೆ ಪ್ರಕರಣದಲ್ಲಿ ತಿಲ್ಲು ಕೈವಾಡವಿದೆ.
ಈ ಸಂದರ್ಭದಲ್ಲಿ, ದೆಹಲಿ ಪೊಲೀಸರು ತಿಲ್ಲು ಗ್ಯಾಂಗ್‌ನ ಇಬ್ಬರು ಶೂಟರ್‌ಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು. ಜಿತೇಂದ್ರ ಗೋಗಿ ಮತ್ತು ತಿಲ್ಲು ತಾಜ್‌ಪುರಿಯಾ ಕಾಲೇಜು ದಿನಗಳಿಂದಲೂ ದ್ವೇಷ ಹೊಂದಿದ್ದರು, ಪರಸ್ಪರ ಹಲ್ಲೆ ನಡೆಸುತ್ತಿದ್ದರು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:49 am, Mon, 19 February 24