ಆನೇಕಲ್: ಎಚ್ಚರ.. ಲೀಸ್​ಗೆ ಕೊಟ್ಟ ಮನೆ ಮೇಲೆ ಲೋನ್ ಪಡೆದು ಮನೆ ಮಾಲೀಕರಿಂದ ವಂಚನೆ

ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಮನೆ ಲೀಸ್​ಗೆ ಪಡೆಯುವ ಮುನ್ನ ಜನರು ಎಚ್ಚರದಿಂದ ಇರಬೇಕು. ನೀವು ಲೀಸ್​ಗೆ ಪಡೆಯುತ್ತಿರುವ ಮನೆ ಮೇಲೆ ಸಾಲ ಇದೆಯಾ ಎಂಬುದನ್ನು ಮೊದಲ ತಿಳಿದುಕೊಳ್ಳಿ. ಇಲ್ಲವಾದರೆ ಬೀದಿಗೆ ಬರಬೇಕಾದಿತು. ಲೀಜ್ ನೀಡುವ ಮನೆ ಮೇಲೆ ಮನೆ ಮಾಲೀಕರು ಸಾಲ ಪಡೆದು ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣ ಆನೇಕಲ್​ನಲ್ಲಿ ಬೆಳಕಿಗೆ ಬಂದಿದೆ.

ಆನೇಕಲ್: ಎಚ್ಚರ.. ಲೀಸ್​ಗೆ ಕೊಟ್ಟ ಮನೆ ಮೇಲೆ ಲೋನ್ ಪಡೆದು ಮನೆ ಮಾಲೀಕರಿಂದ ವಂಚನೆ
ಲೀಸ್​ಗೆ ಕೊಟ್ಟ ಮನೆ ಮೇಲೆ ಲೋನ್ ಪಡೆದು ಮನೆ ಮಾಲೀಕರಿಂದ ಗ್ರಾಹಕರಿಗೆ ವಂಚನೆ
Follow us
ರಾಮು, ಆನೇಕಲ್​
| Updated By: Rakesh Nayak Manchi

Updated on:Feb 19, 2024 | 4:24 PM

ಆನೇಕಲ್, ಫೆ.19: ಬೆಂಗಳೂರಿನ ಆನೇಕಲ್ (Anekal) ತಾಲೂಕಿನಲ್ಲಿ ಮನೆ ಲೀಸ್​ಗೆ ಪಡೆಯುವ ಮುನ್ನ ಜನರು ಎಚ್ಚರದಿಂದ ಇರಬೇಕು. ನೀವು ಲೀಸ್​ಗೆ ಪಡೆಯುತ್ತಿರುವ ಮನೆ ಮೇಲೆ ಸಾಲ ಇದೆಯಾ ಎಂಬುದನ್ನು ಮೊದಲ ತಿಳಿದುಕೊಳ್ಳಿ. ಇಲ್ಲವಾದರೆ ಬೀದಿಗೆ ಬರಬೇಕಾದಿತು. ಲೀಜ್ ನೀಡುವ ಮನೆ ಮೇಲೆ ಮನೆ ಮಾಲೀಕರು ಸಾಲ ಪಡೆದು ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣ ಆನೇಕಲ್​ನಲ್ಲಿ ಬೆಳಕಿಗೆ ಬಂದಿದೆ.

ಆನೇಕಲ್-ಚಂದಾಪುರ ಮುಖ್ಯರಸ್ತೆಯಲ್ಲಿರುವ ವಿಬಿಹೆಚ್​ಸಿ ಅಪಾರ್ಟ್​​ಮೆಂಟ್​ನಲ್ಲಿ ಅಜಿತ್-ಸುಜಾತಾ ದಂಪತಿ ಫ್ಲಾಟ್ ಹೊಂದಿದ್ದರು. ಫ್ಯಾಟ್​ಗಳನ್ನ ಲೀಸ್​​ಗೆ ನೀಡುವುದಾಗಿ ದಂಪತಿ ಜಾಹೀರಾತು ನೀಡುತ್ತಿದ್ದರು. ಲಕ್ಷಾಂತರ ರೂಪಾಯಿ ಹಣ ನೀಡಿ ಪ್ಲಾಟ್​ ಅನ್ನು ಲೀಸ್​ಗಾಗಿ ಗ್ರಾಹಕರು ಪಡೆಯುತ್ತಿದ್ದರು.

ಇದನ್ನೂ ಓದಿ: ಮನೆ ಕಟ್ಟಿಸಿಕೊಡುವೆ ಎಂದು ಬೆಂಗಳೂರು ಟೆಕ್ಕಿಗೆ ವಂಚನೆ: ಕೋರ್ಟ್ ಆದೇಶಕ್ಕೂ ಡೋಂಟ್​​ ಕೇರ್ ಎಂದ ಉದ್ಯಮಿ ಸಂಚಿತ್​! ಮುಂದೇನು?

ಆದರೆ, ಲೀಸ್​ಗೆ​ ನೀಡುವ ಮುನ್ನ ದಂಪತಿ ಆ ಮನೆ ಮೇಲೆ ಬ್ಯಾಂಕ್​ನಿಂದ ಲೋನ್ ಪಡೆದಿರುತ್ತಿದ್ದರು. ಗ್ರಾಹಕರು ಫ್ಯಾಟ್​ಗೆ ಬಂದ ಎರಡು ಮೂರು ತಿಂಗಳಿಗೆ ಬ್ಯಾಂಕ್​ನಿಂದ ನೋಟಿಸ್ ಬರುತ್ತಿತ್ತು. ನೋಟಿಸ್ ಬಂದರೂ ದಂಪತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮಾಲೀಕರು ಲೋನ್ ಕಟ್ಟದೆ ಇದ್ದಾಗ ಬ್ಯಾಂಕ್ ಸಿಬ್ಬಂದಿ ಬಂದ ಮನೆಯ ಸಾಮಾನುಗಳನ್ನು ಜೊತೆಗೆ ಬೀಗ ಜಡಿದು ಹೋಗುತ್ತಾರೆ.

ಲಕ್ಷಾಂತರ ಹಣ ನೀಡಿ ಅತ್ತ ಹಣವೂ ಇಲ್ಲದೆ ಇತ್ತ ಫ್ಲ್ಯಾಟ್ ಇಲ್ಲದೆ ಗ್ರಾಹಕರು ಬೀದಿಗೆ ಬೀಳುತ್ತಿದ್ದರು. ಇದೇ ರೀತಿ ಹತ್ತಾರು ಮಂದಿ ವಂಚನೆಗೆ ಬಿದ್ದು ಬೀದಿಗೆ ಬಿದ್ದಿದ್ದಾರೆ. ಸದ್ಯ, ದಂಪತಿ ಅಜಿತ್ ಮತ್ತು ಸುಜಾತಾ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Mon, 19 February 24

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್