ಆನೇಕಲ್: ರಾತ್ರಿ ಕಲ್ಲಂಗಡಿ ತಿನ್ನಲು ಅಂಗಡಿಗೆ ಬಂದ ಕಾಡಾನೆ, ನಿದ್ದೆಯಿಂದ ಎದ್ದು ಓಡಿದ ದಂಪತಿ
ತಮಿಳುನಾಡು ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರಿನ ಆನೇಕಲ್ ತಾಲೂಕಿನ ಬಳಿ ಇರುವ ತಮಿಳುನಾಡಿಗೆ ಡೆಂಕಣಿಕೋಟೆ ಗ್ರಾಮಕ್ಕೆ ಒಂಟಿ ಸಲಗ ನುಗ್ಗಿದ್ದು, ಅಂಗಡಿ ಸಮೀಪ ಮಲಗಿದ್ದ ದಂಪತಿ ಎದ್ನೋ ಬಿದ್ನೋ ಎಂದು ಓಡಿ ಹೋದರು. ಇದರ ವಿಡಿಯೋ ಇಲ್ಲಿದೆ.
ಆನೇಕಲ್, ಫೆ.17: ತಮಿಳುನಾಡು ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಕಾಡಾನೆಗಳ (Wild Elephant) ಹಾವಳಿ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರಿನ ಆನೇಕಲ್ ತಾಲೂಕಿನ ಬಳಿ ಇರುವ ತಮಿಳುನಾಡಿಗೆ (Tamil Nadu) ಡೆಂಕಣಿಕೋಟೆ ಗ್ರಾಮಕ್ಕೆ ಒಂಟಿ ಸಲಗ ನುಗ್ಗಿದೆ. ಮುಂಜಾನೆ 5 ಗಂಟೆಯ ಸುಮಾರಿಗೆ ಗ್ರಾಮದ ಸುತ್ತಲೂ ಅಡ್ಡಾಡಿದ ಒಂಟಿ ಸಲಗ, ರಸ್ತೆ ಬದಿಯಲ್ಲಿ ಕಲ್ಲಂಗಡಿ ಅಂಗಡಿ ಬಳಿ ಹೋಗಿದೆ. ಈ ವೇಳೆ ಅಲ್ಲೇ ಗಾಢ ನಿದ್ರೆಗೆ ಜಾರಿದ್ದ ಅಂಗಡಿ ವ್ಯಾಪಾರಸ್ಥರಾದ ದಂಪತಿಗೆ ಇತರೆ ಗ್ರಾಮಸ್ಥರು ಬೊಬ್ಬೆ ಹಾಕಿ ಎಬ್ಬಿಸಿ ಓಡುವಂತೆ ಹೇಳಿದ್ದಾರೆ. ಅದರಂತೆ ದಂಪತಿ ಎದ್ನೋ ಬಿದ್ನೋ ಎಂದು ಅಲ್ಲಿಂದ ಓಡಿದರು. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ದಂಪತಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Feb 17, 2024 09:45 AM
Latest Videos