AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಕಷ್ಟದಲ್ಲಿ ಬಸನಗೌಡ ಯತ್ನಾಳ್, ಸಕ್ಕರೆ ಕಾರ್ಖಾನೆಗೆ ನೀಡಿರುವ ನೋಟೀಸ್​ಗೆ 24 ಗಂಟೆಗಳಲ್ಲಿ ಉತ್ತರಿಸಲು ಸೂಚನೆ

ಸಂಕಷ್ಟದಲ್ಲಿ ಬಸನಗೌಡ ಯತ್ನಾಳ್, ಸಕ್ಕರೆ ಕಾರ್ಖಾನೆಗೆ ನೀಡಿರುವ ನೋಟೀಸ್​ಗೆ 24 ಗಂಟೆಗಳಲ್ಲಿ ಉತ್ತರಿಸಲು ಸೂಚನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 17, 2024 | 10:52 AM

Share

ಲಭ್ಯವಿರುವ ಮಾಹಿತಿಯ ಪ್ರಕಾರ ಸಿದ್ಧಸಿರಿ ಕಾರ್ಖಾನೆಯಲ್ಲಿ ಅನುಮತಿ ಪಡೆಯದೆ ಕಬ್ಬು ಅರೆಯಲಾಗಿದೆಯಂತೆ. ಕಬ್ಬು ಅರೆದಿರುವುದು ವಾಯು ನಿಯಂತ್ರಣ ಮಂಡಳಿ ಕಾಯ್ದೆಯ ಉಲ್ಲಂಘನೆ ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಬಜೆಟ್ ಮಂಡಿಸುವಾಗ ಶಾಸಕ ಯತ್ನಾಳ್ ಸದನದಲ್ಲಿದ್ದರು.

ಕಲಬುರಗಿ: ದೃಶ್ಯಗಳಲ್ಲಿ ಕಾಣುತ್ತಿರೋದು ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿರುವ ಸಿದ್ಧಸಿರಿ ಸಕ್ಕರೆ ಕಾರ್ಖಾನೆ (Siddha Siri Ethanol and Power). ಬಿಜೆಪಿ ಫೈರ್ ಬ್ರ್ಯಾಂಡ್ ನಾಯಕನೆಂದು ಗುರುತಿಸಿಕೊಳ್ಳುವ ಮತ್ತು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇದರ ಮಾಲೀಕ. ಬಿಜೆಪಿ ನಾಯಕರು (BJP leaders) ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಿಂಜರಿಯುವ ಸಂಗತಿ ನಮಗೆಲ್ಲ ಗೊತ್ತಿದೆ. ಆದರೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆಯು ಪಾಟೀಲ್ ಮತ್ತು ಅವರ ಕಾರ್ಖಾನೆ ವಿರುದ್ಧ ನೋಟೀಸೊಂದನ್ನು ಜಾರಿ ಮಾಡಿದ್ದು ಕೇವಲ 24 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಸಿದ್ಧಸಿರಿ ಕಾರ್ಖಾನೆಯಲ್ಲಿ ಅನುಮತಿ ಪಡೆಯದೆ ಕಬ್ಬು ಅರೆಯಲಾಗಿದೆಯಂತೆ. ಕಬ್ಬು ಅರೆದಿರುವುದು ವಾಯು ನಿಯಂತ್ರಣ ಮಂಡಳಿ ಕಾಯ್ದೆಯ ಉಲ್ಲಂಘನೆ ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಬಜೆಟ್ ಮಂಡಿಸುವಾಗ ಶಾಸಕ ಯತ್ನಾಳ್ ಸದನದಲ್ಲಿದ್ದರು. ಬಜೆಟ್ ಅಧಿವೇಶನ ಸೋಮವಾರ ಪುನರಾರಂಭಗೊಳ್ಳುವುದರಿಂದ ಅವರು ವಿಜಯಪುರ ಅಥವಾ ಕಲಬುರಗಿಗೆ ಬಂದಿರುವ ಸಾಧ್ಯತೆಯೂ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ