ಶ್ರೀರಂಗಪಟ್ಟಣದಲ್ಲಿ ‘ಬೆಳ್ಳಿ ಪರ್ವ ಡಿ-25’ ಕಾರ್ಯಕ್ರಮಕ್ಕೆ ಹೇಗಿದೆ ನೋಡಿ ತಯಾರಿ..

ಶ್ರೀರಂಗಪಟ್ಟಣದಲ್ಲಿ ‘ಬೆಳ್ಳಿ ಪರ್ವ ಡಿ-25’ ಕಾರ್ಯಕ್ರಮಕ್ಕೆ ಹೇಗಿದೆ ನೋಡಿ ತಯಾರಿ..

ಮದನ್​ ಕುಮಾರ್​
|

Updated on: Feb 17, 2024 | 11:17 AM

ದರ್ಶನ್​ ಅವರ ಹುಟ್ಟುಹಬ್ಬದ ಬೆನ್ನಲ್ಲೇ ‘ಬೆಳ್ಳಿ ಪರ್ವ ಡಿ-25’ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಚಿತ್ರರಂಗದಲ್ಲಿ ದರ್ಶನ್​ ಅವರ 25 ವರ್ಷಗಳ ಜರ್ನಿಯನ್ನು ಸೆಲೆಬ್ರೇಟ್​ ಮಾಡುವ ಸಲುವಾಗಿ ಶ್ರೀರಂಗಪಟ್ಟಣದಲ್ಲಿ ಅಭಿಮಾನಿಗಳ ಸಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವೇದಿಕೆಯಲ್ಲಿ ಅನೇಕ ಸೆಲೆಬ್ರಿಟಿಗಳು ಮನರಂಜನೆ ನೀಡಲಿದ್ದಾರೆ.

ನಟ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್ (Darshan) ಅವರು ಬಣ್ಣದ ಬದುಕಿಗೆ ಕಾಲಿಟ್ಟು 25 ವರ್ಷಗಳು ಕಳೆದ ಖುಷಿಯಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಲಾಗುತ್ತಿದೆ. ‘ಬೆಳ್ಳಿ ಪರ್ವ ಡಿ 25’ (Belli Parva D 25) ಹೆಸರಿನಲ್ಲಿ ಜರುಗಲಿರುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ. ಶ್ರೀರಂಗಪಟ್ಟಣದಲ್ಲಿ ಇಂದು (ಫೆಬ್ರವರಿ 17) ಸಂಜೆ 6 ಗಂಟೆಗೆ ಆರಂಭ ಆಗುವ ಈ ಕಾರ್ಯಕ್ರಮದಲ್ಲಿ ದರ್ಶನ್​ ಭಾಗಿ ಆಗಲಿದ್ದಾರೆ. ಅಭಿಮಾನಿಗಳ ಸಮ್ಮುಖದಲ್ಲಿ ದೊಡ್ಡ ಸೆಲೆಬ್ರೇಷನ್‌ ಇರಲಿದೆ. ಕನ್ನಡ ಚಿತ್ರರಂಗದ (Sandalwood) ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗಲಿದ್ದಾರೆ. ಸುಮಲತಾ ಅಂಬರೀಷ್‌, ಡಾಲಿ ಧನಂಜಯ್, ವಿನೋದ್‌ ಪ್ರಭಾಕರ್‌‌, ಪ್ರಜ್ವಲ್ ದೇವರಾಜ್, ನಿನಾಸಂ ಸತೀಶ್‌, ಅಭಿಷೇಕ್ ಅಂಬರೀಷ್‌, ಧನ್ವೀರ್‌, ಚಿಕ್ಕಣ್ಣ, ವಿನೋದ್‌ ರಾಜ್, ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ವೇದಿಕೆ ಮೇಲೆ ಚಂದನವನದ ನಟ-ನಟಿಯರು ಮನರಂಜನೆ ನೀಡಲಿದ್ದಾರೆ. ಸೋನು ಗೌಡ, ಸಾನ್ಯ ಅಯ್ಯರ್, ಬೃಂದಾ ಆಚಾರ್ಯ, ಶರಣ್ಯ ಶೆಟ್ಟಿ, ಪ್ರಿಯಾಂಕಾ ಮುಂತಾದವರು ಡ್ಯಾನ್ಸ್​ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ