ಶಿವಮೊಗ್ಗ ಅಗ್ನಿ ದುರಂತ: ಫೈರ್ ಎಂಜಿನ್ ತಡವಾಗಿ ಬಂದಿದ್ದಕ್ಕೆ ನಷ್ಟ ಮತ್ತು ಹಾನಿ ಹೆಚ್ಚಾಯಿತು: ಪ್ರತ್ಯಕ್ಷದರ್ಶಿ

ಶೋರೂಮಿನ ಪಕ್ಕದಲ್ಲಿರುವ ಟಾಟಾ ಇವಿ ವಾಹನಗಳ ಶೋರೂಮಿಗೂ ಬೆಂಕಿ ಜ್ವಾಲೆ ಹರಡಿದ್ದರಿಂದ ಅಲ್ಲಿದ್ದ ಕೆಲ ವಾಹನಗಳು ಸಹ ಸುಟ್ಟಿವೆಯಂತೆ. ಆದರೆ ಹಂಡೈ ಶೋರೂಮಿನಲ್ಲಿದ್ದ ಬಹುತೇಕ ಕಾರುಗಳು, ಟೈರ್ ಮತ್ತು ಬಿಡಿಭಾಗಗಳ ಮಳಿಗೆ ಎಲ್ಲ ಬೆಂಕಿಗಾಹುತಿಯಾಗಿವೆ. ಕಚೇರಿಯಲ್ಲಿದ್ದ ಕಾಗದ ಪತ್ರಗಳು ಸುಟ್ಟುಹೋಗಿವೆ.

ಶಿವಮೊಗ್ಗ ಅಗ್ನಿ ದುರಂತ: ಫೈರ್ ಎಂಜಿನ್ ತಡವಾಗಿ ಬಂದಿದ್ದಕ್ಕೆ ನಷ್ಟ ಮತ್ತು ಹಾನಿ ಹೆಚ್ಚಾಯಿತು: ಪ್ರತ್ಯಕ್ಷದರ್ಶಿ
|

Updated on: Feb 17, 2024 | 11:34 AM

ಶಿವಮೊಗ್ಗ: ನಗರದ ಶಂಕರಮಠದ ರಸ್ತೆಯಲ್ಲಿ ಕಳೆದ ರಾತ್ರಿ ಪ್ರತಿಷ್ಠಿತ ಕಾರು ಶೋರೂಮೊಂದಕ್ಕೆ (car showroom) ಬೆಂಕಿ ಹೊತ್ತಿಕೊಂಡು ಭಾರೀ ನಷ್ಟವುಂಟಾಗಿದೆ. ಹಂಡೈ ಕಾರು ಶೋರೂಮಿನ ಮಾಲೀಕ ರವಿ ವಿದೇಶದಲ್ಲಿದ್ದು ಅವರಿಗೆ ವಿಷಯ ತಿಳಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿ (eyewitness) ಮತ್ತು ರವಿಯವರ ಸ್ನೇಹಿತರೂ ಆಗಿರರುವ ಸ್ಥಳೀಯ ನಿವಾಸಿ (resident) ಹೇಳುತ್ತಾರೆ. ಬೆಂಕಿಯ ಅಬ್ಬರ ಜೋರಾಗಿತ್ತು ಅದರೆ ಪ್ರಾಣಹಾನಿಯೇನೂ ಅಗಿಲ್ಲ ಎಂದು ಅವರು ಹೇಳುತ್ತಾರೆ. ಈ ಶೋರೂಮಿನ ಪಕ್ಕದಲ್ಲಿರುವ ಟಾಟಾ ಇವಿ ವಾಹನಗಳ ಶೋರೂಮಿಗೂ ಬೆಂಕಿ ಜ್ವಾಲೆ ಹರಡಿದ್ದರಿಂದ ಅಲ್ಲಿದ್ದ ಕೆಲ ವಾಹನಗಳು ಸಹ ಸುಟ್ಟಿವೆಯಂತೆ. ಆದರೆ ಹಂಡೈ ಶೋರೂಮಿನಲ್ಲಿದ್ದ ಬಹುತೇಕ ಕಾರುಗಳು, ಟೈರ್ ಮತ್ತು ಬಿಡಿಭಾಗಗಳ ಮಳಿಗೆ ಎಲ್ಲ ಬೆಂಕಿಗಾಹುತಿಯಾಗಿವೆ. ಕಚೇರಿಯಲ್ಲಿದ್ದ ಕಾಗದ ಪತ್ರಗಳು ಸುಟ್ಟುಹೋಗಿವೆ. ಅಗ್ನಿ ಶಾಮಕದಳದ ಫೈರ್ ಎಂಜಿನ್ ಗಳು ಸ್ಥಳಕ್ಕೆ ಬರೋದು ತಡವಾಗಿದ್ದರಿಂದ ಹೆಚ್ಚಿನ ಪ್ರಮಾಣದ ನಷ್ಟ ಮತ್ತು ಹಾನಿ ಜರುಗಿದೆ ಎಂದು ಅವರು ಹೇಳುತ್ತಾರೆ. ನಗರಲ್ಲಿದ್ದ ಮೂರು ಫೈರ್ ಎಂಜಿನ್ ಅಲ್ಲದೆ, ವಿಮಾನ ನಿಲ್ದಾಣದಲ್ಲಿದ್ದ ಒಂದು ಹಾಗೂ ತರೀಕೆರೆ ಹಾಗೂ ಭದ್ರಾವತಿಯಲ್ಲಿದ್ದ ಒಂದೊಂದು ಎಂಜಿನ್ ಅನ್ನು ಕರೆಸಲಾಗಿದೆ. ಆದಾಗ್ಯೂ ಬೆಂಕಿಯನ್ನು ನಂದಿಸಲು ಭಾರೀ ಪ್ರಯಾಸಪಡಬೇಕಾಯಿತು ಎಂದು ಪ್ರತ್ಯಕ್ಷದರ್ಶಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us