AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಂಡೈ ಕಾರು ಶೋ ರೂಮ್​ನಲ್ಲಿ ಅಗ್ನಿ ದುರಂತ, ಕೋಟ್ಯಾಂತರ ರೂ ಬೆಲೆಬಾಳುವ ವಾಹನಗಳು ಭಸ್ಮ

ಹುಂಡೈ ಕಾರು ಶೋ ರೂಮ್​ನಲ್ಲಿ ಅಗ್ನಿ ದುರಂತ, ಕೋಟ್ಯಾಂತರ ರೂ ಬೆಲೆಬಾಳುವ ವಾಹನಗಳು ಭಸ್ಮ

TV9 Web
| Edited By: |

Updated on:Feb 17, 2024 | 2:53 PM

Share

ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿರುವ ಹುಂಡೈ ಕಾರು ಶೋರೂಮ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೋಟ್ಯಾಂತರ ರೂ ಬೆಲೆ ಬಾಳುವ ವಾಹನಗಳು ಸುಟ್ಟು ಕರಕಲಾಗಿವೆ. ಶೋ ರೂಮ್​ನಲ್ಲಿದ್ದ ಕೆಲ ಕಾರುಗಳು, ಇತರೆ ವಸ್ತುಗಳು ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ.

ಶಿವಮೊಗ್ಗ, ಫೆ.17: ಶಿವಮೊಗ್ಗದಲ್ಲಿ ಹುಂಡೈ ಕಾರು ಶೋ ರೂಮ್​ನಲ್ಲಿ (Hyundai Car Showroom) ಅಗ್ನಿ ಆಕಸ್ಮಿಕ ದುರಂತ ಸಂಭವಿಸಿದೆ. ನಗರದ ಶಂಕರಮಠ ರಸ್ತೆಯಲ್ಲಿರುವ ಹುಂಡೈ ಕಾರು ಶೋರೂಮ್ ಬೆಂಕಿ ಕೆನ್ನಾಲಗೆಯಲ್ಲಿ ಧಗಧಗಿಸಿದೆ. ಶೋ ರೂಮ್​ನಲ್ಲಿದ್ದ 7 ಕಾರುಗಳು, ಇತರೆ ವಸ್ತುಗಳು ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಕಾರಿನ ಶೋ ರೂಮ್ ಬಳಿ ನೂರಾರು ಮಂದಿ ಜಮಾಯಿಸಿದ್ದರು.

ವರದಿಗಳ ಪ್ರಕಾರ, ಶೋರೂಂನಲ್ಲಿ ಮೂರು ಕಾರುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಆ ಮೂರು ಕಾರುಗಳು ಸಂಪೂರ್ಣವಾಗಿ ಸುಟ್ಟ ಕರಕಲಾಗಿವೆ. ಹಾಗೂ ಶೋರೂಂ ಬಳಿ ನಿಲ್ಲಿಸಿದ್ದ ಇತರೆ ನಾಲ್ಕು ಕಾರುಗಳು ಭಾಗಶಃ ಸುಟ್ಟು ಹೋಗಿವೆ. ಹುಂಡೈ ಪಕ್ಕದಲ್ಲಿದ್ದ ಟಾಟಾ ಕಾರು ಶೋರೂಂ ಕೂಡ ಬೆಂಕಿಗೆ ಆಹುತಿಯಾಗಿದೆ. ಘಟನಾಸ್ಥಳದಲ್ಲಿ ಜನರು ಜಮಾಯಿಸಿದ್ದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಷ್ಟರಲ್ಲಿ ಶೋರೂಂ ಬೆಂಕಿಗೆ ಆಹುತಿಯಾಗಿದೆ.

ಮನೆ ಧಗಧಗ, ಗ್ಯಾಸ್ ಸಿಲಿಂಡರ್ ಸ್ಫೋಟ

ಆಕಸ್ಮಿಕ ಬೆಂಕಿಯಿಂದ ಮನೆಯೊಂದು ಹೊತ್ತಿ ಉರಿದಿದೆ. ಮಂಡ್ಯದ ಚಾಮುಂಡೇಶ್ವರಿ ನಗರದ 9ನೇ ಕ್ರಾಸ್​​​ನಲ್ಲಿ ಘಟನೆ ನಡೆದಿದ್ದು, ಲಕ್ಷ್ಮೀಕಾಂತ್ ಎಂಬುವರಿಗೆ ಸೇರಿದ ಶೀಟ್ ಮನೆ ನಿನ್ನೆ ಮಧ್ಯಾಹ್ನ ಏಕಾಏಕಿ ಧಗಧಗಿಸಿದೆ. ಈ ವೇಳೆ ಗ್ಯಾಸ್ ಸಿಲಿಡಂರ್ ಸ್ಫೋಟಗೊಂಡಿತ್ತು. ಇದ್ರಿಂದ ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಎಲ್ಲ ವಸ್ತುಗಳು ಭಸ್ಮವಾಗಿವೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಭಾರೀ ದುರಂತ ತಪ್ಪಿದೆ. ದೇವರ ಫೋಟೋ ಮುಂದೆ ಹಚ್ಚಿದ್ದ ದೀಪದಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published on: Feb 17, 2024 11:06 AM