ದೇವಾಲಯದ ಕೊಳದಲ್ಲಿ ನಾಣ್ಯಗಳನ್ನ ಯಾಕೆ ಹಾಕ್ತಾರೆ?

ದೇವಾಲಯದ ಕೊಳದಲ್ಲಿ ನಾಣ್ಯಗಳನ್ನ ಯಾಕೆ ಹಾಕ್ತಾರೆ?

TV9 Web
| Updated By: ಆಯೇಷಾ ಬಾನು

Updated on: Feb 17, 2024 | 9:54 AM

ದೇವಸ್ಥಾನಗಳ ಅಕ್ಕಪಕ್ಕ ಅಥವಾ ದೇವಸ್ಥಾನದ ಸುತ್ತಮುತ್ತಲಿರುವ ನದಿ, ಕೊಳ, ಬಾವಿಗಳಲ್ಲಿ ನಾಣ್ಯಗಳನ್ನು ಎಸೆಯುವ ಪದ್ಥತಿ ಈಗಲೂ ಮುಂದುವರೆದುಕೊಂಡು ಬಂದಿದೆ. ಆದರೆ ಇದಕ್ಕೆ ನಿಜವಾದ ಕಾರಣವೇನು? ಈ ರೀತಿ ಮಾಡುವುದರಿಂದ ಸಿಗುವ ಲಾಭಗಳೇನು ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಮಾಹಿತಿ ನೀಡಿದ್ದಾರೆ.

ದೇವಸ್ಥಾನಗಳ (Temples) ಆವರಣದಲ್ಲಿ, ಅಕ್ಕಪಕ್ಕದಲ್ಲಿರುವ ಬಾವಿ, ಕೊಳ, ನದಿಗಳಲ್ಲಿ ಭಕ್ತರು ಭಕ್ತಿಯಿಂದ ಬೇಡಿ ನಾಣ್ಯಗಳನ್ನು (Coins) ಎಸೆಯುವುದನ್ನು ನಾವು ಸಾಮಾನ್ಯವಾಗಿ ಗಮನಿಸಿರುತ್ತೇವೆ. ಆದರೆ ನಾಣ್ಯಗಳನ್ನು ಈ ರೀತಿ ಕೊಳದಲ್ಲಿ ಎಸೆಯಲು ಕಾರಣವೇನು? ಕೊಳದೊಳಗೆ ನಾಣ್ಯ ಹಾಕಿದರೆ ಅದೃಷ್ಟ ಬರುತ್ತದಾ? ನಾಣ್ಯವನ್ನು ನೀರಿನಲ್ಲಿ ಎಸೆಯುವುದು ಮೂಢನಂಬಿಕೆಯಾ? ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಮಾಹಿತಿ ನೀಡಿದ್ದಾರೆ.

ಕೊಳದಲ್ಲಿ ನಾಣ್ಯಗಳನ್ನು ಹಾಕುವುದು ಮೂಢನಂಬಿಕೆ ಎಂದು ಹಲವರು ಹೇಳುತ್ತಾರೆ. ಆದರೆ ಇದು ಮೂಢನಂಬಿಕೆಯಲ್ಲ, ಬದಲಾಗಿ ಇದೊಂದು ರೂಢಿಯಾಗಿದೆ. ಪ್ರಾಚೀನ ಕಾಲದಲ್ಲೇ ನದಿಗೆ ನಾಣ್ಯವನ್ನು ಹಾಕುವ ಸಂಪ್ರದಾಯ ಆರಂಭವಾಗಿತ್ತು. ಅದು ಈಗ ಮುಂದುವರೆದುಕೊಂಡು ಬಂದಿದೆ. ಪ್ರಾಚೀನ ಕಾಲದಲ್ಲಿ ಹೆಚ್ಚಾಗಿ ತಾಮ್ರದ ನಾಣ್ಯಗಳನ್ನು ಬಳಸಲಾಗುತ್ತಿತ್ತು. ತಾಮ್ರಕ್ಕೆ ನೀರನ್ನು ಶಿದ್ಧೀಕರಿಸುವ ಗುಣವಿದೆ. ಆದ್ದರಿಂದ ಪ್ರಾಚೀನ ಕಾಲದಲ್ಲಿ ಜನರು ನೀರನ್ನು ಶುದ್ಧೀಕರಿಸಲು ತಮ್ಮಲ್ಲಿದ್ದ ತಾಮ್ರದ ನಾಣ್ಯಗಳನ್ನು ಕೆರೆಯಲ್ಲಿ, ನದಿಯನ್ನು ದಾಟುವಾಗ ನದಿಯಲ್ಲಿ, ಕೊಳದಲ್ಲಿ ಹಾಕುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ತಾಮ್ರದ ನಾಣ್ಯಗಳ ಉಪಯೋಗಿವಿಲ್ಲ. ಆದರೂ ಕೂಡ ಜನರು ಇಂದಿಗೂ ನಾಣ್ಯಗಳನ್ನು ದೇವಸ್ಥಾನದಲ್ಲಿರುವ ಕೊಳದಲ್ಲಿ, ತೀರ್ಥಸ್ಥಳಗಳಲ್ಲಿ, ನದಿಗಳಲ್ಲಿ ಹಾಕುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ