ಸಂಬಂಧಿಯೊಬ್ಬರು ಬಾಲಕಿಯ ಶಿರಚ್ಛೇದ(Beheaded) ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ. ತೀರಾ ಹತ್ತಿರದ ಸಂಬಂಧಿಯೊಬ್ಬರು 11 ವರ್ಷದ ಬಾಲಕಿಯ ತಲೆಯನ್ನು ಕಡಿದು ಹತ್ಯೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಈ ಹಿಂದೆ ಹಲವು ಬಾರಿ ಆಕೆಯ ತಂದೆ ತಂದೆ ಸಾರ್ವಜನಿಕವಾಗಿ ಅವಮಾನಿಸಿ ಥಳಿಸಿದ್ದರಿಂದ ಬಾಲಕಿಯನ್ನು ಕೊಂದಿರುವುದಾಗಿ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.
ಆರೋಪಿ ಬಾಲಕಿಯ ಶಿರಚ್ಛೇದ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಿದ್ದರೇ ಎಂಬ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಜನವರಿ 29 ರಿಂದ ನಾಪತ್ತೆಯಾಗಿದ್ದ ಬಾಲಕಿಯ ದೇಹದ ವಿವಿಧ ಭಾಗಗಳು ಮಾಲ್ಡಾದ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದೆ.
ಹುಡುಗಿಯ 27 ವರ್ಷದ ಚಿಕ್ಕಪ್ಪನನ್ನು ಸಿಸಿಟಿವಿ ಫೂಟೇಜ್ ಮೂಲಕ ಪತ್ತೆಹಚ್ಚಲಾಗಿದೆ, ಅದರಲ್ಲಿ ಹುಡುಗಿ ಕಾಣೆಯಾಗುವ ಮೊದಲು ಅವನು ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದಾನೆ. ಆ ವ್ಯಕ್ತಿ ಮೊದಲಿಗೆ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದನು, ಆದರೆ ನಂತರ ಅವಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ.
ಈ ಘಟನೆ ನಗರದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದು, ಅಮಾನುಷವಾಗಿ ಕೊಲೆ ಮಾಡಿರುವ ಬಾಲಕಿಯ ಚಿಕ್ಕಪ್ಪನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ. ಘಟನೆಯನ್ನು ಖಂಡಿಸಿ ಬಿಜೆಪಿ, ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕೂಡ ಪ್ರತಿಭಟನಾ ರ್ಯಾಲಿಗಳು ಮತ್ತು ಮೌನ ಪ್ರತಿಭಟನೆ ನಡೆಸಿದ್ದವು. ವ್ಯಕ್ತಿಯನ್ನು ಬಂಧಿಸಿ 12 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ಓದಿ:ವಿಚಿತ್ರ ಘಟನೆ: ತಾಯಿಯ ಶಿರಚ್ಛೇದ ಮಾಡಿ, ಆಕೆಯ ದೇಹದ ಮೇಲೆ ಬೆತ್ತಲಾಗಿ ಮಲಗಿದ್ದ ಮಗ
ಮತ್ತೊಂದು ಘಟನೆ
ತಾಯಿಯ ಶಿರಚ್ಛೇದ ಮಾಡಿ, ದೇಹದ ಮೇಲೆ ಬೆತ್ತಲಾಗಿ ಮಲಗಿದ್ದ ಮಗ
ತಾಯಿಯನ್ನು ಕೊಂದು ಶಿರಚ್ಛೇದ ಮಾಡಿದ ಆರೋಪದ ಮೇಲೆ ನ್ಯೂಜರ್ಸಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಪೊಲೀಸರಿಗೆ ಕರೆ ಮಾಡಿ ತಾಯಿಯನ್ನು ಕೊಂದಿರುವುದಾಗಿ ಆ ವ್ಯಕ್ತಿ ಮಾಹಿತಿ ನೀಡಿದ್ದ. ಸುರ್ಜೆಂಟ್ ತನ್ನ ತಾಯಿ ಅಲೆಕ್ಸಾಂಡ್ರಿಯಾವನ್ನು ಕೊಲ್ಲಲು ಚಾಕು ಬಳಕೆ ಮಾಡಿದ್ದ.
ತನ್ನ ತಾಯಿಯನ್ನು ಕೊಂದಿದ್ದಕ್ಕಾಗಿ ಸುರ್ಜೆಂಟ್ ಪದೇ ಪದೇ ಪೊಲೀಸರ ಬಳಿ ಕ್ಷಮೆಯಾಚಿಸಿದ್ದಾನೆ ಎಂಬುದು ತಿಳಿದುಬಂದಿದೆ. ಪೊಲೀಸರು ಓಷನ್ ಸಿಟಿಯ ಮನೆಗೆ ಪ್ರವೇಶಿಸಿದಾಗ ಸರ್ಜೆಂಟ್ ಬೆತ್ತಲೆಯಾಗಿ ತಲೆ ಇಲ್ಲದ ತಾಯಿಯ ಶರೀರದ ಮೇಲೆ ಮಲಗಿರುವುದು ಕಾಣಿಸಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ