Murder: ಪ್ರೇಯಸಿಯ ಕತ್ತು ಕೊಯ್ದು ಕೊಂದು, ಅಂಬಾಲಿ ಘಾಟ್​​ನಲ್ಲಿ ಎಸೆದ ಪ್ರೇಮಿ

30 ವರ್ಷದ ತನ್ನ ಗೆಳತಿ ಕಾಮಾಕ್ಷಿ ಎಂಬಾಕೆಯನ್ನು ಕೊಂದ ನಂತರ 22 ವರ್ಷದ ಆರೋಪಿ ಫಕೀರ್ ಆಕೆಯ ದೇಹವನ್ನು ಕೊಲೆ ಮಾಡಿದ ಸ್ಥಳದಿಂದ 80 ಕಿ.ಮೀ ದೂರದಲ್ಲಿರುವ ಮಹಾರಾಷ್ಟ್ರದ ಅಂಬೋಲಿ ಘಾಟ್‌ನಲ್ಲಿ ಎಸೆದಿದ್ದಾನೆ.

Murder: ಪ್ರೇಯಸಿಯ ಕತ್ತು ಕೊಯ್ದು ಕೊಂದು, ಅಂಬಾಲಿ ಘಾಟ್​​ನಲ್ಲಿ ಎಸೆದ ಪ್ರೇಮಿ
ಮೃತ ಯುವತಿ ಕಾಮಾಕ್ಷಿ
Follow us
|

Updated on: Sep 02, 2023 | 5:47 PM

ಗೋವಾ: ಪ್ರೇಯಸಿಯೊಂದಿಗೆ ಬ್ರೇಕಪ್ ಮಾಡಿಕೊಂಡ ಯುವಕನೊಬ್ಬ ಆಕೆಯನ್ನು ಕೊಲೆ (Murder) ಮಾಡಿ, ಆಕೆಯ ದೇಹವನ್ನು ತುಂಡು ಮಾಡಿ, ಆ ಭಾಗಗಳನ್ನು ಅಂಬೋಲಿ ಘಾಟ್​​ನಲ್ಲಿ (Amboli Ghat) ಬಿಸಾಡಿರುವ ಆಘಾತಕಾರಿ ಘಟನೆ ಗೋವಾದಲ್ಲಿ (Goa) ನಡೆದಿದೆ. ಈ ಕೊಲೆ ಆರೋಪದ ಮೇಲೆ 22 ವರ್ಷದ ಯುವಕನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. 30 ವರ್ಷದ ತನ್ನ ಗೆಳತಿ ಕಾಮಾಕ್ಷಿ ಶಂಕರ್ ಉದ್ದಪ್ನೋವ್ ಎಂಬಾಕೆಯನ್ನು ಕೊಂದ ನಂತರ 22 ವರ್ಷದ ಆರೋಪಿ ಫಕೀರ್ ಅಲಿಯಾಸ್ ಪ್ರಕಾಶ್ ಚುಂಚ್ವಾಡ್ ಆಕೆಯ ದೇಹವನ್ನು ಕೊಲೆ ಮಾಡಿದ ಸ್ಥಳದಿಂದ 80 ಕಿ.ಮೀ ದೂರದಲ್ಲಿರುವ  ಮಹಾರಾಷ್ಟ್ರದ ಅಂಬೋಲಿ ಘಾಟ್‌ನಲ್ಲಿ ಎಸೆದಿದ್ದಾನೆ.

ಅಂಬೋಲಿ ಘಾಟ್​ನಿಂದ ಸುಮಾರು 80 ಕಿ.ಮೀ. ದೂರವಿರುವ ಚುಂಚ್‌ವಾಡ್ ಕಾಮಾಕ್ಷಿ ಉದ್ದಪ್ನೋವ್ ಅವರ ಫ್ಲಾಟ್‌ನಲ್ಲಿ ಆತ ತನ್ನ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಗೋವಾದ ಪೊರ್ವೊರಿಮ್‌ನಲ್ಲಿ ಆಗಸ್ಟ್ 29ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಮುಂಬೈ: ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಆಕೆಯ ತಮ್ಮನನ್ನೇ ಹತ್ಯೆ ಮಾಡಿ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದ ವ್ಯಕ್ತಿಯ ಬಂಧನ

ಪ್ರೇಯಸಿಯನ್ನು ಕೊಂದ ನಂತರ ಆತ ತನ್ನ ಸ್ನೇಹಿತನ ಸಹಾಯದಿಂದ ಶವವನ್ನು ಅಂಬೋಲಿ ಘಾಟ್​​ಗೆ ತೆಗೆದುಕೊಂಡು ಹೋಗಿ ಎಸೆದಿದ್ದಾನೆ. ಕೊಲೆಗೂ ಮುನ್ನ ಯುವತಿಯೊಂದಿಗೆ ಜಗಳವಾಡಿದ್ದ ಆತನ ವಿರುದ್ಧ ಮಾಪುಸಾ ಪೊಲೀಸ್ ಠಾಣೆಯಲ್ಲಿ ನಾನ್-ಕಾಗ್ನಿಸೆಬಲ್ ಅಪರಾಧ ಪ್ರಕರಣ ದಾಖಲಾಗಿತ್ತು. ತನ್ನ ವಿರುದ್ಧ ಕೇಸ್ ದಾಖಲಿಸಿದ ಪ್ರೇಯಸಿಯ ಮೇಲೆ ಕೋಪದಿಂದ ಆಕೆಯನ್ನು ಪೊರ್ವೊರಿಮ್‌ನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಗಂಡನಿಂದಲೇ ಹೆಂಡತಿಯ ಕೊಲೆ? 20 ದಿನಗಳ ನಂತರ ಶವ ಹೊರತೆಗೆದು ಶವಪರೀಕ್ಷೆ

ಪೋರ್ವೊರಿಮ್ ಪೊಲೀಸರು ಮೃತ ಕಾಮಾಕ್ಷಿಯ ಶವವನ್ನು ಸಾಗಿಸಲು ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆ ಕಾಮಾಕ್ಷಿಯ ಕುಟುಂಬದ ಸದಸ್ಯರು ಮನೆಗೆ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಳಿಕ ಅವರು ಪೊರ್ವೊರಿಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ಕುರಿತು ತನಿಖೆ ನಡೆಸುವಾಗ ಮೃತ ಯುವತಿಯ ಪ್ರಿಯಕರನ ಮೇಲೆ ಅನುಮಾನ ಉಂಟಾಗಿ ವಿಚಾರಣೆ ನಡೆಸಿದಾಗ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಇನ್ನಷ್ಟು ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ