AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನಿಂದಲೇ ಹೆಂಡತಿಯ ಕೊಲೆ? 20 ದಿನಗಳ ನಂತರ ಶವ ಹೊರತೆಗೆದು ಶವಪರೀಕ್ಷೆ

ಅನುಮಾನದ ಪಿಶಾಚಿಯಾಗಿದ್ದ ಗಂಡ ಚೇತನ್ ಮದುವೆಯಾಗಿದ್ದಾಗಿನಿಂದಲೂ ಹೆಂಡತಿಯನ್ನ ಮನೆಯಲ್ಲೇ ಬಂಧಿಸಿಟ್ಟಿದ್ದ. ಆಗಾಗ ವರದಕ್ಷಿಣೆ ಕಿರುಕುಳವನ್ನ ಕೂಡ ನೀಡ್ತಿದ್ದ ಅಂತಾ ಪೋಷಕರು ಆರೋಪ ಮಾಡಿದ್ದಾರೆ. ಹೀಗಾಗಿ ಅವನೇ ಹೆಂಡತಿಯನ್ನ ಕೊಲೆ ಮಾಡಿ, ಮಣ್ಣು ಮಾಡಿದ್ದಾನೆ ಅಂತಾ ವರ್ಷಿಣಿ ಹೆತ್ತವರು ಆರೋಪಿಸುತ್ತಿದ್ದಾರೆ. ಹೆತ್ತವರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಶವವನ್ನು ಹೊರತೆಗೆದಿದ್ದಾರೆ. ತುಮಕೂರು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಡನಿಂದಲೇ ಹೆಂಡತಿಯ ಕೊಲೆ? 20 ದಿನಗಳ ನಂತರ ಶವ ಹೊರತೆಗೆದು ಶವಪರೀಕ್ಷೆ
ಗಂಡನಿಂದಲೇ ಹೆಂಡತಿಯ ಕೊಲೆ?
ಮಹೇಶ್ ಇ, ಭೂಮನಹಳ್ಳಿ
| Edited By: |

Updated on: Aug 24, 2023 | 11:41 AM

Share

ತುಮಕೂರು, ಆಗಸ್ಟ್​ 24: ಗಂಡನೇ (husband) ಹೆಂಡತಿಯನ್ನು (wife) ಕೊಲೆ (murder) ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಹೂತಿದ್ದ ಶವವನ್ನ 20 ದಿನಗಳ ನಂತರ ಅಧಿಕಾರಿಗಳು ಹೊರತೆಗೆದು ಶವಪರೀಕ್ಷೆ ನಡೆಸಿದ್ದಾರೆ. ತುಮಕೂರು ಎಸಿ ನೇತೃತ್ವದಲ್ಲಿ ಶವವನ್ನ ಸಿಬ್ಬಂದಿ ಹೊರತೆಗೆದಿದ್ದಾರೆ. ಶವವನ್ನ ಹೊರತೆಗೆದು ಪೋಸ್ಟ್ ಮಾರ್ಟಂ (postmortem) ನಡೆಸಲಿದ್ದಾರೆ. ತುಮಕೂರು (Tumkur) ನಗರದ ಹೊರವಲಯದಲ್ಲಿರುವ ಶೆಟ್ಟಿಹಳ್ಳಿಯಲ್ಲಿ ಘಟನೆ ನಡೆದಿದೆ. ಶೆಟ್ಟಿಹಳ್ಳಿ ನಿವಾಸಿ ವರ್ಷಿಣಿ ಎಂಬ ಗೃಹಿಣಿ ಇದೇ ತಿಂಗಳು 2ನೇ ತಾರೀಖು ಸಾವನ್ನಪ್ಪಿದ್ದರು.

ಈ ವೇಳೆ ಪತಿ ಚೇತನ್, ಪತ್ನಿ ವರ್ಷಿಣಿಯ ಹೆತ್ತವರಿಗೂ ತಿಳಿಸದೇ ಆಕೆಯನ್ನ ಮಣ್ಣು ಮಾಡಿ ಬಂದಿದ್ದ. ಇದರಿಂದ ಅನುಮಾನಗೊಂಡ ಪೋಷಕರು ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಚೇತನ್, 2014 ರಲ್ಲಿ ವರ್ಷಿಣಿಯನ್ನ ಮದುವೆಯಾಗಿದ್ದ. ದಂಪತಿಗೆ ಮೂವರು ಮಕ್ಕಳು ಇದ್ದಾರೆ.

ಇದನ್ನೂ ಓದಿ: ಕ್ವಾರ್ಟರ್ ಎಣ್ಣೆ ಕುಡಿಸಿ ಹೊಸ ಆಟೊ ಕದ್ದುಹೋಗಿದ್ದ ಅಡುಗೆ ಭಟ್ಟನನ್ನು ಪೀಣ್ಯ ಪೊಲೀಸರು ಲಾಕ್ ಮಾಡಿದರು!

ಅನುಮಾನದ ಪಿಶಾಚಿಯಾಗಿದ್ದ ಗಂಡ ಚೇತನ್ ಮದುವೆಯಾಗಿದ್ದಾಗಿನಿಂದಲೂ ಹೆಂಡತಿಯನ್ನ ಮನೆಯಲ್ಲೇ ಬಂಧಿಸಿಟ್ಟಿದ್ದ. ಆಗಾಗ ವರದಕ್ಷಿಣೆ ಕಿರುಕುಳವನ್ನ ಕೂಡ ನೀಡ್ತಿದ್ದ ಅಂತಾ ಪೋಷಕರು ಆರೋಪ ಮಾಡಿದ್ದಾರೆ. ಹೀಗಾಗಿ ಅವನೇ ಹೆಂಡತಿಯನ್ನ ಕೊಲೆ ಮಾಡಿ, ಮಣ್ಣು ಮಾಡಿದ್ದಾನೆ ಅಂತಾ ವರ್ಷಿಣಿ ಹೆತ್ತವರು ಆರೋಪಿಸುತ್ತಿದ್ದಾರೆ. ಹೆತ್ತವರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಶವವನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸತ್ಯಾಸತ್ಯತೆ ಬಹಿರಂಗವಾಗಲಿದೆ. ತುಮಕೂರು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್