ಚಾಕಲೇಟ್​​ನಲ್ಲಿ ಪೇಸ್ಟ್​ರೂಪದ ಚಿನ್ನವನ್ನು ಸಾಗಿಸುತ್ತಿದ್ದ ಆರೋಪಿಯ ಬಂಧನ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾಕೊಲೇಟ್​ನಲ್ಲಿ ಪೇಸ್ಟ್​ರೂಪದ  ಚಿನ್ನ ಸಾಗಿಸ್ತಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚಾಕಲೇಟ್​​ನಲ್ಲಿ ಪೇಸ್ಟ್​ರೂಪದ  ಚಿನ್ನವನ್ನು ಸಾಗಿಸುತ್ತಿದ್ದ ಆರೋಪಿಯ ಬಂಧನ
ಸಾಂಧರ್ಬಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Aug 17, 2022 | 11:58 AM

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾಕೊಲೇಟ್​ನಲ್ಲಿ ಪೇಸ್ಟ್​ರೂಪದ  ಚಿನ್ನ ಸಾಗಿಸ್ತಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ ಕಸ್ಟಮ್ಸ್ ಅಧಿಕಾರಿಗಳು 9 ಲಕ್ಷ ಮೌಲ್ಯ 176 ಗ್ರಾಂ ಚಿನ್ನ ಜಪ್ತಿ ಮಾಡಿಕೊಂಡಿದ್ದಾರೆ.

ವ್ಯಕ್ತಿ ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಪೇಸ್ಟ್​​ ರೂಪದ ಚಿನ್ನವನ್ನ ಚಾಕೊಲೇಟ್​ನಲ್ಲಿ ಇಟ್ಟು ಸಾಗಿಸಲು ಯತ್ನಿಸಿದ್ದಾನೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳಿಂದ ವಿಚಾರಣೆ ನಡೆಸುತ್ತಿದ್ದಾರೆ.

ಖರ್ಚಿಗೆ ಕಾಸಿಲ್ಲ ಅಂತ ಆಟೋ ಕದಿಯುತ್ತಿದ್ದ ಆರೋಪಿಯ ಬಂಧನ

ಬೆಂಗಳೂರು: ಖರ್ಚಿಗೆ ಕಾಸಿಲ್ಲ ಅಂತ ಆಟೋ ಕದಿಯುತ್ತಿದ್ದ ಆರೋಪಿಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ರಘು ಅಲಿಯಾಸ್ ಮಾರಿಗುಡಿ ಬಂಧಿತ ಆರೋಪಿ. ಆರೋಪಿ ರಘು ಅಲಿಯಾಸ್ ಮಾರಿಗುಡಿ ನಕಲಿ ಕೀ ಬಳಸಿ ಮನೆ ಮುಂದೆ ನಿಲ್ಲಿಸಿದ್ದ ಆಟೋಗಳನ್ನ ಕದ್ದು ಪರಾರಿ‌ಯಾಗುತ್ತಿದ್ದನು. ಬಂಧಿತನಿಂದ ಪೊಲೀಸರು ಎರಡು ಆಟೋ ಜಪ್ತಿ ಮಾಡಿಕೊಂಡಿದ್ದಾರೆ.

ಆರೋಪಿ ಆಟೋ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರದಿದ್ದ ಆರೋಪಿಗಳ ಬಂಧನ

ಶಿವಮೊಗ್ಗ: ಕಾರಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರದಿದ್ದ ಆರೋಪಿಗಳನ್ನು ಭದ್ರಾವತಿ ಗ್ರಾಮಾಂತರ ಪೊಲೀಸ​ರು ಬಂಧಿಸಿದ್ದಾರೆ. ಅಲೀಂ ಪಾಷ ಮತ್ತು ತೌಫಿಕ್‌ ಬಂಧಿತ ಆರೋಪಿಗಳು. ಆರೋಪಿಗಳು ತಿಮ್ಲಪುರ ಕ್ಯಾಂಪ್‌ ಗ್ರಾಮದ ನಿವಾಸಿಗಳಾಗಿದ್ದಾರೆ.

ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ತಿಮ್ಲಪುರ ಕ್ಯಾಂಪ್‌ನ, ಭದ್ರಾವತಿ ವಾಸಿ ಸಾಧಿಕ್‌ (32) ಎಂಬುವರಿಗೆ ಸೇರಿದ ಕಾರಿಗೆ ಆರೋಪಿಗಳು ಬೆಂಕಿ ಹಚ್ಚಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV9 Web

TV9 Kannada

Read More
Loading...
Unable to load recommendations.
Follow Us