ಮೂತ್ತೂಟ್ ಫೈನಾನ್ಸ್ ಗೋಡೆ ಕೊರೆದು 77 ಕೆಜಿ ಚಿನ್ನಾಭರಣ ಕಳವು

ಮೂತ್ತೂಟ್ ಫೈನಾನ್ಸ್ ಗೋಡೆ ಕೊರೆದು 77 ಕೆಜಿ ಚಿನ್ನಾಭರಣ ಕಳವು

ಬೆಂಗಳೂರು: ಶನಿವಾರ ತಡರಾತ್ರಿ ಫ್ರೇಜರ್ ಟೌನ್​ನಲ್ಲಿರುವ ಮೂತ್ತೂಟ್ ಫೈನಾನ್ಸ್​ನ ಗೋಡೆ ಕೊರೆದು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಸುಮಾರು 10 ಜನರ ಗ್ಯಾಂಗ್​ ಬಾತ್ ರೂಮ್ ಗೋಡೆ ಕೊರೆದು 77 ಕೆ.ಜಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಗ್ಯಾಸ್ ಕಟ್ಟರ್ ಬಳಸಿ ಗೋಡೆ ಕೊರೆದು ಆರೋಪಿಗಳು ಚಿನ್ನ ದೋಚಿದ್ದಾರೆ. ಮುತ್ತೂಟ್ ಫೈ‌ನಾನ್ಸ್​ನಲ್ಲಿ ನೇಪಾಳ ಮೂಲದ ವ್ಯಕ್ತಿ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಸೆಕ್ಯೂರಿಟಿ ಮೇಲೆಯೇ ಶಂಕೆ ವ್ಯಕ್ತವಾಗಿದ್ದು, ನಿನ್ನೆ ಪುಲುಕೇಶಿನಗರ ಪೊಲೀಸ್ ಠಾಣೆಯಲ್ಲಿ ಮುತ್ತೂಟ್ ಫೈನಾನ್ಸ್​ನವರು ದೂರು […]

sadhu srinath

|

Dec 24, 2019 | 5:38 PM

ಬೆಂಗಳೂರು: ಶನಿವಾರ ತಡರಾತ್ರಿ ಫ್ರೇಜರ್ ಟೌನ್​ನಲ್ಲಿರುವ ಮೂತ್ತೂಟ್ ಫೈನಾನ್ಸ್​ನ ಗೋಡೆ ಕೊರೆದು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಸುಮಾರು 10 ಜನರ ಗ್ಯಾಂಗ್​ ಬಾತ್ ರೂಮ್ ಗೋಡೆ ಕೊರೆದು 77 ಕೆ.ಜಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.

ಗ್ಯಾಸ್ ಕಟ್ಟರ್ ಬಳಸಿ ಗೋಡೆ ಕೊರೆದು ಆರೋಪಿಗಳು ಚಿನ್ನ ದೋಚಿದ್ದಾರೆ. ಮುತ್ತೂಟ್ ಫೈ‌ನಾನ್ಸ್​ನಲ್ಲಿ ನೇಪಾಳ ಮೂಲದ ವ್ಯಕ್ತಿ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಸೆಕ್ಯೂರಿಟಿ ಮೇಲೆಯೇ ಶಂಕೆ ವ್ಯಕ್ತವಾಗಿದ್ದು, ನಿನ್ನೆ ಪುಲುಕೇಶಿನಗರ ಪೊಲೀಸ್ ಠಾಣೆಯಲ್ಲಿ ಮುತ್ತೂಟ್ ಫೈನಾನ್ಸ್​ನವರು ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada