AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣನಿಂದಲೇ ಅಪ್ರಾಪ್ತ ಸಹೋದರಿ ಮೇಲೆ ಅತ್ಯಾಚಾರ, ಆಕೆ ಈಗ ಗರ್ಭಿಣಿ

ತಂಗಿಗೆ ಶ್ರೀರಕ್ಷೆಯಾಗಿರಬೇಕಿದ್ದ ಅಣ್ಣನೇ ಆಕೆಯ ಮೇಲೆ ಅತ್ಯಾಚಾರನಡೆಸಿ ಗರ್ಭಿಣಿ ಮಾಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಆಕೆಗೆ ಶಾಲೆಯಲ್ಲಿ ಹೊಟ್ಟೆನೋವು ಕಾಣಿಸಿಕೊಂಡಾಗ ಕೂಡಲೇ ಆಸ್ಪತ್ರೆಗೆ ದಾಖಲಿಸ

ಅಣ್ಣನಿಂದಲೇ ಅಪ್ರಾಪ್ತ ಸಹೋದರಿ ಮೇಲೆ ಅತ್ಯಾಚಾರ, ಆಕೆ ಈಗ ಗರ್ಭಿಣಿ
ಕ್ರೈಂ
ನಯನಾ ರಾಜೀವ್
|

Updated on: Oct 04, 2024 | 8:44 AM

Share

ಅಪ್ರಾಪ್ತ ಬಾಲಕನೊಬ್ಬ ತನ್ನ ಸಹೋದರಿ ಮೇಲೆ ಅತ್ಯಾಚಾರವೆಸಗಿದ್ದು, ಆಕೆ ಈಗ ಗರ್ಭಿಣಿ ಎನ್ನುವ ಮಾಹಿತಿ ಲಭ್ಯವಾಗಿದೆ. ಆತ 16 ವರ್ಷದವನಾಗಿದ್ದು, ತಂಗಿಗಿನ್ನು 13 ವರ್ಷ ವಯಸ್ಸು, ಗುಜರಾತ್​ನ ಸೂರತ್​ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ಹೊಟ್ಟೆ ನೋವು ಎಂದು ಹೇಳಿದ ಬಳಿಕ ಆಕೆಯ ತಾಯಿ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ವೈದ್ಯರು ಆಕೆಗೆ ಮೂರು ತಿಂಗಳಾಗಿರುವುದನ್ನು ದೃಢಪಡಿಸಿದ್ದಾರೆ.

ವಿಚಾರಣೆ ವೇಳೆ ಬಾಲಕಿ ತನ್ನ ತಾಯಿಗೆ ತನ್ನ ಅಣ್ಣ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಕೇಳಿದ್ದಾಗಿ ತಿಳಿಸಿದ್ದಾಳೆ. ಬಾಲಕಿ ನಿರಾಕರಿಸಿದಾಗ ಆತ ಆಕೆಯ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿ, ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಮತ್ತಷ್ಟು ಓದಿ: ಅಪಾರ್ಟ್​ಮೆಂಟ್​ಗೆ ದರೋಡೆಗೆಂದು ಬಂದವರಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಘಟನೆ ಬಳಿಕ ಬಾಲಕಿಯ ತಾಯಿ ಸೆ.30ರಂದು ಬಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪೋಲೀಸರ ಪ್ರಕಾರ, ಪೋಷಕರು ಕೂಲಿ ಕೆಲಸ ಮಾಡುತ್ತಿದ್ದರು ಮತ್ತು ಕೆಲಸಕ್ಕಾಗಿ ಪ್ರತಿದಿನ ಬೆಳಗ್ಗೆ ಮನೆಯಿಂದ ಹೊರಡುತ್ತಿದ್ದರು ಮತ್ತು ಅವರ ಇಬ್ಬರೂ ಮಕ್ಕಳು ಮನೆಯಲ್ಲಿ ಇರುತ್ತಿದ್ದರು.

8 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ, ಶಾಲೆಯಲ್ಲಿ ಹೊಟ್ಟೆ ನೋವೆಂದು ಒದ್ದಾಡಿದ್ದಳು, ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದರು. ಈ ವರ್ಷದ ಜುಲೈನಲ್ಲಿ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಮೊಬೈಲ್ ಫೋನ್‌ನಲ್ಲಿ ಅಶ್ಲೀಲತೆಯನ್ನು ವೀಕ್ಷಿಸಿದ ಒಂಬತ್ತು ವರ್ಷದ ಬಾಲಕಿಯನ್ನು ಆಕೆಯ 13 ವರ್ಷದ ಸಹೋದರ ಲೈಂಗಿಕ ಕಿರುಕುಳ ನೀಡಿ ಹತ್ಯೆಗೈದಿರುವ ಘಟನೆಯೂ ನಡೆದಿತ್ತು.

ಮಧ್ಯಪ್ರದೇಶ ಪೊಲೀಸರ ಪ್ರಕಾರ, ಘಟನೆಯ ನಂತರ, 17 ಮತ್ತು 18 ವರ್ಷ ವಯಸ್ಸಿನ ಹದಿಹರೆಯದ ತಾಯಿ ಮತ್ತು ಸಹೋದರಿಯರು ಘಟನೆ ಮುಚ್ಚಿಡಲು ಸಹಾಯ ಮಾಡಿದ್ದರು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತಿದೆ; ಶೇಖ್ ಹಸೀನಾ ಮಗ ಎಚ್ಚರಿಕೆ
ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತಿದೆ; ಶೇಖ್ ಹಸೀನಾ ಮಗ ಎಚ್ಚರಿಕೆ
‘ಬಾಸ್ ಸಿನಿಮಾ ರಿಲೀಸ್ ಮಾಡಲು ದರ್ಶನ್ ಒಪ್ಪಿದ್ದಾರೆ’: ತನುಷ್ ಶಿವಣ್ಣ
‘ಬಾಸ್ ಸಿನಿಮಾ ರಿಲೀಸ್ ಮಾಡಲು ದರ್ಶನ್ ಒಪ್ಪಿದ್ದಾರೆ’: ತನುಷ್ ಶಿವಣ್ಣ
ಬಸ್‌ನಲ್ಲಿದ್ದ ಪ್ರಯಾಣಿಕನಿಗೆ ಹೃದಯಾಘಾತ, ಜೀವ ಉಳಿಸಿದ ಚಾಲಕ
ಬಸ್‌ನಲ್ಲಿದ್ದ ಪ್ರಯಾಣಿಕನಿಗೆ ಹೃದಯಾಘಾತ, ಜೀವ ಉಳಿಸಿದ ಚಾಲಕ
ಅಸಮಾಧಾನಿತ ಹಿರಿಯ ಶಾಸಕನ ಮನವೊಲಿಕೆಗೆ ಅಖಾಡಕ್ಕಿಳಿದ ಹೈಕಮಾಂಡ್
ಅಸಮಾಧಾನಿತ ಹಿರಿಯ ಶಾಸಕನ ಮನವೊಲಿಕೆಗೆ ಅಖಾಡಕ್ಕಿಳಿದ ಹೈಕಮಾಂಡ್
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ