AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಾರ್ಟ್​ಮೆಂಟ್​ಗೆ ದರೋಡೆಗೆಂದು ಬಂದವರಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಅಪಾರ್ಟ್​ಮೆಂಟ್​ಗೆ ಬಂದಿದ್ದ ದರೋಡೆಕೋರರು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಅಪಾರ್ಟ್​ಮೆಂಟ್​ಗೆ ನುಗ್ಗಿದ್ದ ಕಳ್ಳರು, ಚಾಕು ತೋರಿಸಿ ಆಭರಣಗಳನ್ನು ದೋಚಿದ್ದಾರೆ, ಬಳಿಕ 27 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಅಪಾರ್ಟ್​ಮೆಂಟ್​ಗೆ ದರೋಡೆಗೆಂದು ಬಂದವರಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಅಪರಾಧImage Credit source: India Today
ನಯನಾ ರಾಜೀವ್
|

Updated on: Oct 02, 2024 | 2:43 PM

Share

ಅಪಾರ್ಟ್​ಮೆಂಟ್​ಗೆ ಬಂದಿದ್ದ ದರೋಡೆಕೋರರು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಅಪಾರ್ಟ್​ಮೆಂಟ್​ಗೆ ನುಗ್ಗಿದ್ದ ಕಳ್ಳರು, ಚಾಕು ತೋರಿಸಿ ಆಭರಣಗಳನ್ನು ದೋಚಿದ್ದಾರೆ, ಬಳಿಕ 27 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅಪರಾಧ ನಡೆದಿದೆ, ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಕಳ್ಳರು ಮೊದಲು ಆಕೆಯ ಆಭರಣಗಳು ಮತ್ತು ಮೊಬೈಲ್​ ಫೋನ್​ ಅನ್ನು ಚಾಕು ತೋರಿಸಿ ದೋಚಿದ್ದಾರೆ ನಂತರ ಸಹಾಯಕ್ಕಾಗಿ ಕಿರುಚಿದರೆ ಎರಡು ವರ್ಷದ ಮಗಳನ್ನು ಕೊಲ್ಲುವುದಾಗಿ ಬೆದರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಮಹಿಳೆ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, 10 ದಿನಗಳ ಹಿಂದೆಯಷ್ಟೇ ಫ್ಲಾಟ್‌ಗೆ ಶಿಫ್ಟ್​ ಆಗಿದ್ದಳು. ಮನೆಯನ್ನು ತಲುಪಲು ಕಳ್ಳರು ಬಿದಿರಿನ ಏಣಿಯನ್ನು ಬಳಸಿ ಕಟ್ಟಡವನ್ನು ಪ್ರವೇಶಿಸಿರಬಹುದು ಎಂದು ಅವರು ಶಂಕಿಸಿದ್ದಾರೆ.

ಅಪರಾಧಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ಯಾಚಾರ ಮತ್ತು ಲೂಟಿ ಪ್ರಕರಣ ದಾಖಲಾಗಿದೆ. ಕಟ್ಟಡದಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದ ಕಾರಣ ತನಿಖೆ ಕಷ್ಟಕರವಾಗಿದ್ದು, ಪೊಲೀಸರು ಸಮೀಪದ ಪ್ರದೇಶಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಮತ್ತೊಂದು ಘಟನೆ ಒಡಿಶಾದ ಸಂಬಲ್‌ಪುರದ ಪೋಕ್ಸೊ ನ್ಯಾಯಾಲಯವು 2022 ರಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ವ್ಯಕ್ತಿಗೆ ಮರಣದಂಡನೆ ವಿಧಿಸಿತು.

ಆ ವ್ಯಕ್ತಿ ಬಾಲಕಿಯನ್ನು ಹೊಲದಿಂದ ಅಪಹರಿಸಿ ಅತ್ಯಾಚಾರ ಎಸಗಿದ್ದ. ಬಳಿಕ ಬಾಲಕಿಯ ಶಿರಚ್ಛೇದ ಮಾಡಿ ಆಕೆಯ ತಲೆಯೊಂದಿಗೆ ಊರಿಗೆ ಮರಳಿದ್ದು, ಪತ್ನಿಯೊಂದಿಗೆ ಜಗಳವಾಡಿದ್ದು, ಕೃತ್ಯ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ