ಕಸ ಹರಡುವುದಲ್ಲ, ಸ್ವಚ್ಛತೆಯು ನಿತ್ಯದ ಕಾಯಕವಾಗಬೇಕು: ನರೇಂದ್ರ ಮೋದಿ
Swachh Bharat Mission: ಎಲ್ಲೆಂದರಲ್ಲಿ ಕಸ ಹರಡುವುದಲ್ಲ ಸ್ವಚ್ಛತೆ ಕೂಡ ನಿತ್ಯದ ಕಾಯಕವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ವಚ್ಛಭಾರತ ಅಭಿಯಾನ 10 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ನಾವು ನಿತ್ಯ ನಮ್ಮ ಪರಿಸರವನ್ನು ಒಂದಲ್ಲಾ ಒಂದು ರೀತಿಯಿಂದ ಹಾಳು ಮಾಡುತ್ತೇವೆ, ಆದರೆ ಪರಿಸರವನ್ನು ನಿತ್ಯ ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಪಣ ತೊಡಬೇಕು.
ಎಲ್ಲೆಂದರಲ್ಲಿ ಕಸ ಹರಡುವುದಲ್ಲ ಸ್ವಚ್ಛತೆ ಕೂಡ ನಿತ್ಯದ ಕಾಯಕವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ವಚ್ಛಭಾರತ ಅಭಿಯಾನ 10 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ನಾವು ನಿತ್ಯ ನಮ್ಮ ಪರಿಸರವನ್ನು ಒಂದಲ್ಲಾ ಒಂದು ರೀತಿಯಿಂದ ಹಾಳು ಮಾಡುತ್ತೇವೆ, ಆದರೆ ಪರಿಸರವನ್ನು ನಿತ್ಯ ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಪಣ ತೊಡಬೇಕು.
ಭಾರತ ಸರ್ಕಾರವು ದೇಶದ ಮೂಲೆ ಮೂಲೆಗೆ ಹೋಗಿ ಸ್ವಚ್ಛತೆಯ ಪಾಠ ಮಾಡಿ ಅಥವಾ ಸ್ಪರ್ಧೆ ನಡೆಸಲು ಸಾಧ್ಯವಿಲ್ಲ, ಅಲ್ಲಿಯ ಸ್ಥಳೀಯರು ಆಸ್ಪತ್ರೆಗಳು, ಶಾಲೆಗಳು, ಕಚೇರಿಗಳು, ಬಾವಿ, ನದಿಗಳನ್ನು ಶುಚಿಗೊಳಿಸುವುದು ಸೇರಿದಂತೆ ಸ್ವಚ್ಛತೆಗೆ ಸಂಬಂಧಿಸಿದಂತೆ ಸ್ಪರ್ಧೆ ಏರ್ಪಡಿಸಬೇಕು. ಆಗ ಪ್ರತಿಯೊಂದು ಬೀದಿ, ಪ್ರತಿಯೊಂದು ಹಳ್ಳಿಯೂ ಶುದ್ಧವಾಗಿರಲು ಸಾಧ್ಯ ಎಂದರು.
ಸ್ವಚ್ಛತೆಗೆ ಸಂಬಂಧಿಸಿದಂತೆ ನಿತ್ಯ ಸವಾಲುಗಳು ಹೆಚ್ಚಾಗುತ್ತಿವೆ, ಯೂಸ್ ಆ್ಯಂಡ್ ಥ್ರೋ ಉತ್ಪನ್ನಗಳು ಕೂಡ ಹೆಚ್ಚಾಗಿವೆ, ಇದರಿಂದ ಎಲೆಕ್ಟ್ರಾನಿಕ್ ವೇಸ್ಟ್ ಕೂಡ ಹೆಚ್ಚಾಗಲಿದ್ದು, ಅದರ ನಿರ್ವಹಣೆಗೆ ಯೋಜನೆ ರೂಪಿಸಲೇಬೇಕಿದೆ. ಇನ್ನು ನೀರಿನ ವಿಚಾರಕ್ಕೆ ಬಂದರೆ ನಮಾಮಿ ಗಂಎ ಅಭಿಯಾನದ ಮೂಲಕ ಗಂಗಾ ನದಿಯನ್ನು ಸ್ವಚ್ಛಗೊಳಿಸಲಾಗಿದೆ. ಅಮೃತ ಮಿಷನ್ ಅಡಿಯಲ್ಲಿ ಸಾಕಷ್ಟು ನದಿಗಳು ಶುಚಿಗೊಂಡಿವೆ. ನೀರಿನ ಬಳಕೆ ಕುರಿತು ಕೂಡ ಜನರಿಗೆ ಕಿವಿಮಾತು ಹೇಳಲೇಬೇಕಿದೆ.
ಮತ್ತಷ್ಟು ಓದಿ: ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ನೀವು ನಿಮ್ಮ ಮನೆ ನಿರ್ಮಾಣ ಮಾಡುವಾಗ ಬಳಕೆ ಮಾಡುವ ನೀರಿನ ಕುರಿತು ಎಚ್ಚರಿಕೆ ಇರಬೇಕು. ಹೆಚ್ಚಿನ ನೀರು ಪೋಲಾಗದಂತೆ ನೋಡಿಕೊಳ್ಳಬೇಕು.
As we mark #10YearsOfSwachhBharat, I salute the unwavering spirit of 140 crore Indians for making cleanliness a ‘Jan Andolan.’ Addressing a programme in Delhi.https://t.co/Y5AdvUDKW7
— Narendra Modi (@narendramodi) October 2, 2024
ಸ್ವಚ್ಛತಾ ಕಾರ್ಯ ಇಂದು ನಾಳೆಯದಲ್ಲ ಮುಂದಿನ ಪೀಳಿಗೆಗೂ ಅರಿವು ಮೂಡಿಸಿ ಯುಗಯುಗಗಳವರೆಗೆ ಇದು ಮುಂದುವರೆಯುವಂತೆ ನೋಡಿಕೊಳ್ಳಬೇಕು ಇದರಿಂದ ದೇಶವು ಬೇಗ ವಿಕಸಿತ ಭಾರತವಾಗಿ ನಿರ್ಮಾಣವಾಗಲು ಸಾಧ್ಯ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ