ಅಂತಾರಾಷ್ಟ್ರೀಯ ಅಮೆಜಾನ್ ಕಂಪನಿಗೆ ಹ್ಯಾಕರ್​ಗಳ ಕಂಟಕ: ಯಶವಂತಪುರ ಪೊಲೀಸರ ತನಿಖೆ ವೇಳೆ ಕಳ್ಳಾಟ ಬಯಲು

ವಿಶ್ವದ ದೈತ್ಯ ಆನ್​ಲೈನ್​ ಕಂಪನಿಗೆ ಹ್ಯಾಕರ್​​ಗಳು ಕಂಟಕವಾಗಿದ್ದಾರೆ. ಅತಿದೊಡ್ಡ ಅಂತರಾಷ್ಟ್ರೀಯ ಕಂಪನಿಯಾಗಿರುವ ಅಮೆಜಾನ್​​​ ಕಂಪನಿಯ ಅಕೌಂಟ್​​ ಅನ್ನು ಹ್ಯಾಕ್​ ಮಾಡಿ ಹ್ಯಾಕರ್​​​ಗಳು ಲಕ್ಷ ಲಕ್ಷ ರೂಪಾಯಿ ಹಣ ವಂಚಿಸಿದ್ದಾರೆ. ಈ ಹ್ಯಾಕರ್​​ಗಳ ದೊಡ್ಡ ಜಾಲವೇ ಇದ್ದು, ಅಮೆಜಾನ್​ ಕಂಪನಿಗೆ ತಲೆನೋವಾಗಿ ಪರಿಣಮಿಸಿದೆ.

ಅಂತಾರಾಷ್ಟ್ರೀಯ ಅಮೆಜಾನ್ ಕಂಪನಿಗೆ ಹ್ಯಾಕರ್​ಗಳ ಕಂಟಕ: ಯಶವಂತಪುರ ಪೊಲೀಸರ ತನಿಖೆ ವೇಳೆ ಕಳ್ಳಾಟ ಬಯಲು
ಸಾಂದರ್ಭಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Aug 18, 2023 | 12:32 PM

ಬೆಂಗಳೂರು: ವಿಶ್ವದ ದೈತ್ಯ ಆನ್​ಲೈನ್ (Online)​ ಕಂಪನಿಗೆ ಹ್ಯಾಕರ್​​ಗಳು (Hackers) ಕಂಟಕವಾಗಿದ್ದಾರೆ. ಅತಿದೊಡ್ಡ ಅಂತರಾಷ್ಟ್ರೀಯ ಕಂಪನಿಯಾಗಿರುವ ಅಮೆಜಾನ್​ (Amazon)​​ ಕಂಪನಿಯ ಅಕೌಂಟ್​​ ಅನ್ನು ಹ್ಯಾಕ್​ ಮಾಡಿ ಹ್ಯಾಕರ್​​​ಗಳು ಲಕ್ಷ ಲಕ್ಷ ರೂಪಾಯಿ ಹಣ ವಂಚಿಸಿದ್ದಾರೆ. ಈ ಹ್ಯಾಕರ್​​ಗಳ ದೊಡ್ಡ ಜಾಲವೇ ಇದ್ದು, ಅಮೆಜಾನ್​ ಕಂಪನಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹ್ಯಾಕರ್​​​ಗಳು ವಿದೇಶದಲ್ಲಿದ್ದುಕೊಂಡು ಬೆಂಗಳೂರು, ಹೈದ್ರಾಬಾದ್, ಚೆನ್ನೈ, ಮುಂಬೈ, ದೆಹಲಿ ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿನ ಇಂಜಿನಿಯರಿಂಗ್​ ವಿದ್ಯಾರ್ಥಿಗಳನ್ನು ತಮ್ಮ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಹ್ಯಾಕರ್​ಗಳು ಈ ವಿದ್ಯಾರ್ಥಿಗಳನ್ನು ಟೆಲಿಗ್ರಾಂ ಮೂಲಕವೇ ಸಂಪರ್ಕಿಸಿ ನಂತರ ಗ್ರೂಪ್ ಕ್ರಿಯೇಟ್ ಮಾಡಿ ಅದರಲ್ಲಿ ವಿದ್ಯಾರ್ಥಿಗಳಿಗೆ ಖಾಸಗಿ ಕಂಪನಿಗಳನ್ನು ಟಾರ್ಗೆಟ್ ಮಾಡುವಂತೆ ಟಾಸ್ಕ್ ನೀಡುತ್ತಾರೆ. ಕೆಲಸವಾದ ಬಳಿಕ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಅಕೌಂಟ್ ಮೂಲಕವೇ ಹಣ ವರ್ಗಾಯಿಸಿಕೊಳ್ಳುತ್ತಾರೆ. ಹ್ಯಾಕರ್​ಗಳು ಇದೀಗ ಅಮೆಜಾನ್​​​ ನಂತಹ ದೊಡ್ಡ ಕಂಪನಿಯನ್ನ ಟಾರ್ಗೆಟ್​ ಮಾಡಿ ಕಂಪನಿಗೆ ಲಕ್ಷ ಲಕ್ಷ ರೂ. ವಂಚಿಸಿದ್ದಾರೆ.

ಇದನ್ನೂ ಓದಿ: ವಿದೇಶಿ ಉಡುಗೊರೆ ಹಗರಣ: ಫೇಸ್ ಬುಕ್ ಸ್ನೇಹಿತರಿಂದ ಬೆಂಗಳೂರಿನ ವ್ಯಕ್ತಿಗೆ 5 ಲಕ್ಷ ರೂ ವಂಚನೆ

ಈ ಸಂಬಂಧ ದೇಶದ 25ಕ್ಕೂ ಹೆಚ್ಚು ಪೊಲೀಸ್​​ ಠಾಣೆಗಳಲ್ಲಿ ಅಮೆಜಾನ್ ಕಂಪನಿಯ ಅಧಿಕಾರಿಗಳು ದೂರು ನೀಡಿದ್ದಾರೆ. ಆದರೆ ಆರೋಪಿಗಳನ್ನು ಪತ್ತೆ ಮಾಡಿದ್ದು ಮಾತ್ರ ಯಶವಂತಪುರ ಠಾಣೆ ಪೊಲೀಸರು. ಸದ್ಯ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ 13 ಜನರನ್ನು ಪತ್ತೆ ಮಾಡಿದ್ದು, ಬೆಂಗಳೂರಿನಲ್ಲೇ ನಾಲ್ಕೈದು ತಂಡ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:39 am, Fri, 18 August 23

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us