ಸೋದರರ ಗಾಂಜಾ ಮಾರಾಟ ಜಾಲ: HAL ಪೊಲೀಸರಿಂದ ಆರೋಪಿ ಅರೆಸ್ಟ್

|

Updated on: Nov 25, 2019 | 5:29 PM

ಬೆಂಗಳೂರು: ರಾಜಧಾನಿಯಲ್ಲಿ ಗಾಂಜಾ ಮಾರಾಟಗಾರ ಹಾವಳಿ ಹೆಚ್ಚಾಗಿದ್ದು, ಅಂತರ್ ರಾಜ್ಯ ಗಾಂಜಾ ಮಾರಾಟಗಾರನೊಬ್ಬನನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ಮುನಾವರ್ ಪಾಷಾ ಬಂಧಿತ ಆರೋಪಿ. ಎಲ್.ಬಿ.ಎಸ್ ನಗರದ ಇಸ್ಲಾಂಪುರ ಖಾಲಿ ಜಾಗದಲ್ಲಿ ಈತ ಗಾಂಜಾ ಮಾರಾಟ ಮಾಡುತ್ತಿದ್ದ. ಆರೋಪಿಯು ವಿಶಾಖಪಟ್ಟಣ ಬಳಿ ಚಾಪರಾಯಿ ಫಾಲ್ಸ್ ಭಾಗದಿಂದ ಗಾಂಜಾ ಖರೀದಿಸುತ್ತಿದ್ದ. 5 ಸಾವಿರ ರೂಪಾಯಿಗೆ ಗಾಂಜಾ ತಂದು 15-20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಬಂಧಿತ ಆರೋಪಿಯಿಂದ 2ಕೆ.ಜಿ. 100 ಗ್ರಾಂ ತೂಕದ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. […]

ಸೋದರರ ಗಾಂಜಾ ಮಾರಾಟ ಜಾಲ: HAL ಪೊಲೀಸರಿಂದ ಆರೋಪಿ ಅರೆಸ್ಟ್
Follow us on

ಬೆಂಗಳೂರು: ರಾಜಧಾನಿಯಲ್ಲಿ ಗಾಂಜಾ ಮಾರಾಟಗಾರ ಹಾವಳಿ ಹೆಚ್ಚಾಗಿದ್ದು, ಅಂತರ್ ರಾಜ್ಯ ಗಾಂಜಾ ಮಾರಾಟಗಾರನೊಬ್ಬನನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ಮುನಾವರ್ ಪಾಷಾ ಬಂಧಿತ ಆರೋಪಿ.

ಎಲ್.ಬಿ.ಎಸ್ ನಗರದ ಇಸ್ಲಾಂಪುರ ಖಾಲಿ ಜಾಗದಲ್ಲಿ ಈತ ಗಾಂಜಾ ಮಾರಾಟ ಮಾಡುತ್ತಿದ್ದ. ಆರೋಪಿಯು ವಿಶಾಖಪಟ್ಟಣ ಬಳಿ ಚಾಪರಾಯಿ ಫಾಲ್ಸ್ ಭಾಗದಿಂದ ಗಾಂಜಾ ಖರೀದಿಸುತ್ತಿದ್ದ. 5 ಸಾವಿರ ರೂಪಾಯಿಗೆ ಗಾಂಜಾ ತಂದು 15-20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಬಂಧಿತ ಆರೋಪಿಯಿಂದ 2ಕೆ.ಜಿ. 100 ಗ್ರಾಂ ತೂಕದ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಸಹೋದರ ಮುಬಾರಕ್ ಪಾಷಾ ಕೂಡ ಗಾಂಜಾ ಮಾರಾಟ ಪ್ರಕರಣದಲ್ಲಿ‌ ಜೈಲು ಪಾಲಾಗಿದ್ದ. ಕೆ.ಜಿ ಹಳ್ಳಿ ಠಾಣೆ ಪೊಲೀಸರು ಇತ್ತೀಚೆಗಷ್ಟೆ ಬಂಧಿಸಿದ್ದರು. ಅಪಾರ ಪ್ರಮಾಣದ ಗಾಂಜಾ ಹಾಗೂ 2 ಕಂಟ್ರಿಮೇಡ್ ಪಿಸ್ತೂಲ್ ವಶಪಡಿಸಿಕೊಂಡಿದ್ದರು.