Haryana Crime: ಪ್ರಿಯಕರನೊಂದಿಗೆ ಮದುವೆಯಾಗಲು ಕೆನಡಾದಿಂದ ಭಾರತಕ್ಕೆ ಬಂದಿದ್ದ ಯುವತಿಯ ಬರ್ಬರ ಹತ್ಯೆ

|

Updated on: Apr 06, 2023 | 8:31 AM

ಪ್ರೀತಿ ಎಂಬುದೇ ಹಾಗೆ ಒಂದು ರೀತಿಯ ಮಾಯೆ ಎಲ್ಲೋ ಇದ್ದವರನ್ನು ಒಂದು ಮಾಡುವ ಶಕ್ತಿ ಅದಕ್ಕಿದೆ. ಪ್ರಿಯಕರನನ್ನು ನಂಬಿ ಮದುವೆಯಾಗಲು ಕೆನಡಾದಿಂದ ಭಾರತಕ್ಕೆ ಬಂದಿದ್ದ ಯುವತಿ ಕೊಲೆಯಾಗಿದ್ದಾಳೆ.

Haryana Crime: ಪ್ರಿಯಕರನೊಂದಿಗೆ ಮದುವೆಯಾಗಲು ಕೆನಡಾದಿಂದ ಭಾರತಕ್ಕೆ ಬಂದಿದ್ದ ಯುವತಿಯ ಬರ್ಬರ ಹತ್ಯೆ
ಸಾವು
Image Credit source: The Statesman
Follow us on

ಪ್ರೀತಿ ಎಂಬುದೇ ಹಾಗೆ ಒಂದು ರೀತಿಯ ಮಾಯೆ ಎಲ್ಲೋ ಇದ್ದವರನ್ನು ಒಂದು ಮಾಡುವ ಶಕ್ತಿ ಅದಕ್ಕಿದೆ. ಆದರೆ ಆ ಪ್ರೀತಿಯೇ ಜೀವಕ್ಕೆ ಕುತ್ತು ತಂದಿರುವ ಘಟನೆ ಇದು. ಪ್ರಿಯಕರನನ್ನು ನಂಬಿ ಮದುವೆಯಾಗಲು ಕೆನಡಾದಿಂದ ಭಾರತಕ್ಕೆ ಬಂದಿದ್ದ ಯುವತಿ ಕೊಲೆಯಾಗಿದ್ದಾಳೆ. ತನ್ನ ಪ್ರಿಯಕರನೊಂದಿಗೆ ಇರಲು ಕೆನಡಾದಿಂದ ಭಾರತಕ್ಕೆ ಮರಳಿದ ನಂತರ ಯುವತಿಯೊಬ್ಬಳು ಕಾಣೆಯಾಗಿದ್ದಳು ಬಳಿಕ ಹರ್ಯಾಣದ ಹೊಲವೊಂದರಲ್ಲಿ ಶವ ಪತ್ತೆಯಾಗಿತ್ತು. ಕಳೆದ ವರ್ಷ ಜೂನ್‌ನಲ್ಲಿ 23 ವರ್ಷದ ನೀಲಂ ಎಂಬಾಕೆಯನ್ನು ಆಕೆಯ ಗೆಳೆಯ ಸುನಿಲ್ ಗುಂಡಿಟ್ಟು ಕೊಂದಿದ್ದು, ನಂತರ ಆಕೆಯನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದ.

ಆಕೆಯ ಅಸ್ಥಿಪಂಜರದ ಅವಶೇಷಗಳು ಮಂಗಳವಾರ ಭಿವಾನಿಯಲ್ಲಿ ಪೊಲೀಸರಿಗೆ ಪತ್ತೆಯಾಗಿವೆ. ನೀಲಂ ಅವರನ್ನು ಅಪಹರಿಸಿ ಕೊಂದಿರುವುದಾಗಿ ಸುನೀಲ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಅಪರಾಧವನ್ನು ಮರೆಮಾಚಲು ಆಕೆಯ ತಲೆಗೆ ಎರಡು ಬಾರಿ ಗುಂಡು ಹಾರಿಸಿ ನಂತರ ಶವವನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸ್ ಅಧಿಕಾರಿ ರವೀಂದ್ರ ಹೇಳಿದ್ದಾರೆ.

ಕಳೆದ ಜೂನ್‌ನಲ್ಲಿ ನೀಲಂ ಸಹೋದರಿ ರೋಶನಿ ಪೊಲೀಸರಿಗೆ ದೂರು ನೀಡಿದ್ದರು. ಆಕೆಯ ಸಹೋದರಿ ತನ್ನ ಇಂಟರ್ನ್ಯಾಷನಲ್ ಇಂಗ್ಲೀಷ್ ಲ್ಯಾಂಗ್ವೇಜ್ ಟೆಸ್ಟಿಂಗ್ ಸಿಸ್ಟಮ್ (ಐಇಎಲ್ಟಿಎಸ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾಳೆ ಮತ್ತು ಕೆಲಸಕ್ಕಾಗಿ ಕೆನಡಾಕ್ಕೆ ತೆರಳಿದ್ದಾಳೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ವಿಧವೆಯೊಬ್ಬಳ ಜತೆ ಪೊಲೀಸಪ್ಪನ ಲವ್ವಿಡವ್ವಿ: 3 ಬಾರಿ ಗರ್ಭಪಾತ, ವಿಧವೆ ಪಾಲಿಗೆ ರಾಕ್ಷಸನಾದ ಆರಕ್ಷಕನ ಕಥೆ

ಕಳೆದ ವರ್ಷ ಜನವರಿಯಲ್ಲಿ ಸುನೀಲ್ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಭಾರತಕ್ಕೆ ವಾಪಸ್ ಕರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸುನಿಲ್ ಕೂಡ ನಾಪತ್ತೆಯಾಗಿದ್ದ ಎಂದು ನೀಲಂ ಕುಟುಂಬ ಹೇಳಿದೆ. ದೂರಿನ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

ನೀಲಂಗಾಗಿ ಹುಡುಕಾಟ ನಡೆಸಿದ ನಂತರ, ಕುಟುಂಬವು ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಅವರನ್ನು ಭೇಟಿಯಾಗಿ ಕ್ರಮಕ್ಕೆ ಒತ್ತಾಯಿಸಿತು. ನಂತರ ಪ್ರಕರಣವನ್ನು ಭಿವಾನಿಯಲ್ಲಿರುವ ಅಪರಾಧ ತನಿಖಾ ಸಂಸ್ಥೆಗೆ ವರ್ಗಾಯಿಸಲಾಯಿತು. ಘಟಕ ಸುನೀಲ್ ನನ್ನು ಬಂಧಿಸಿದೆ. ಮೃತದೇಹವನ್ನು ಸೋನಿಪತ್ ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಸುನಿಲ್‌ಗೆ ಕೊಲೆ ಮತ್ತು ಅಕ್ರಮ ಪಿಸ್ತೂಲ್ ಹೊಂದಿದ್ದ ಅರ್ಧ ಡಜನ್‌ಗೂ ಹೆಚ್ಚು ಪ್ರಕರಣಗಳು ಸೇರಿದಂತೆ ಅಪರಾಧದ ಇತಿಹಾಸವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:30 am, Thu, 6 April 23