ಬೆಂಗಳೂರು: ನಗರದಲ್ಲಿ ಆ್ಯಂಟಿ ನಾರ್ಕೋಟಿಕ್ ವಿಂಗ್ ಬೃಹತ್ ಕಾರ್ಯಾಚಾರಣೆ ನಡೆಸಿ 2,161 ಹ್ಯಾಶಿಶ್ ಆಯಿಲ್ ಮತ್ತು 2 ಕೆ.ಜಿ. ಗಾಂಜಾ ಜಪ್ತಿ ಮಾಡಿದೆ. ಜೊತೆಗೆ, ಆರೋಪಿಗಳಾದ ಸುಬ್ರಮಣಿ, ವಿದುಸ್ ಮತ್ತು ಶೆಜಿನ್ ಬಂಧನ ಸಹ ಮಾಡಿದ್ದಾರೆ.
ಬಂಧಿತರಿಂದ 44 ಲಕ್ಷ ರೂಪಾಯಿ ಮೌಲ್ಯದ ಹ್ಯಾಶಿಶ್ ಆಯಿಲ್ ಸಹ ವಶಕ್ಕೆ ಪಡೆಯಲಾಗಿದೆ. ಎರಡನೇ ಆರೋಪಿ ವಿದುಸ್ ಲಂಡನ್ನ ಫೋರ್ಡ್ ಶೈರ್ನಲ್ಲಿ MSc ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಗಳು KR ಪುರದ ಗಾರ್ಡನ್ ಸಿಟಿ ಕಾಲೇಜು ಸುತ್ತಮುತ್ತ ಹ್ಯಾಶಿಶ್ ಆಯಿಲ್ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲವು ಶಾಲಾ ಕಾಲೇಜುಗಳ ವಿರುದ್ಧ ಹ್ಯಾಶಿಶ್ ಆಯಿಲ್ ಮಾರಾಟದ ಆರೋಪವು ಕೇಳಿಬರುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ಕೇರಳದವರು ಹ್ಯಾಶಿಶ್ ಆಯಿಲ್ ಮಾರುತ್ತಿದ್ದು ನಿಮ್ಮ ವಿದ್ಯಾರ್ಥಿಗಳು ಇಂತಹ ಕೇಸ್ಗಳಲ್ಲಿ ಭಾಗಿಯಾದರೆ ಶಾಲಾ ಕಾಲೇಜುಗಳ ಮುಖ್ಯಸ್ಥರು ನಮ್ಮ ಗಮನಕ್ಕೆ ತರಬೇಕು ಎಂದು ಪಂತ್ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ನಾವು ಕ್ರಮಕೈಗೊಳ್ಳುತ್ತೇವೆಂದು ಎಚ್ಚರಿಕೆ ಸಹ ನೀಡಿದ್ದಾರೆ. ಜೊತೆಗೆ, ವಿದ್ಯಾರ್ಥಿಗಳ ಮೇಲೆ ನೀವು ನಿಗಾವಹಿಸಬೇಕೆಂದು ಆಯುಕ್ತರು ಸೂಚನೆ ನೀಡಿದ್ದಾರೆ.
CCB drive against drugs continues with arrest of 3 Drug Peddlers by Anti Narcotics Wing..seized Hash and Cannabis drugs worth 40 lakhs.. further investigation on.. pic.twitter.com/jJ9LHpuGRG
— Sandeep Patil IPS (@ips_patil) September 5, 2020