ಹಲವೆಡೆ ನಿನ್ನೆ ರಾತ್ರಿ ಸುರಿದ ಭಾರೀ ಮಳಯಿಂದ ಜನ ಜೀವನ ಅಸ್ಥವ್ಯಸ್ಥ; ಸಿಡಿಲು ಬಡಿದು ಕರು ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Apr 22, 2022 | 4:43 PM

ನಿನ್ನೆ ರಾತ್ರಿ ವೇಳೆ ಮಳೆ ಸುರಿಯುತ್ತಿದ್ದಾಗ ಸಿಡಿಲು ಬಡಿದು ಎರಡು ಹಸು ಹಾಗೂ ಒಂದು ಕರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಹಾಪುರ‌ ತಾಲೂಕಿನ ಗುಂಡಳ್ಳಿ ತಾಂಡದಲ್ಲಿ ನಡೆದಿದೆ.

ಹಲವೆಡೆ ನಿನ್ನೆ ರಾತ್ರಿ ಸುರಿದ ಭಾರೀ ಮಳಯಿಂದ ಜನ ಜೀವನ ಅಸ್ಥವ್ಯಸ್ಥ; ಸಿಡಿಲು ಬಡಿದು ಕರು ಸಾವು
ಸಿಡಿಲು ಬಡಿದು ಎರಡು ಹಸು ಹಾಗೂ ಒಂದು ಕರು ಸಾವು
Follow us on

ದಾವಣಗೆರೆ: ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರೀ ಮಳೆ (Heavy Rain) ಯಿಂದ ಜನ ಜೀವನ ಅಸ್ಥವ್ಯಸ್ಥವಾಗಿದ್ದು, ಮಳೆಯ ರಭಸಕ್ಕೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಮಳೆಯ ಹೊಡೆತಕ್ಕೆ ಜನ ಕಂಗಾಲಾಗಿದ್ದಾರೆ. ನೀರು ಹರಿಯುವಿಕೆ ನಡುವೆ ಕೆಲ ಜನರ ಹುಚ್ಚು ಸಹಾಸ ಮಾಡುತ್ತಿದ್ದಾರೆ. ಶಾಲಾ ವಾಹನ ಹಾಗೂ ಬೈಕ್ ಚಲಾಯಿಸುವ ಹುಚ್ಚು ಸಾಹಸಕ್ಕೆ ಜ‌ನ ಮುಂದಾಗಿದ್ದಾರೆ. ರಸ್ತೆಯಲ್ಲಿ ನೀರು ನಿಂತ ಪರಿಣಾಮ ಸಂಚಾರಕ್ಕೆ ಅಡ್ಡಿಯಾಗಿದೆ. 15KM ಸುತ್ತಾಡಿಕೊಂಡು ಪರ್ಯಾಯ ಮಾರ್ಗದಿಂದ ಜನರ ಪ್ರಯಾಣ ಮಾಡುವಂತ್ತಾಗಿದೆ. ಹತ್ತಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಚಾರ ಸ್ಥಗಿತವಾಗಿದ್ದು, ಗ್ರಾಮಕ್ಕೊಂದು ಸೇತುವೆ ನಿರ್ಮಿಸಿ ಎಂದು ಜನರು ದುಂಬಾಲು ಬಿದಿದ್ದಾರೆ. ಸಾಕಷ್ಟು ಬಾರಿ ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿದರು, ಜನರ ಮನವಿಗೆ ಶಾಸಕರ ಡೊಂಟ್ ಕೇರ್ ಎಂದಿದ್ದಾರೆ. ಶಾಸಕರ ವರ್ತನೆಯಿಂದ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.

ಬಿರುಗಾಳಿ ಸಹಿತ ಮಳೆ ಹಿನ್ನೆಲೆ ಬಾಳೆ ಬೆಳೆ ನಾಶ:

ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ 2 ದಿನದಿಂದ ಬಿರುಗಾಳಿ ಸಹಿತ ಮಳೆ ಹಿನ್ನೆಲೆ ಹಿರಿಯೂರು ಸೇರಿ ವಿವಿದೆಡೆ ಬಾಳೆ ಬೆಳೆ ಹಾನಿಯಾಗಿದೆ. ಬಬ್ಬೂರು ಗ್ರಾಮದ ಬಳಿ ಯಶೋಧರ ಎಂಬುವವರಿಗೆ ಸೇರಿದ್ದ ಸುಮಾರು ನಾಲ್ಕು ಎಕರೆಯಷ್ಟು ಬಾಳೆ ಬೆಳೆ ಹಾನಿಯಾಗಿದೆ. ಬಿರುಗಾಳಿಗೆ ಜಿಲ್ಲೆಯಲ್ಲಿ 44ಹೆಕ್ಟೇರ್ ಬಾಳೆ ಬೆಳೆ ಹಾನಿಯಾಗಿದೆ.

ಬೃಹತ್ ಗಾತ್ರದ ಮರ ಬಿದ್ದು ಐತಿಹಾಸಿಕ ದೇವಸ್ಥಾನ ಧ್ವಂಸ;

ಕೊಡಗು: ಬೃಹತ್ ಗಾತ್ರದ ಮರ ಬಿದ್ದು ಐತಿಹಾಸಿಕ ದೇವಸ್ಥಾನ ಧ್ವಂಸವಾಗಿರುವಂತಹ ಘಟನೆ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅರಮೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪನ್ನಂಗಾಲತ್ತಮ್ಮೆ ದೇವಸ್ಥಾನದ ಮೇಲೆ ಬಿದ್ದ ಭಾರೀ ಮರ ಬಿದಿದ್ದು, ದೇವಸ್ಥಾನದ ಗರ್ಭಗುಡಿಗೆ ಗಂಭೀರ ಹಾನಿಯಾಗಿದೆ. ಮಳೆ ಗಾಳಿ ಇಲ್ಲದೇ ಇದ್ದರೂ ಹಸಿ ಮರ ಉರುಳಿ ಬಿದ್ದಿದೆ. ಪ್ರಕೃತಿಯ ಆಟಕ್ಕೆ ಗ್ರಾಮಸ್ಥರು ಬೆಚ್ಚಿಬಿದಿದ್ದಾರೆ.

ಸಿಡಿಲು ಬಡಿದು ಎರಡು ಹಸು ಹಾಗೂ ಒಂದು ಕರು ಸಾವು:

ಯಾದಗಿರಿ: ನಿನ್ನೆ ರಾತ್ರಿ ವೇಳೆ ಮಳೆ ಸುರಿಯುತ್ತಿದ್ದಾಗ ಸಿಡಿಲು ಬಡಿದು ಎರಡು ಹಸು ಹಾಗೂ ಒಂದು ಕರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಹಾಪುರ‌ ತಾಲೂಕಿನ ಗುಂಡಳ್ಳಿ ತಾಂಡದಲ್ಲಿ ನಡೆದಿದೆ. ನಿನ್ನೆ ರಾತ್ರಿ ಮನೆ ಮುಂದೆ ಕಟ್ಟಿದಾಗ ಘಟನೆ ಸಂಭವಿಸಿದ್ದು, ಶಾಂತಿಬಾಯಿ ಎಂಬ ರೈತ ಮಹಿಳೆಗೆ ಹಸುಗಳು ಸೇರಿವೆ. ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ;

ಸರಕಾರ ಪೊಲೀಸರ ಮೂಲಕ ನನ್ನ ಹೆದರಿಸುವ ತಂತ್ರ ಮಾಡ್ತಿದೆ; ನನ್ನ ಕಟ್ಟಿಹಾಕುವ ಪ್ರಯತ್ನ ಮಾಡಲಾಗ್ತಿದೆ – ದಿಂಗಾಲೇಶ್ವರ ಶ್ರೀ

ತಮಿಳುನಾಡಿಗೆ ಹೊರಟಿದ್ದೀರಾ?; ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ತೆರಬೇಕಾದೀತು ಎಚ್ಚರ!

Published On - 4:28 pm, Fri, 22 April 22