ತುಮಕೂರು: ಈಜಲು (Swim) ತೆರಳಿದ್ದ ಮೂವರು ಬಾಲಕರು ನೀರುಪಾಲಾಗಿರುವಂತಹ ಘಟನೆ ತಾಲೂಕಿನ ತಿಮ್ಮಲಾಪುರದಲ್ಲಿ ಕೆರೆಯಲ್ಲಿ ನಡೆದಿದೆ. ಭರತ್ (12) ಆನಂದ್ (10) ವಿಶ್ವಾಸ್ (11) ಮೃತ ದುರ್ದೈವಿಗಳು. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ
ಚಿತ್ರದುರ್ಗ: ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಯಾ ಕಾರ್, ಬುಲೆಟ್ ಬೈಕ್ ಮತ್ತು ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿರುವಂತಹ ಘಟನೆ ಜಿಲ್ಲೆಯ ಹಿರಿಯೂರು ಪಟ್ಟಣ ರಾ.ಹೆ 4ರ ಬಳಿ ನಡೆದಿದೆ. ಕಿಯಾ ಕಾರ್ ಡಿಕ್ಕಿಯಿಂದ ಲಾರಿ ಕೆಳಗೆ ಬುಲೆಟ್ ಬೈಕ್ ನುಗ್ಗಿ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಪೇಪರ್ ಸಾಗಿಸುತ್ತಿದ್ದ ತಮಿಳುನಾಡು ಮೂಲದ ಲಾರಿ ಬೆಂಕಿಗಾಹುತಿಯಾಗಿದ್ದು, ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ. ಬುಲೆಟ್ ಬೈಕ್ನಲ್ಲಿದ್ದ ಓರ್ವನಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಪಲ್ಟಿ
ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಪಲ್ಟಿಯಾಗಿರುವಂತಹ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟನಲ್ಲಿ ನಡೆದಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಟ್ಯಾಂಕರ್ ಚಲಿಸುತ್ತಿತ್ತು. ಹೆದ್ದಾರಿಯಲ್ಲಿ ಹಾಲು ಸೋರಿಕೆಯಾಗಿದ್ದು, ಸೋರಿಕೆಯಾದ ಹಾಲನ್ನು ಸ್ಥಳೀಯರು ತುಂಬಿಕೊಂಡು ಹೋಗುತ್ತಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ಬಾಲಕ ಸಾವು:
ವಿಜಯನಗರ: ಭಾರಿ ಗಾಳಿ ಮಳೆ ಹಿನ್ನಲೆ. ಸಿಡಿಲು ಬಡಿದು ಬಾಲಕ ಸಾವನ್ನಪ್ಪಿರುವಂತಹ ಘಟನೆ ಹಗರಿಬೊಮ್ಮನಹಳ್ಳಿ ಪಟ್ಟಣದ ಚಿಂತ್ರಪಳ್ಳಿಯಲ್ಲಿ ನಡೆದಿದೆ. 5ನೇ ತರಗತಿ ವಿದ್ಯಾರ್ಥಿ ಸಿ.ನಾಗರಾಜ್ ಮೃತ ದುದೈವಿ. ಮನೆಯ ಹೊರಗಡೆ ಆಟವಾಡುತ್ತಿದ್ದ ವೇಳೆ ಬಡಿದ ಸಿಡಿಲು ಮೃತಪಟ್ಟಿದ್ದಾನೆ. ಹಗರಿಬೊಮ್ಮನಹಳ್ಳಿಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಮತ್ತು ಒಮ್ನಿ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
ಮಂಗಳೂರು: ಬಸ್ ಮತ್ತು ಒಮ್ನಿ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವನಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಮುಲ್ಕಿ ಸಮೀಪದ ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಕಾರು ಚಾಲಕ ಭುಜಂಗ(58), ವಸಂತ ಕುಂದರ್ ಮೃತ ದುರ್ದೈವಿಗಳು. ಮಂಗಳೂರಿನಿಂದ ಉಡುಪಿ ಕಡೆ ಬಸ್ ತೆರಳುತ್ತಿದ್ದು ರಾಂಗ್ ಸೈಡ್ನಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಲು ಓಮ್ನಿ ಕಾರು ಯತ್ನಿಸಿದೆ. ಒಮ್ನಿ ಕಾರ್ ಚಾಲಕನ ನಿರ್ಲ್ಯಕ್ಷ್ಯದಿಂದ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಅಪಘಾತದ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:
ವಿದೇಶಿ ಪಿತೂರಿ ನಡೆದಿಲ್ಲ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪ ತಳ್ಳಿದ ಪಾಕಿಸ್ತಾನ
Gold-Silver Rate: ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ 22ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ