ಮಗಳು ಪ್ರೀತಿ(Love)ಮಾಡುವುದು ಇಷ್ಟವಿಲ್ಲದೆ ಆಕೆಯ ಕುಟುಂಬಸ್ಥರು ಪ್ರೇಮಿಗಳಿಬ್ಬರನ್ನೂ ಕೊಂದು ದೇಹಕ್ಕೆ ಕಲ್ಲುಕಟ್ಟಿ ನದಿಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ರತನ್ಬಸಾಯ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ, ಶಿವಾನಿ ತೋಮರ್ ರಾಧೆಶ್ಯಾಮ್ ತೋಮರ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆತ ಪಕ್ಕದ ಪೊರೆನಾ ಜಿಲ್ಲೆಯ ಬಾಲುಪುರದವನು. ಈ ಯುವಕನನ್ನು ಪ್ರೀತಿಸುವ ಕುರಿತು ಪೋಷಕರು ವಿರೋಧ ವ್ಯಕ್ತಪಡಿಸಿದ್ದರು.
ಬಳಿಕ ಇಬ್ಬರೂ ಕಾಣೆಯಾಗಿದ್ದರು, ಹುಡುಗನ ತಂದೆ ಪ್ರಕರಣ ದಾಖಲಿಸಿದ್ದರು, ಕಳೆದ ಕೆಲವು ದಿನಗಳಿಂದ ಇಬ್ಬರೂ ಕಾಣೆಯಾಗಿದ್ದಾರೆ ಅವರನ್ನು ಹತ್ಯೆ ಮಾಡಿರಬಹುದು ಎನ್ನುವ ಸಂದೇಹವಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಮತ್ತಷ್ಟು ಓದಿ: Bihar Crime: ಬಿಹಾರದಲ್ಲೊಂದು ಮರ್ಯಾದಾ ಹತ್ಯೆ: ಪ್ರೀತಿ ವಿಷಯ ತಿಳಿದು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನೇ ಹತ್ಯೆ ಮಾಡಿದ ದಂಪತಿ
ಮೊದ ಮೊದಲು ಪೊಲೀಸರು ಅವರಿಬ್ಬರು ಓಡಿ ಹೋಗಿರಬಹುದು ಎಂದುಕೊಂಡಿದ್ದರು. ಆದರೆ ಅವರಿಬ್ಬರು ಹೋಗಿರುವುದಾಗಲಿ, ಇಬ್ಬರು ಎಲ್ಲಿದ್ದಾರೆ ಎಂಬುದಾಗಲಿ ಊರಿನ ಒಬ್ಬರಿಗೂ ತಿಳಿದಿರಲಿಲ್ಲ. ಬಳಿಕ ಯುವತಿಯ ತಂದೆಯನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ, ಬಳಿಕ ಯುವತಿ ತಂದೆ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಜೂನ್ 3ರಂದು ಶಿವಾನಿ ಹಾಗೂ ರಾಧೆಶ್ಯಾಮ್ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು, ಬಳಿಕ ದೇಹಕ್ಕೆ ಕಲ್ಲು ಕಟ್ಟಿ, ಮೊಸಳೆಗಳಿರುವ ಚಂಬಲ್ ನದಿಯಲ್ಲಿ ಎಸೆಯಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ